
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಪ್ರಧಾನ ಸೇವೆಗಳಲ್ಲಿ ಒಂದಾದ ಆಶ್ಲೇಷ ಬಲಿ ಸೇವೆಯನ್ನು ಬುಧವಾರ ಸಂಜೆ ಶ್ರೀ ದೇವಳದ ವತಿಯಿಂದ ನಡೆಸಲಾಯಿತು. ಗುರುವಾರ ದಿಂದ ಭಕ್ತರಿಗೆ ಸಂಜೆಯ ಸೇವೆಗೆ ಅವಕಾಶ ಒದಗಿಸ ಲಾಗಿದೆ.
ಈವರೆಗೆ ಕುಕ್ಕೆ ದೇವಳದಲ್ಲಿ ಈ ಸೇವೆಯನ್ನು ಬೆಳಗ್ಗಿನ ಸಮಯದಲ್ಲಿ ಮಾತ್ರ ನಡೆಸಲಾಗುತ್ತಿತ್ತು. ಇದರಿಂದ ಭಕ್ತರಿಗೆ ಒತ್ತಡ ಉಂಟಾಗುತ್ತಿತ್ತು. ಇದನ್ನು ನಿವಾರಣೆಗಾಗಿ ಸಂಜೆ ವೇಳೆಯೂ ಆಶ್ಲೇಷ ಬಲಿ ಸೇವೆ ನಡೆಸಲು ನಿರ್ಧರಿಸಿದೆ. ಬುಧವಾರ ಸಂಜೆ 6 ಗಂಟೆಗೆ ಶ್ರೀ ದೇವಳದ ವತಿಯಿಂದ ಆಶ್ಲೇಷ ಬಲಿ ಸೇವೆ ಆರಂಭವಾಯಿತು.
ಯಾವುದೇ ಬುಕ್ಕಿಂಗ್ ಇಲ್ಲ: ಆಶ್ಲೇಷ ಬಲಿ ಸೇವೆ ನೆರವೇರಿಸಲು ಮುಂಗಡ ಬುಕ್ಕಿಂಗ್ ಇರುವುದಿಲ್ಲ. ಬೆಳಗ್ಗೆ 3 ಹಂತದಲ್ಲಿ, ಸಂಜೆ 1 ಹಂತದಲ್ಲಿ ನಡೆಯಲಿದೆ. ಸಂಜೆಯ ಆಶ್ಲೇಷ ಬಲಿ ಸೇವೆಗೆ ಭಕ್ತರು ಮಧ್ಯಾಹ್ನ 12.30ರಿಂದ 4.30ರವರೆಗೆ ಸೇವಾ ರಶೀದಿ ಪಡೆಯಬಹುದು. ಸಂಜೆ 5 ರ ನಂತರ ಸೇವೆ ಪ್ರಾರಂಭವಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.