ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಶಾಕಿಂಗ್ ನ್ಯೂಸ್

First Published Jul 5, 2018, 11:42 AM IST
Highlights

ಕೇಂದ್ರ ಸರ್ಕಾರವು ವಾಹನ ಸವಾರರಿಗೆ  ಶಾಕಿಂಗ್ ನ್ಯೂಸ್ ನೀಡಿದೆ. ಯಾವುದೇ ಕಾರಣಕ್ಕೂ ಕೂಡ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ರದ್ದು ಮಾಡುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 

ನವದೆಹಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹದಲ್ಲಿ ಯಾವುದೇ ರೀತಿ  ವಿನಾಯಿತಿ  ಇಲ್ಲ ಎಂದು  ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ  ನಿತಿನ್ ಗಡ್ಕರಿ ಹೇಳಿದ್ದಾರೆ.

 ನಾಗರಿಕರಿಗೆ ಉತ್ತಮ ಸೇವೆ ಸಿಗಬೇಕು ಎಂದಾದಲ್ಲಿ ಟೋಲ್ ಕಟ್ಟುವುದು ಅವಶ್ಯಕ. ಯಾವ ಕಾರಣಕ್ಕೂ  ಕೂಡ ಹೆದ್ದಾರಿಯಲ್ಲಿರುವ ಟೋಲ್ ವ್ಯವಸ್ಥೆಯನ್ನು ತೆಗೆದಯುವುದಿಲ್ಲ ಎಂದು ಹೇಳಿದರು. 

ಅಲ್ಲದೇ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಬಗ್ಗೆಯೂ ಕೂಡ ಪ್ರಸ್ತಾಪ ಮಾಡಿದ ಅವರು ರಸ್ತೆ ಸುರಕ್ಷತಾ ನಿಯಮಗಳನ್ನು ಸೂಕ್ತ ಪ್ರಮಾಣದಲ್ಲಿ ಜಾರಿಗೆ ತರಲಾಗುತ್ತದೆ ಎಂದು ಅವರು ಹೇಳಿದ್ದಾರೆ. 

ಇನ್ನು 2017ನೇ ಇಸವಿಯಲ್ಲಿ  ಒಟ್ಟು ದೇಶದಲ್ಲಿ 4.60 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 1.46 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 

click me!