ಚೀನಾಗೆ ಬುದ್ಧಿ ಕಲಿಸಿದ ಭಾರತೀಯರು, ಚೀನಾ ಮೊಬೈಲ್'ಗಳ ಮಾರಾಟ ಕುಸಿತ: ತವರಿಗೆ ಮರಳುತ್ತಿರುವ ನೌಕರರು!

By Suvarna Web DeskFirst Published Aug 29, 2017, 11:40 AM IST
Highlights

ಡೋಕ್ಲಾಮ್‌'ನಲ್ಲಿ ಭಾರತ ಹಾಗೂ ಚೀನಾ ನಡುವೆ ಉದ್ಭವಿಸಿದ್ದ ಬಿಕ್ಕಟ್ಟು ಚೀನಾದ ಮೊಬೈಲ್ ಕಂಪನಿಗಳಿಗೆ ಭಾರಿ ಹೊಡೆತ ನೀಡಿದೆ. ಚೀನಾ ವಿರೋಧಿ ಭಾವನೆ ಭಾರತೀಯರಲ್ಲಿ ಬಲವಾಗಿ ಮೊಳೆತ ಫಲವಾಗಿ ಚೀನಿ ಮೂಲದ ಮೊಬೈಲ್ ಕಂಪನಿಗಳು ಅದರಲ್ಲೂ ವಿಶೇಷವಾಗಿ ಒಪ್ಪೋ ಹಾಗೂ ವೀವೊ ಮೊಬೈಲ್ ಗಳ ಮಾರಾಟ ಜುಲೈ ಮತ್ತು ಆಗಸ್ಟ್‌ನಲ್ಲಿ ಗಣನೀಯವಾಗಿ ಕುಸಿದಿದೆ.

ಕೋಲ್ಕತಾ(ಆ.29): ಡೋಕ್ಲಾಮ್‌'ನಲ್ಲಿ ಭಾರತ ಹಾಗೂ ಚೀನಾ ನಡುವೆ ಉದ್ಭವಿಸಿದ್ದ ಬಿಕ್ಕಟ್ಟು ಚೀನಾದ ಮೊಬೈಲ್ ಕಂಪನಿಗಳಿಗೆ ಭಾರಿ ಹೊಡೆತ ನೀಡಿದೆ. ಚೀನಾ ವಿರೋಧಿ ಭಾವನೆ ಭಾರತೀಯರಲ್ಲಿ ಬಲವಾಗಿ ಮೊಳೆತ ಫಲವಾಗಿ ಚೀನಿ ಮೂಲದ ಮೊಬೈಲ್ ಕಂಪನಿಗಳು ಅದರಲ್ಲೂ ವಿಶೇಷವಾಗಿ ಒಪ್ಪೋ ಹಾಗೂ ವೀವೊ ಮೊಬೈಲ್ ಗಳ ಮಾರಾಟ ಜುಲೈ ಮತ್ತು ಆಗಸ್ಟ್‌ನಲ್ಲಿ ಗಣನೀಯವಾಗಿ ಕುಸಿದಿದೆ.

ಹೀಗಾಗಿ ದೇಶದಲ್ಲಿ ದುಡಿಯುತ್ತಿದ್ದ ಆ ಎರಡೂ ಕಂಪನಿಗಳ ಸುಮಾರು 400 ಚೀನಿ ನೌಕರರು ಗಂಟು, ಮೂಟೆ ಕಟ್ಟಿಕೊಂಡು ತವರಿಗೆ ಮರಳುತ್ತಿದ್ದಾರೆ. ಡೋಕ್ಲಾಮ್ ಬಿಕ್ಕಟ್ಟು ಸೃಷ್ಟಿಯಾದ ಬಳಿಕ ಈ ಎರಡೂ ಕಂಪನಿಗಳ ಮೊಬೈಲ್ ಮಾರಾಟದಲ್ಲಿ ಶೇ.30ರಷ್ಟು ಕುಸಿತ ಕಂಡುಬಂದಿದೆ.

ದೇಶದಲ್ಲಿ ಚೀನಾ ಮೂಲದ ಕ್ಸಿಯೋಮಿ, ಲೆನೋವೋ, ಮೋಟೊ ರೋಲ ಹಾಗೂ ಒನ್‌'ಪ್ಲಸ್ ಕಂಪನಿಯ ಮೊಬೈಲ್‌'ಗಳೂ ಬಿಕರಿಯಾಗುತ್ತಿವೆಯಾದರೂ, ಒಪ್ಪೋ ಹಾಗೂ ವೀವೊ ಮಾತ್ರ ಚೀನಿ ಬ್ರ್ಯಾಂಡ್‌'ಗಳು ಎಂದು ಜನಮಾನಸದಲ್ಲಿ ಗಟ್ಟಿಯಾಗಿ ಬೇರೂರಿರುವುದೇ ಮಾರಾಟ ಕುಸಿಯಲು ಕಾರಣ ಎನ್ನಲಾಗಿದೆ.

click me!