ಬೆಂಗ್ಳೂರು-ಮಂಗ್ಳೂರು ರೈಲು ಸಂಚಾರ ಪುನಾರಂಭ

Published : Jul 26, 2019, 09:11 AM ISTUpdated : Jul 26, 2019, 09:13 AM IST
ಬೆಂಗ್ಳೂರು-ಮಂಗ್ಳೂರು ರೈಲು ಸಂಚಾರ ಪುನಾರಂಭ

ಸಾರಾಂಶ

ಭಾರೀ ಮಳೆ ಸುರಿದು ಭೂಮಿ ಕುಸಿದ ಪರಿಣಾಮ ಭೂಮಿ ಕುಸಿದ ಪರಿಣಾಮ ನಿಲ್ಲಿಸಲಾಗಿದ್ದ ಬೆಂಗಳೂರು ಮಂಗಳೂರು ರೈಲು ಸಂಚಾರ ಮತ್ತೆ ಆರಂಭವಾಗಿದೆ. 

ಸಕಲೇಶಪುರ [ಜು.26]: ಇಲ್ಲಿಗೆ ಸಮೀಪದ ಸಿರಿಬಾಗಿಲು ಪ್ರದೇಶದಲ್ಲಿ ಉಂಟಾಗಿದ್ದ ಭೂಕುಸಿತದಿಂದಾಗಿ ರದ್ದಾಗಿದ್ದ ಬೆಂಗಳೂರು-ಮಂಗಳೂರು ರೈಲುಗಳ ಸಂಚಾರ ಗುರುವಾರದಿಂದ ಪುನರ್‌ ಆರಂಭಿಸಲಾಗಿದೆ. 

ಸಿರಿಬಾಗಿಲು ಸಮೀಪದ 86ನೇ ಮೈಲುಗಲ್ಲಿನ ಸುರಂಗದ ಸಮೀಪ ರೈಲು ಹಳಿಗಳ ಮೇಲೆ ಶನಿವಾರ ಮುಂಜಾನೆ ಬಂಡೆ, ಮಣ್ಣು ರಾಶಿಯಾಗಿ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ರೈಲುಗಳ ಸಂಚಾರವನ್ನು ರದ್ದುಪಡಿಸಿ ತೆರವು ಕಾರ್ಯಾಚರಣೆ ಆರಂಭಿಸಲಾಗಿತ್ತು. 

ಸುಮಾರು 80ಕ್ಕೂ ಹೆಚ್ಚು ಸಿಬ್ಬಂದಿ ಸತತ 5 ದಿನ ನಡೆಸಿದ ಕಾರ್ಯಾಚರಣೆ ನಂತರ ಗುರುವಾರ ಮುಂಜಾನೆಯಿಂದ ರೈಲು ಸಂಚಾರ ಪುನರ್‌ ಆರಂಭವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

After Ayodhya Badarinath Temple Hit: ಅಯೋಧ್ಯೆ ಬಳಿಕ ಬದರೀನಾಥ ದೇಗುಲದಲ್ಲೂ ಹುಂಡಿ ಅಕ್ರಮ, ತನಿಖೆಗೆ ಆದೇಶ
ಚುನಾವಣೆ ಆಯೋಗ ಕತ್ತೆ ಕಾಯ್ತಿದೆಯೇ? SIR ನಲ್ಲಿ ತಪ್ಪಾಗುತ್ತಿದ್ದರೆ ಕ್ರಮ ಜರುಗಿಸಲಿ: ಪ್ರಿಯಾಂಕ್ ಖರ್ಗೆ