ಮೋದಿ ಡಿಜಿಟಲ್ ಇಂಡಿಯಾ ಕನಸಿಗೆ ಕೈಜೋಡಿಸಿದ ಬ್ಯಾಂಕ್: ಎಲ್ಲಾ ಮನೆಗಳಿಗೂ 2 ಗಂಟೆ ಉಚಿತ ವೈ-ಫೈ ಸೇವೆ

By Suvarna Web DeskFirst Published Dec 15, 2016, 11:31 PM IST
Highlights

ಟ್ ಬ್ಯಾನ್ ನಂತರ ಡಿಜಟಲ್ ಇಂಡಿಯಾದ ಕನಸು ವೇಗ ಪಡೆದುಕೊಳ್ಳುತ್ತಿದೆ. ಗ್ರಾಮೀಣ ಭಾರತವೂ ಡಿಜಿಟಲೀಕರಣಕ್ಕೆ ಒಗ್ಗಿಕೊಳ್ಳುತ್ತಿದೆ. ಕ್ಯಾಶ್ ಲೆಸ್ ವ್ಯವಹಾರವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ವಿಜಯಾ ಬ್ಯಾಂಕ್ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಉಡುಪಿ ಜಿಲ್ಲೆಯ ಪುಟ್ಟ ಗ್ರಾಮ ಕುತ್ಯಾರು ಇದೀಗ ಡಿಜಿಟಲ್ ಗ್ರಾಮವಾಗಿ ಆಯ್ಕೆಯಾಗಿದೆ.

ಉಡುಪಿ(ಡಿ.16): ನೋಟ್ ಬ್ಯಾನ್ ನಂತರ ಡಿಜಟಲ್ ಇಂಡಿಯಾದ ಕನಸು ವೇಗ ಪಡೆದುಕೊಳ್ಳುತ್ತಿದೆ. ಗ್ರಾಮೀಣ ಭಾರತವೂ ಡಿಜಿಟಲೀಕರಣಕ್ಕೆ ಒಗ್ಗಿಕೊಳ್ಳುತ್ತಿದೆ. ಕ್ಯಾಶ್ ಲೆಸ್ ವ್ಯವಹಾರವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ವಿಜಯಾ ಬ್ಯಾಂಕ್ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಉಡುಪಿ ಜಿಲ್ಲೆಯ ಪುಟ್ಟ ಗ್ರಾಮ ಕುತ್ಯಾರು ಇದೀಗ ಡಿಜಿಟಲ್ ಗ್ರಾಮವಾಗಿ ಆಯ್ಕೆಯಾಗಿದೆ.

ಇದು ಉಡುಪಿ ಜಿಲ್ಲೆಯ ಕುತ್ಯಾರ ಗ್ರಾಮ. ಸದ್ಯಕ್ಕೆ ಗ್ರಾಮದಲ್ಲಿರುವ ಒಂದೇ ಒಂದು ಬ್ಯಾಂಕ್. ಬಟ್ ಇನ್ಮುಂದೆ ಕ್ಯಾಶ್​ಲೆಸ್ ಗ್ರಾಮ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಹೌದು ಕರಾವಳಿ ಮೂಲದ ವಿಜಯಾ ಬ್ಯಾಂಕ್ ಡಿಜಿಟಲ್ ಗ್ರಾಮ ಅನ್ನೋ ಹೊಸ ಯೋಜನೆ ಶುರುಮಾಡಿದೆ. ತವರಿನಲ್ಲೇ ಹೊಸ ಯೋಜನೆ ಆರಂಭಿಸುವ ಉದ್ದೇಶದೊಂದಿಗೆ ಕುತ್ಯಾರ ಗ್ರಾಮವನ್ನ ಆಯ್ಕೆ ಮಾಡಿಕೊಂಡಿದೆ. ಜನವರಿ 26 ರಿಂದ ಈ ಯೋಜನೆಗೆ ಚಾಲನೆ ದೊರಕಲಿದೆ.

ಡಿಜಿಟಲ್ ಗ್ರಾಮ ಯೋಜನೆಯಲ್ಲಿ ಏನಿರುತ್ತೆ ?

ಪ್ರತಿಯೊಬ್ಬ ಗ್ರಾಮಸ್ಥನಿಗೂ ಬ್ಯಾಂಕ್ ಅಕೌಂಟ್

ಎಲ್ಲಾ ಮನೆಗಳಿಗೂ 2 ಗಂಟೆ ಉಚಿತ ವೈ-ಫೈ ಸೇವೆ

ಮನೆಯಲ್ಲೇ ಕುಳಿತು ಬ್ಯಾಂಕಿಂಗ್ ವ್ಯವಹಾರ

ಸ್ವೈಪಿಂಗ್ ಮಷಿನ್ ಮೂಲಕವೇ ವ್ಯವಹಾರ

ವಿಜಯ ಬ್ಯಾಂಕ್ ದೇಶದಾದ್ಯಂತ 100 ಗ್ರಾಮಗಳನ್ನು  ಡಿಜಿಟಲ್ ಯೋಜನೆಗೆ ಒಳಪಡಿಸುವ ಕನಸು ಹೊಂದಿದೆ. ಒಟ್ಟಿನಲ್ಲಿ ಪ್ರಧಾನಿ ಮೋದಿಯವರ ಕ್ಯಾಶ್ ಲೆಸ್ ವ್ಯವಹಾರದ ಕನಸಿಗೆ ವಿಜಯ ಬ್ಯಾಂಕ್ ಕೈ ಜೋಡಿಸಿದ್ದು.. ಅದರಲ್ಲೂ ಕರಾವಳಿಯಿಂದಲೇ ಈ ಯೋಜನೆ ಆರಂಭಿಸಿದ್ದು ಹೆಮ್ಮೆಯ ವಿಚಾರ.

click me!