ವಸುಂಧರಾ ಪ್ರಧಾನಿ ಆದಾಗ, ಮೋದಿ ಸಿಟ್ಟಾದ ಪ್ರಸಂಗ !

By Web DeskFirst Published Aug 29, 2018, 4:21 PM IST
Highlights

ಬಿಜೆಪಿ ಸಂಸದರ ಸಭೆಯಲ್ಲಿ ಉತ್ತರ ಪ್ರದೇಶದ ಬಾರಾಬಂಕಿ ಬಿಜೆಪಿ ಸಂಸದೆ ಒಬ್ಬರು ಅನುಮತಿ ಇಲ್ಲದೆ ಮೊಬೈಲ್ ರೆಕಾರ್ಡಿಂಗ್ ಮಾಡುತ್ತಿರುವುದನ್ನು ನೋಡಿ ಪ್ರಧಾನಿ ಮೋದಿ ಬಹಳವೇ ಸಿಟ್ಟಾದರಂತೆ

ರಾಜಸ್ಥಾನದಲ್ಲಿ ಬಿಜೆಪಿ ನಡೆಸುತ್ತಿರುವ ಗೌರವ್ ಯಾತ್ರೆ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಮದನ್ ಲಾಲ್ ಸೈನಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರನ್ನು ದೇಶದ ಪ್ರಧಾನಿ ಎಂದೆಲ್ಲ ಹಾಡಿ ಹೋಗಳಿದಾಗ, ಕುಳಿತವರೆಲ್ಲ ಬಿದ್ದು ಬಿದ್ದು ನಕ್ಕರು. ಕೆಲ ದಿನಗಳ ಹಿಂದೆಯಷ್ಟೇ ಮದನ್ ಲಾಲ್, ಮುಘಲ್ ಬಾದಶಾಹ್ ಹುಮಾಯೂನ್‌ನನ್ನು ಬಾಬರನ ತಂದೆ ಎಂದು ಕರೆದಿದ್ದರು. ಕೆಲವೊಬ್ಬರು ಬಾಯಿ ತಪ್ಪಿ ಏನೆಲ್ಲ ಮಾತನಾಡುತ್ತಾರೆ ಬಿಡಿ.

ನೋ ರೆಕಾರ್ಡಿಂಗ್
ಪ್ರಧಾನಿ ಮೋದಿ, ಅಮಿತ್ ಶಾ, ಅಡ್ವಾಣಿ ಭಾಗವಹಿಸಿದ್ದ ಬಿಜೆಪಿ ಸಂಸದರ ಸಭೆಯಲ್ಲಿ ಉತ್ತರ ಪ್ರದೇಶದ ಬಾರಾಬಂಕಿ ಬಿಜೆಪಿ ಸಂಸದೆ ಒಬ್ಬರು ಅನುಮತಿ ಇಲ್ಲದೆ ಮೊಬೈಲ್ ರೆಕಾರ್ಡಿಂಗ್ ಮಾಡುತ್ತಿರುವುದನ್ನು ನೋಡಿ ಪ್ರಧಾನಿ ಮೋದಿ ಬಹಳವೇ ಸಿಟ್ಟಾದರಂತೆ. ಮಹಿಳಾ ಸಂಸದೆ ಪ್ರಿಯಾಂಕಾ ಸಿಂಗ್ ರಾವತ್ ಅವರು ಮೊಬೈಲ್ ಆಫ್ ಮಾಡುವವರೆಗೂ ಪ್ರಧಾನಿ ಮೋದಿ ಮಾತು ನಿಲ್ಲಿಸಿದರಂತೆ. ನಂತರ ಬಿಜೆಪಿ ಸಂಸದೆ ಬಳಿ ಹೋದ ಹಿರಿಯ ಬಿಜೆಪಿ ನಾಯಕರೊಬ್ಬರು ಮೊದಲು ಶೂಟ್ ಮಾಡಿದ್ದನ್ನು ಮೊಬೈಲ್‌ನಿಂದ ಡಿಲೀಟ್ ಮಾಡುವಂತೆ ಸೂಚಿಸಿದರಂತೆ.

[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ]

click me!