
ರೋಹ್ತಕ್(ಆ.29): ಕಳೆದ ಶುಕ್ರವಾರ ಜೈಲು ಪಾಲಾದ ಡೇರಾ ಸಚ್ಚಾ ಸೌದಾ ಧಾರ್ಮಿಕ ಪಂಥದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಜೈಲಿನಲ್ಲೂ ತನ್ನ ಜತೆ ‘ದತ್ತು ಪುತ್ರಿ’ ಹನಿಪ್ರೀತ್'ಳನ್ನು ಇಟ್ಟುಕೊಳ್ಳಲು ಬಯಸಿದ್ದ. ಇದಕ್ಕಾಗಿ ಆಕೆ ಆ್ಯಕುಪಂಕ್ಚರ್ ತಜ್ಞೆ ಎಂದು ಬಣ್ಣಿಸಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡುತ್ತಿದ್ದಂತೆ, ಜೈಲಿನಲ್ಲಿ ತಾನು ಅನಾರೋಗ್ಯಕ್ಕೆ ತುತ್ತಾಗಬಹುದು. ಹೀಗಾಗಿ ಹನಿಪ್ರೀತ್‌ಳನ್ನು ತನ್ನ ಜತೆ ಕಳುಹಿಸಿ, ಆಕೆಗೆ ಆ್ಯಕುಪಂಕ್ಚರ್ ಗೊತ್ತು ಎಂದು ನ್ಯಾಯಾಧಿಶರಿಗೆ ಮೊರೆ ಇಟ್ಟಿದ್ದ. ಹನಿಪ್ರೀತ್ ಕೂಡ ಅರ್ಜಿ ಸಲ್ಲಿಸಿ, ರಾಮ್ ರಹೀಂಗೆ ಮೈಗ್ರೇನ್ ಹಾಗೂ ಹೊಟ್ಟೆಯ ನೋವು ಇದೆ. ಜೈಲಿಗೆ ಹೋಗಲು ಅವಕಾಶ ನೀಡಬೇಕು ಎಂದು ಕೋರಿದಳು. ಅದಕ್ಕೆ ನ್ಯಾಯಾಧೀಶರು ಅನುಮತಿ ನೀಡಲಿಲ್ಲ. ಹೆಲಿಕಾಪ್ಟರ್'ನಲ್ಲಿ ರೋಹ್ತಕ್ ಜೈಲು ತಲುಪಿದ ಬಳಿಕ, ಇಬ್ಬರನ್ನೂ ಒಟ್ಟಿಗೇ ಇಡಬೇಕು. ಈ ಸಂಬಂಧ ನ್ಯಾಯಾಲಯ ಕೂಡ ಮೌಖಿಕ ಸೂಚನೆ ನೀಡಿದೆ ಎಂದು ರಾಮ್ ರಹೀಂ ಹಾಗೂ ಹನಿಪ್ರೀತ್ ಜೈಲಧಿಕಾರಿಗಳಿಗೆ ಹೇಳಿದರು. ಒಂದು ವೇಳೆ ಒಪ್ಪದಿದ್ದರೆ ಗಲಾಟೆಯಾಗುತ್ತದೆ ಎಂದು ಎಚ್ಚರಿಸಿದರು.
ಅಧಿಕಾರಿ ಒಪ್ಪದಿದ್ದಾಗ ಫೋನ್ ಬಳಸಿ ಚಂಡೀಗಢ ಹಾಗೂ ದೆಹಲಿಗೆ ಹನಿಪ್ರೀತ್ ಫೋನ್ ಮಾಡಿದ್ದರು. ಜೊತೆಗೆ ಸಿಎಂಗೆ ಹೇಳಿ ನಿನ್ನನ್ನು ಸಸ್ಪೆಂಡ್ ಮಾಡಿಸ್ತೀನಿ ಅಂತ ಗುರ್ಮೀತ್ ಅಧಿಕಾರಿಗೆ ಬೆದರಿಸಿದ್ದರು ಎಂದು ವರದಿಯೊಂದು ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.