
ನವದೆಹಲಿ(ಸೆ.29): ಸೇನಾ ದಾಳಿಗೆ ಬೆಂಬಲ ನೀಡಿರುವ ಬಾಂಗ್ಲಾದೇಶ, ತನ್ನ ಸಾರ್ವಭೌಮತ್ವ ಹಾಗೂ ಪ್ರದೇಶದ ಮೇಲೆ ದಾಳಿ ನಡೆದರೆ ಪ್ರತಿಯಾಗಿ ದಾಳಿ ನಡೆಸುವ ಹಕ್ಕು ಇದೆ ಅಂತ ಬಾಂಗ್ಲಾ ಪ್ರಧಾನಿ ಸಲಹೆಗಾರ ಇಖ್ಬಾಲ್ ಚೌಧರಿ ಹೇಳಿದ್ದಾರೆ.
ಮತ್ತೊಂದು ಕಡೆ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಪಾಕಿಸ್ತಾನ ಉಗ್ರರ ಶಿಬಿರಗಳ ಮೇಲೆ ನಡೆಸಿದ ಸೀಮಿತ ದಾಳಿಯ ಬಗ್ಗೆ 30 ದೇಶಗಳ ರಾಯಭಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ನಡುವೆ ಭಾರತದ ರಾಯಬಾರಿಗೆ ಪಾಕ್ ವಿದೇಶಾಂಗ ಇಲಾಖೆ ಸಮನ್ಸ್ ನೀಡಿದೆ.
ಧ್ವಜಗೌರವ ಕಾರ್ಯಕ್ರಮವನ್ನು ರದ್ದು :ಗಡಿಯಲ್ಲಿ ಪರಿಸ್ಥಿತಿ ಉದ್ವಿಘ್ನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ಪಾಕಿಸ್ದಾನದ ಗಡಿ ವಾಘಾದಲ್ಲಿ ಎಂದಿನಂತೆ ನಡೆಯಬೇಕಿದ್ದ ಉಭಯ ದೇಶಗಳ ಸೈನಿಕರ ಧ್ವಜಗೌರವ ಕಾರ್ಯಕ್ರಮವನ್ನು ರದ್ದುಗೊಳಿಸಿದೆ.
ಮುಂಜಾಗ್ರತಾ ಕ್ರಮವಾಗಿ ಪಾಕ್ ಗಡಿಯಲ್ಲಿ ಹೈ ಅಲರ್ಟ್ : ಭಾರತೀಯ ಸೇನೆ ತಡರಾತ್ರಿ ಪಾಕಿಸ್ತಾನ ಉಗ್ರರ ಶಿಬಿರಗಳ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಸಂಭವನೀಯ ದಾಳಿ ನಡೆಸಲು ಪ್ಲಾನ್ ಮಾಡಿಕೊಂಡಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಗಡಿ ವ್ಯಾಪ್ತಿಯ 10 ಕಿ. ಮಿ. ವ್ಯಾಪ್ತಿಯಲ್ಲಿ ಎಲ್ಲಾ ಹಳ್ಳಿಗಳನ್ನು ಸ್ಥಳಾಂತರಗೊಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚುವರಿ ಸೇನಾಪಡೆ ನಿಯೋಜನೆ : ದಾಳಿ ಹಿನ್ನೆಲೆಯಲ್ಲಿ ಉಭಯ ದೇಶಗಳ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಇಂಡೋ-ಪಾಕ್ ಗಡಿಗೆ ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.