ಹೊಸ ವರ್ಷದಂದು ಜನಿಸಿದ ಮೊದಲ ಮಗುವಿಗೆ 5 ಲಕ್ಷ ಚೆಕ್ ವಿತರಿಸಿದ ಮೇಯರ್

By Suvarna Web DeskFirst Published Jan 1, 2018, 11:55 AM IST
Highlights

ಹೊಸ ವರ್ಷದಂದು ಜನಿಸಿದ ಮೊದಲ ಮಗುವಿಗೆ 5 ಲಕ್ಷ ಚೆಕ್ ವಿತರಿಸಿದ ಮೇಯರ್

ಬೆಂಗಳೂರು (ಜ.1): ಬೆಂಗಳೂರು ಮೇಯರ್ ಸಂಪತ್ ರಾಜ್ ಅವರು ಘೋಷಿಸಿದಂತೆ ಬಿಬಿಎಂಪಿ ಆಸ್ಪತ್ರೆಯಲ್ಲಿ ಜನಿಸಿದ ಮೊದಲ ಹಣ್ಣು ಮಗುವಿಗೆ 5 ಲಕ್ಷ ರು ಮೌಲ್ಯದ ಚೆಕ್ ವಿತರಣೆ ಮಾಡಿದ್ದಾರೆ. ರಾತ್ರಿ 2 ಗಂಟೆ 5 ನಿಮಿಷಕ್ಕೆ  ರಾಜಾಜಿನಗರದ ಭಾಷ್ಯಂ ಸರ್ಕಲ್ನಲ್ಲಿರುವ ಡಾ. ನಾಗರಾಜ್ ಸ್ಮಾರಕ ಆಸ್ಪತ್ರೆಯಲ್ಲಿ ಪುಷ್ಪಾ – ಗೋಪಿ ದಂಪತಿಗೆ ಮಗು ಜನಿಸಿದೆ. ಈ ಬಗ್ಗೆ ಪಾಲಿಕೆಯ ಮುಖ್ಯ ಆರೋಗ್ಯ ಅಧಿಕಾರಿ ನಿರ್ಮಲಾ ಬುಗ್ಗಿ ಘೋಷಿಸಿದ್ದಾರೆ.  

ಈ ಬಗ್ಗೆ ಮಾತನಾಡಿದ ಮೇಯರ್ ಅವರು  5 ಲಕ್ಷ ರು. ಮೊತ್ತದ ಚೆಕ್ ನ್ನು ಮಗುವಿನ ಹೆಸರಿನಲ್ಲಿ ಡೆಪಾಸಿಟ್ ಮಾಡಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ. ಈ ದಂಪತಿಗೆ ಮೇಯರ್ ಅವರು ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ. ಅಲ್ಲದೇ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ  ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

click me!