ಎಚ್.ಡಿ.ಕುಮಾರಸ್ವಾಮಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದರೂ, ಮೊದಲ ಬಜೆಟ್ ಮಂಡಿಸುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿರುವುದರಿಂದ ರೈತರಲ್ಲಿ ಹಾಗೂ ರಾಜ್ಯದ ಜನತೆಯಲ್ಲಿ ಅಪಾರ ನಿರೀಕ್ಷೆಗಳಿದ್ದು, ಬಜೆಟ್‌ನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಕೌತುಕದಿಂದ ಕಾಯುತ್ತಿದ್ದಾರೆ. ಏನಿದೆ, ಎನಿಲ್ಲ? ಯಾವುದು ತುಟ್ಟಿ? ಯಾವುದು ಅಗ್ಗ? ಇಲ್ಲಿದೆ ಬಜೆಟ್ ಡಿಟೈಲ್ಸ್...
ಕಂಠೀರವ ಸ್ಟುಡಿಯೋದಲ್ಲಿ ಯೋಗ ಕೇಂದ್ರ
ಅಮೆರಿಕಾದ ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಕೆಆರ್’ಎಸ್ ಅಭಿವೃದ್ದಿ
ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 25 ಕೋಟಿ ಮೀಸಲು
ಸಾಮಾಜಿಕ ದಾಸೋಹ ಸೇವೆ ಸಲ್ಲಿಸುವ ಮಠಗಳಿಗೆ ಅನುದಾನ
ಕಂದಾಯ ಇಲಾಖೆಗೆ 7,180 ಕೋಟಿ ರೂ ಅನುದಾನ
ಲೋಕೋಪಯೋಗಿ ಇಲಾಖೆಗೆ ಶೇ 4ರಂತೆ 10,200 ಕೋಟಿ ರೂ ಅನುದಾನ
ಮುಖ್ಯಮಂತ್ರಿಯವರ 1 ಲಕ್ಷ ಮನೆ ಯೋಜನೆ ಎಲ್ಲ ನಗರಗಳಿಗೆ ವಿಸ್ತರಣೆ
ಬೆಂಗಳೂರಿನಲ್ಲಿ ಆರು ಕಡೆ 15,825 ಕೋಟಿ ರೂ ವೆಚ್ಚದಲ್ಲಿ ಎಲಿವೇಟೆಡ್ ಕಾರಿಡಾರ್ಗಳ ನಿರ್ಮಾಣ
ಪ್ರಸ್ತುತ ಪ್ರಗತಿಯಲ್ಲಿರುವ ಎಲ್ಲ ನೀರಾವರಿ ಯೋಜನೆಗಳು 5 ವರ್ಷಗಳಲ್ಲಿ ಪೂರ್ಣ
ಸ್ವ ಉದ್ಯೋಗ ಪ್ರೋತ್ಸಾಹಕ್ಕೆ ನೂತನ ಕಾಯಕ ಯೋಜನೆ; 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ
ಮಕ್ಕಳ ಕೊರತೆಯಿರುವ ಸರಕಾರಿ ಶಾಲೆಗಳನ್ನು ಸಮೀಪದ 1 ಕಿ.ಮೀ ವ್ಯಾಪ್ತಿಯಲ್ಲಿರುವ ಶಾಲೆಯ ಜತೆ ವಿಲೀನ
ಹೆದ್ದಾರಿ ಪ್ರಯಾಣಿಕರ ಅನುಕೂಲಕ್ಕಾಗಿ 3 ಅತ್ಯಾಧುನಿಕ ವಿಶ್ರಾಂತಿ ಗೃಹ ನಿರ್ಮಾಣ
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಗೆ ಹೋಟೆಲ್ ಸೌಲಭ್ಯಕ್ಕಾಗಿ 80 ಕೋಟಿ ರೂ ಅನುದಾನ
