
ಬೆಂಗಳೂರು(ಮಾ.26): ರಾಮನರದ ಬಿಡದಿ ಬಳಿ ಇರುವ ಇನೋವೇಟಿವ್ ಫಿಲ್ಮಿ ಸಿಟಿಯಲ್ಲಿ ಇದೀಗ ಕಬಾಲಿ ಚಿತ್ರದಲ್ಲಿನ ಕೆಲ ಅಪುರೂಪದ ವಸ್ತುಗಳ ಸಂಗ್ರಾಲಯವನ್ನು ತರೆಯಲಾಗಿದೆ.
ಕಬಾಲಿ ಚಿತ್ರದಲ್ಲಿ ತಮಿಳು ಸೂಪರ್ ಸ್ಟಾರ್ ರಜಿನಿಕಾಂತ್ ಬಳಸಿದ್ದ ವಸ್ತುಗಳನ್ನು ಮ್ಯೂಸಿಯಂನಲ್ಲಿ ಇಡಲಾಗಿದೆ. ದೇಶದಲ್ಲಿ ಪ್ರಥಮವಾಗಿ ಈ ಕಬಾಲಿ ಮ್ಯೂಸಿಯಂ ತೆರೆಯಲಾಗಿದ್ದು ಇಲ್ಲಿ ರಜಿನಿಕಾಂತ್ ಬಳಸಿದ್ದ ಉಡುಪುಗಳು, ಕನ್ನಡಕ, ವಾಚ್ ಹೀಗೆ ಹಲವು ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಮುಂದಿನ ದಿನಗಳಲ್ಲಿ ರಜಿನಿಕಾಂತ್ ಅವರ 3D ಭಾವಚಿತ್ರ ಮಾಡಿ ಪ್ರವಾಸಿಗರು ಅಸಲಿ ರಜಿನಿಕಾಂತ್'ರೊಂದಿಗೆ ಭಾವಚಿತ್ರ ತಗೆಸಿಕೊಳ್ಳುವಂತಹ ಅನುಭವ ನಿಡುವ ಹಾಗೆ ನಿರ್ಮಾಣ ಮಾಡಲಾಗುತ್ತದೆ ಎಂದು ಇನೋವೇಟಿವ್ ಫಿಲ್ಮಿ ಸಿಟಿ ವ್ಯವಸ್ಥಾಪಕ ನಿರ್ದೇಶಕಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.