ಮಾಸ್ತಿಗುಡಿ ಚಿತ್ರ ನಿರ್ದೇಶಕ ನಾಗಶೇಖರ್ , ಸಾಹಸ ನಿರ್ದೇಶಕ ರವಿವರ್ಮಾಗೆ ಶರತ್ತು ಬದ್ಧ ಜಾಮೀನು

By Suvarna Web DeskFirst Published Dec 15, 2016, 4:45 PM IST
Highlights

ಮಾಸ್ತಿಗುಡಿ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ಇಬ್ಬರು ಖಳನಟರ ಮೃತಪಟ್ಟ ಪ್ರಕರಣದ ಕಾರಣವಾದ ಆರೋಪ ಎದುರಿಸುತ್ತಿದ್ದ ಚಿತ್ರ ನಿರ್ದೇಶಕ ನಾಗಶೇಖರ್ ಹಾಗೂ ಸಾಹಸ ನಿರ್ದೇಶಕ ರವಿವರ್ಮ ಅವರಿಗೆ ಹೈಕೋರ್ಟ್ ಗುರುವಾರ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.

ಬೆಂಗಳೂರು (ಡಿ.15): ಮಾಸ್ತಿಗುಡಿ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣದ ವೇಳೆ ಇಬ್ಬರು ಖಳನಟರ ಮೃತಪಟ್ಟ ಪ್ರಕರಣದ ಕಾರಣವಾದ ಆರೋಪ ಎದುರಿಸುತ್ತಿದ್ದ ಚಿತ್ರ ನಿರ್ದೇಶಕ ನಾಗಶೇಖರ್ ಹಾಗೂ ಸಾಹಸ ನಿರ್ದೇಶಕ ರವಿವರ್ಮ ಅವರಿಗೆ ಹೈಕೋರ್ಟ್ ಗುರುವಾರ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.

ನಾಗಶೇಖರ್ ಮತ್ತು ರವಿವರ್ಮ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ನ್ಯಾಯಪೀಠ ಜಾಮೀನು ಮಂಜೂರು ಮಾಡಿದೆ. ಅಲ್ಲದೆ, ಇಬ್ಬರು ಆರೋಪಿಗಳು ಒಂದು ಲಕ್ಷ ಬಾಂಡ್, ಒಂದು ವೈಯಕ್ತಿಕ ಶ್ಯೂರಿಟಿ, ತನಿಖೆ ಸಹಕರಿಸುವಂತೆ ಷರತ್ತುಗಳನ್ನು ವಿಧಿಸಿದೆ.
ವಿಚಾರಣೆ ವೇಳೆ ನಾಗಶೇಖರ್ ಪರ ವಕೀಲ, ಚಿತ್ರದ ಚಿತ್ರೀಕರಣವನ್ನು ನಿರ್ದೇಶನ ಮಾಡುತ್ತಾರೆ. ಆದರೆ, ಸಾಹಸ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರು ಮತ್ತವರ ತಂಡದ ಜವಾಬ್ದಾರಿಯಾಗಿರುತ್ತದೆ. ಈ ಘಟನೆಯಲ್ಲಿ ನಿರ್ದೇಶಕರ ಪಾತ್ರವಿಲ್ಲ. ಹೀಗಾಗಿ ಜಾಮೀನು ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಸಾಹಸ ನಿರ್ದೇಶಕ ರವಿವರ್ಮ ಪರ ವಕೀಲ. ಚಿತ್ರೀಕರಣದ ವೇಳೆ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಸ್ಥಳದಲ್ಲಿ ವಿದ್ಯುತ್ ಚಾಲಿತ ಬೋಟ್ ಇತ್ತು ಆದರೆ, ಕೊನೆ ಘಳಿಗೆಯಲ್ಲಿ ಕೈಕೊಟ್ಟಪರಿಣಾಮ ದುರಂತಕ್ಕೆ ಕಾರಣವಾಗಿದೆ. ಆದರೂ ಮೀನುಗಾರರ ಸಹಕಾರದಿಂದ ಚಿತ್ರದ ನಾಯಕನನ್ನು ರಕ್ಷಿಸಲಾಗಿದೆ. ಘಟನೆ ಆಕಸ್ಮಿಕವಾಗಿ ನಡೆದಿದೆ ಹಾಗಾಗಿ ಜಾಮೀನು ಮಂಜೂರು ಮಾಡುವಂತೆ ನ್ಯಾಯಪೀಠಕ್ಕೆ ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರಕಾರದ ಪರ ವಕೀಲರು, ಆರೋಪಿಗಳು ಚಿತ್ರೀಕರಣದ ವೇಳೆ ಯಾವುದೇ ಮುನ್ನೆಚರಿಕೆ ಕ್ರಮ ತಗೆದುಕೊಂಡಿಲ್ಲ, ಹೀಗಾಗಿ ಎರಡು ಜೀವಗಳನ್ನು ಕಳೆದುಕೊಳ್ಳುವಂತಾಯಿತು. ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
 

ಪ್ರಕರಣದ ಹಿನ್ನಲೆ
ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣವನ್ನು ತಿಪ್ಪಗೊಂಡನಹಳ್ಳಿಯ ಕರೆಯಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಖಳನಟರಾದ ಉದಯ್ ಹಾಗೂ ಅನಿಲ್ ಹೆಲಿಕಾಪ್ಟರ್‌ನಿಂದ ಜಿಗಿದು ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಬೆಂಗಳೂರು ಜಲಮಂಡಳಿಯ ತಾವರೆಕರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಿತ್ರ ನಿರ್ಮಾಪಕ , ನಿರ್ದೇಶಕ ಹಾಗೂ ಸಾಹಸ ನಿರ್ದೇಶಕ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣ ಸಂಬಂಧ ನಾಗಶೇಖರ್ ಮತ್ತು ರವಿವರ್ಮ ಪೊಲೀಸರಿಗೆ ಶರಣಾಗಿದ್ದರು. ಆರೋಪಿಗಳಿಗೆ ನಂತರ ರಾಮನಗರ ಜಿಲ್ಲಾ ನ್ಯಾಯಾಲಯ ಜಾಮೀನು ನಿರಾಕರಿದ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

click me!