ಬಿಎಂಟಿಸಿಯಿಂದ 80 ಎಲೆಕ್ಟ್ರಿಕ್ ಬಸ್ಗಳ ಸೇವೆ
ಶಿಕ್ಷಣ ಕ್ಷೇತ್ರಕ್ಕೆ ಶೇ 11ರಂತೆ 26,581 ಕೋಟಿ ರೂ ಅನುದಾನ
ಅಂಗನವಾಡಿ ಕೇಂದ್ರಗಳನ್ನು ಬಾಲಸ್ನೇಹಿ ಕೇಂದ್ರಗಳಾಗಿ ಪರಿವರ್ತನೆ;
4100 ಅಂಗನವಾಡಿ ಕೇಂದ್ರಗಳು ಸರ್ಕಾರಿ ಶಾಲೆಗಳಿಗೆ ಸ್ಥಳಾಂತರ
ಶಿವಮೊಗ್ಗದಲ್ಲಿ ತಾಯಿನಾಡು ಭದ್ರತಾ ವಿವಿ ಸ್ಥಾಪನೆ; ಹಂಪಿಯಲ್ಲಿ ಪ್ರವಾಸೋದ್ಯಮ ವಿವಿ ಸ್ಥಾಪನೆಗೆ 3 ಕೋಟಿ ಮೀಸಲು; ಧಾರವಾಡ ಕೃಷಿ ವಿವಿಗೆ 3 ಕೋಟಿ ರೂ ಅನುದಾನ
ವಿಕಲಚೇತನ ವಿದ್ಯಾರ್ಥಿಗಳ ವ್ಯಾಸಂಗಕ್ಕೆ 1 ಕೋಟಿ ರೂ; ಇಂದಿರಾ ನಗರದಲ್ಲಿ ವಿಶೇಷ ಶಿಕ್ಷಣ ತರಬೇತಿ
ಕೆಂಪೇಗೌಡ ಬಡಾವಣೆಯಲ್ಲಿ 3 ಸಾವಿರ ಹೊಸ ನಿವೇಶನ ಹಂಚಿಕೆ
ಬೆಂಗಳೂರಿನಲ್ಲಿ ಫೆರಿಫರಲ್ ರಿಂಗ್ ರಸ್ತೆ
ಹಿಂದುಳಿದ ಮಠಗಳಿಗೆ ಅನುದಾನ
ಹಾಸನದಲ್ಲಿ ಮೆಗಾ ಡೈರಿ ಸ್ಥಾಪನೆಗೆ 50 ಕೋಟಿ ಅನುದಾನ
ಹಿರಿಯರ ಮಾಸಾಶನ 600 ರಿಂದ 1 ಸಾವಿರಕ್ಕೆ ಹೆಚ್ಚಳ; ಗರ್ಭಿಣಿಯರಿಗೆ ಪ್ರತಿ ತಿಂಗಳು 1000 ರೂ ಭತ್ಯೆ, 350 ಕೋಟಿ ಮೀಸಲು
ಪ್ರಾಥಮಿಕ ಶಿಕ್ಷಣಕ್ಕೆ 26 ಸಾವಿರದ 581 ಕೋಟಿ ರೂಪಾಯಿ
’ಕಾಯಕ’ ಎಂಬ ಯೋಜನೆಯಡಿ ಬಂಪರ್ ಸಾಲ ಕೊಡುಗೆ
ನಮ್ಮ ಮೆಟ್ರೋ 3 ನೇ ಹಂತ ಅಭಿವೃದ್ಧಿ- ಟೋಲ್’ಗೇಟ್’ನಿಂದ ಕಡಬಗೆರೆವರೆಗೆ- 12. 5 ಕಿಮೀ, ಗೊತ್ತಿಗೆರೆಯಿಂದ ಬಸವಪುರವರೆಗೆ- 3. 7 ಕಿಮೀ ಆರ್.ಕೆ ಹೆಗ್ಡೆ ನಗರದಿಂದ ಏರೋಸ್ಪೇಸ್ ಪಾರ್ಕ್’ವರೆಗೆ- 18.95 ಕಿಮೀ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 100 ಕೋಟಿ ಅನುದಾನ
ಹಾಸನದಲ್ಲಿ ಮೆಗಾ ಹಾಲಿನ ಡೈರಿ ಸ್ಥಾಪನೆಗೆ 50 ಕೋಟಿ ಅನುದಾನ
ಕನಕಪುರ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ
ವಿಕಲಚೇತನರಿಗೆ ನೀಡಿರುವ ಸಾಲಮನ್ನಾ
ಹಾಸನದಲ್ಲಿ 160 ಕೆರೆಗಳ ಅಭಿವೃದ್ಧಿಗೆ 70 ಕೋಟಿ ರೂ.
ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಘಟಕ ಸ್ಥಾಪನೆ
ಜಲ ಸಂಪನ್ಮೂಲ ಇಲಾಖೆಗೆ 18,142 ಕೋಟಿ ರೂ ಅನುದಾನ
ಕೃಷಿ ಮತ್ತು ತೋಟಗಾರಿಕಾ ಇಲಾಖೆಗೆ 7642 ಕೋಟಿ ರೂ.
ಕೃಷಿ ಇಲಾಖೆಗೆ 1471 ಕೋಟಿ ರೂಪಾಯಿ ಹೆಚ್ಚಳ
ಪ್ರತಿ ಜಿಲ್ಲೆಗೊಂದು ವೃದ್ದಾಶ್ರಮ
ಕಾರವಾರ, ಯಾದಗಿರಿ, ತುಮಕೂರು, ಹಾವೇರಿಯಲ್ಲಿ ಇಸ್ರೇಲ್ ಮಾದರಿಯ ನೀರಾವರಿ ವ್ಯವಸ್ಥೆ
ಮೊದಲು 5 ಲಕ್ಷದವರೆಗೆ ಸಾಲಕ್ಕೆ ಶೂನ್ಯ ಬಡ್ಡಿ; ಅತ್ಯುತ್ತಮ ಗುಣಮಟ್ಟ ಬೀಜ ದೃಡೀಕರಣ ಕೇಂದ್ರ ಸ್ಥಾಪನೆಗೆ ಸರ್ಕಾರ ನಿರ್ಧಾರ
ಸಂಧ್ಯಾ ಸುರಕ್ಷಾ ಯೋಜನೆಗೆ 1000 ರೂ.ಗೆ ಏರಿಕೆ
ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ದುರಸ್ಥಿಗೆ 150 ಕೋಟಿ
ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ಸ್ಥಾಪನೆ
ಕನ್ನಡ ಮಾಧ್ಯಮದ ಜೊತೆಗೆ 1000 ಇಂಗ್ಲೀಷ್ ಮಾಧ್ಯಮ ಸ್ಥಾಪನೆ
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆ ಆರಂಭ ಎಲ್’ಕೆಜಿ, ಯುಕೆಜಿ ಆರಂಭಕ್ಕೆ ಸರ್ಕಾರದ ನಿರ್ಧಾರ; ಸರ್ಕಾರಿ ಶಾಲೆಯಲ್ಲಿ ಒಟ್ಟು 100 ಆಂಗ್ಲ ಮಾಧ್ಯಮ ತರಗತಿಗಳು ಆರಂಭ
ರಾಮನಗರದಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಸ್ವಸಹಾಯ ಗುಂಪುಗಳ ಆದಾಯ ಹೆಚ್ಚಿಸಲು ಕಾಯಕ
ಹೊಸ ಯೋಜನೆ ಬೆಂಗಳೂರಿಗೆ ಸಾರಿಗೆ ಕಲ್ಪಿಸಲು 6 ಎಲಿವೆಟೆಡ್ ಕಾರಿಡಾರ್
ರಾಜ್ಯಾದ್ಯಂತ 1.9 ಲಕ್ಷ ಕೃಷಿ ಹೊಂಡಗಳ ನಿರ್ಮಾಣ
ಮೇಕೆದಾಟು ಯೋಜನೆಗೆ ಒಪ್ಪಿಗೆ ಸಿಕ್ಕರೆ ತಿರುವಳಿ ಪಡೆದು ಯೋಜನೆ ಕಾರ್ಯಗತ
ಸರ್ಕಾರಿ ಅಧಿಕಾರಿಗಳು, ಸಹಕಾರಿ ಸಂಘಗಳ ಮುಖಂಡರ ಸಾಲಮನ್ನಾ ಇಲ್ಲ
ವಿದ್ಯುತ್ ಬಳಕೆ ಮೇಲಿನ ತೆರಿಗೆ ಹೆಚ್ಚಳ
ಪೆಟ್ರೋಲ್ ದರ 1 ರೂಪಾಯಿ 14 ಪೈಸೆ ಹೆಚ್ಚಳ; ಡಿಸೇಲ್ ಮೇಲಿನ ಸೆಸ್ ಶೇ. 19 ರಿಂದ 21 ಕ್ಕೆ ಏರಿಕೆ
3 ಕೋಟಿ ವೆಚ್ಚದಲ್ಲಿ ಮೈಸೂರಿನಲ್ಲಿ ರೇಷ್ಮೆ ಮಾರುಕಟ್ಟೆ; ಬೆಂಗಳೂರಿನ ತಲಘಟ್ಟಪುರದಲ್ಲಿ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ
ಚನ್ನಪಟ್ಟಣ ರೇಷ್ಮೆ ಕೈಗಾರಿಕೆ ನಿಗಮದ ಪುನಶ್ಚೇತನಕ್ಕೆ 5 ಕೋಟಿ ರೂ.
