ಭಾರತದ ನೀಟ್ ಎಕ್ಸಾಂ ಬಗ್ಗೆ ಆಸ್ಟ್ರೇಲಿಯಾದಿಂದ ಬಂದ ಸುದ್ದಿ

By Web DeskFirst Published Jul 13, 2019, 4:56 PM IST
Highlights

ಪ್ರತಿ ವರ್ಷ 13 ಲಕ್ಷ ವಿದ್ಯಾರ್ಥಿಗಳು ನ್ಯಾಶನಲ್ ಎಲಿಜಬಿಲಿಟಿ ಕಮ್ ಎಂಟ್ರೆಸ್ ಎಕ್ಸಾಂ ಅಂದರೆ ನೀಟ್ ಪರೀಕ್ಷೆಯನ್ನು ಭಾರತದಲ್ಲಿ ಬರೆಯುತ್ತಿದ್ದಾರೆ.

ಸಿಡ್ನಿ[ಜು. 13]  ವೈದ್ಯ ಶಿಕ್ಷಣಕ್ಕೆ ಆಯ್ಕೆಯಾಗಬೇಕು ಎನ್ನುವವರಿಗೆ ಸರಕಾರ ಈ ಮಾನದಂಡ ಜಾರಿ ಮಾಡಿಕೊಂಡಿದೆ. ವೈದ್ಯ ಶಿಕ್ಷಣಕ್ಕೆ ಪ್ರವೇಶ ಪಡೆಯಬೇಕು ಎಂದಾದರೆ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲೇಬೇಕು.

180 ಬಹುಆಯ್ಕೆಯ ಪ್ರಶ್ನೆಗಳಿರುವ ಈ ಪರೀಕ್ಷೆಗೆ ಮೂರು ಗಂಟೆಯ ಕಾಲಾವಕಾಶ ನೀಡಲಾಗುತ್ತಿದೆ. ಪೆನ್ನು ಮತ್ತು ಪೇಪರ್ ಬಳಸಿ ಆಫ್ ಲೈನ್ ನಲ್ಲಿ ಪರೀಕ್ಷೆ ಬರೆಯುವಂತೆ ತಿಳಿಸಲಾಗುತ್ತಿದೆ.

ಈ ನೀಟ್ ಪರೀಕ್ಷೆಯ ಬಗ್ಗೆ ಸಂಶೋಧನೆ ಮಾಡಿರುವ ಆಸ್ಟ್ರೇಲಿಯಾದ ಬ್ಲಾಗರ್, ಶಿಕ್ಷಣ ತಜ್ಞರೊಬ್ಬರು ಯು ಟ್ಯೂಬ್ ನಲ್ಲಿ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ಟೋಬಿ ಹೆಸರಿನ ಶಿಕ್ಷಣ ತಜ್ಞರು ನೀಟ್ ಪರೀಕ್ಷೆ ಅತಿ ಕಠಿಣ ಪರೀಕ್ಷೆಗಳ ಸಾಲಿನಲ್ಲಿ ನಿಲ್ಲುತ್ತದೆ ಎಂದು ಹೇಳಿದ್ದಾರೆ.

ಕೆಲಸದ ಸಂದರ್ಶನ ಎಂದರೆ ಸಾಮಾನ್ಯವಾ?

ಈ ಪ್ರಶ್ನೆ ಪತ್ರಿಕೆ ಬಗ್ಗೆ ತೀರ್ಪು ಹೇಳಲು ನಾನು ಯಾರು ಅಲ್ಲ.. ಆದರೆ ನನಗೆ ಸಿಕ್ಕ ಮಾಹಿತಿಗಳ ಆಧಾರದಲ್ಲಿ ಒಂದು ವಿಶ್ಲೇಷಣೆ ಮಾಡಿದ್ದೇನೆ ಎನ್ನುತ್ತಾ ಎಲ್ಲ ಪ್ರಶ್ನೆಗಳಿಗೂ ವಿವರಣೆ ನೀಡುವ ಕೆಲಸ ಮಾಡಿದ್ದಾರೆ.

ಭೌಶಾಸ್ತ್ರದ 45 ಪ್ರಶ್ನೆಗಳಲ್ಲಿ 9 ಟ್ರಿಕ್ಕಿ, 25 ಸಾಮಾನ್ಯ ಕಷ್ಟದ ಪ್ರಶ್ನೆಗಳು, 7 ಸುಲಭ ಹೀಗೆ ಎಲ್ಲ ವಿಭಾಗಗಳ ಪ್ರಶ್ನೆಯನ್ನು ಸರಳೀಕರಿಸುವ ಕೆಲಸ ಮಾಡಿದ್ದಾರೆ. ವಿಡಿಯೋ ನೀವು ನೋಡಿಕೊಂಡು ಬನ್ನಿ...

click me!