ಹೊಸ ಸಾಲ ನೀಡಲು 6 ಸಾವಿರ ಕೋಟಿ ರೂ. ನಿಗದಿ
ಮೋಟಾರು ವಾಹನ ತೆರಿಗೆ ಹೆಚ್ಚಳ
ಇಸ್ರೇಲ್ ಮಾದರಿ ಕೃಷಿ ಪದ್ಧತಿಗೆ 150 ಕೋಟಿ; 5 ಸಾವಿರ ಹೆಕ್ಟೇರ್’ನಲ್ಲಿ ಇಸ್ರೇಲ್ ಮಾದರಿ ಕೃಷಿ ಆರಂಭ
ಕನಕಪುರ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ
ಶಿಕ್ಷಣ ಇಲಾಖೆಗೆ 150 ಕೋಟಿ ರೂಪಾಯಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್
ರಾಜ್ಯದ ರೈತರ ಬೆಳೆ ಸಾಲ ಒಂದೇ ಹಂತದಲ್ಲಿ ಮನ್ನಾ ಮಾಡಲು ನಿರ್ಧಾರ
ರಾಜ್ಯದಲ್ಲಿ ಮದ್ಯ ದುಬಾರಿಯಾಗಲಿದೆ.
ಪೆಟ್ರೋಲ್ ಡೀಸೆಲ್ ಮೇಲಿನ ಸೆಸ್ ಶೇ. 30 ರಿಂದ 32 ಕ್ಕೆ ಏರಿಕೆ
ಸರ್ಕಾರಿ ಅಧಿಕಾರಿಗಳು, ಸಹಕಾರಿ ಸಂಘಗಳ ಮುಖಂಡರ ಸಾಲಮನ್ನಾ ಇಲ್ಲ
ವಿದ್ಯುತ್ ಬಳಕೆ ಮೇಲಿನ ತೆರಿಗೆ ಹೆಚ್ಚಳ ಪೆಟ್ರೋಲ್ ದರ 1 ರೂಪಾಯಿ 14 ಪೈಸೆ ಹೆಚ್ಚಳ ಡಿಸೇಲ್ ಮೇಲಿನ ಸೆಸ್ ಶೇ. 19 ರಿಂದ 21ಕ್ಕೆ ಏರಿಕೆ
ತೆರಿಗೆದಾರರ ಸಾಲಮನ್ನಾ ಇಲ್ಲ
ಮೈತ್ರಿ ಸರ್ಕಾರದ ಮೊದಲ ಬಜೆಟ್ಟನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸುತ್ತಿದ್ದಾರೆ. ಒಂದೇ ಹಂತದಲ್ಲಿ ೨೦೦೭ ರ ಸುಸ್ತಿ ಬೆಳೆ ಸಾಲ ಮನ್ನಾ ಮಾಡಲಾಗುವುದು 2 ಲಕ್ಷದವರೆಗೆ ಸಾಲಮನ್ನಾ ಮಾಡಲಾಗುತ್ತದೆ ರಾಜ್ಯದ ಬೊಕ್ಕಸಕ್ಕೆ 34 ಸಾವಿರ ಕೋಟಿ ಹೊರೆಯಾಗಲಿದೆ.
ಚೊಚ್ಚಲ ಬಜೆಟ್ ಮಂಡಿಸಲು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಗಳು ವಿಧಾನಸೌಧದತ್ತ ಹೊರಡಲು ಸಜ್ಜಾಗಿದ್ದಾರೆ. ಕೃಷ್ಣಾದಲ್ಲಿ ಮುಖ್ಯಮಂತ್ರಿಗಳು ಹಸನ್ಮುಖರಾಗಿ ವಿಜಯ ಚಿಹ್ನೆ ಪ್ರದರ್ಶಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.