ಮತ್ತೆ ಗಡಿ ನುಸುಳಿತಾ ಡ್ರ್ಯಾಗನ್ ಸೇನೆ: ಏನಂತಾರೆ ಜನರಲ್ ಬಿಪಿನ್ ರಾವತ್?

By Web DeskFirst Published Jul 13, 2019, 3:33 PM IST
Highlights

ಲಡಾಕ್ ಗಡಿಯಲ್ಲಿ ಚೀನಿ ಸೈನಿಕರು ಒಳನುಗ್ಗಿದ್ದರಾ?|ಡೆಮ್ಚೋಕ್ ವಲಯದಲ್ಲಿ ಚೀನಿ ಸೈನಿಕರಿಂದ ಅಕ್ರಮ ಒಳನುಸುಳುವಿಕೆ?| ಭಾರತೀಯ ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸ್ಪಷ್ಟೀಕರಣ| ಚೀನಿ ಸೈನಿಕರು ಅಕ್ರಮವಾಗಿ ಒಳನುಗ್ಗಿಲ್ಲ ಎಂದ ಭೂಸೇನಾ ಮುಖ್ಯಸ್ಥ| ಟಿಬೆಟಿಯನ್ನರ ಸಂಭ್ರಮಾಚರಣೆ ಮಾಹಿತಿ ಪಡೆಯಲು ಗಡಿ ಸಮೀಪ ಬಂದಿದ್ದ ಚೀನಿ ಸೈನಿಕರು|

ನವದೆಹಲಿ(ಜು.13): ಲಡಾಖ್ ಗಡಿ ಭಾಗದಲ್ಲಿ ಚೀನಿ ಸೈನಿಕರು ಒಳನುಸುಳಿದ್ದಾರೆ ಎಂಬ ವರದಿಗಳನ್ನು ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅಲ್ಲಗಳೆದಿದ್ದಾರೆ.

ಇಲ್ಲಿನ ನ ಡೆಮ್ಚೋಕ್ ವಲಯದಲ್ಲಿ ಚೀನಿ ಸೈನಿಕರು ಭಾರತದ ಗಡಿಯೊಳಗೆ ಒಳನುಸುಳಿದ್ದಾರೆಂಬುದು ಕೇವಲ ವದಂತಿ ಎಂದು ರಾವತ್ ಸ್ಪಷ್ಟಪಡಿಸಿದ್ದಾರೆ.

Army Chief Gen Bipin Rawat on 'Chinese troop movements in Demchok': There has been no intrusion. Chinese come & patrol their perceived line of actual control, which we try & prevent them. We try & attempt to reach out to our line of actual control which has been given to us. pic.twitter.com/9ATFHCQzhK

— ANI (@ANI)

ಕಳೆದ ಜು.6ರಂದು ದಲೈ ಲಾಮಾ ಹುಟ್ಟುಹಬ್ಬದ ಪ್ರಯುಕ್ತ ಟಿಬೆಟ್ ಧ್ವಜವನ್ನು ಹಾರಿಸಲಾಗಿತ್ತು. ಇದರಿಂದ ಕುಪಿತಗೊಂಡಿದ್ದ ಚೀನಾ ತನ್ನ ಸೈನಿಕರನ್ನು ಭಾರತದ ಗಡಿಯೊಳಗೆ ನುಗ್ಗಿಸಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಚೀನಿ ಸೈನಿಕರು ಭಾರತದ ಗಡಿಯೊಳಗೆ ನುಸುಳಿದ್ದಾರೆಂಬುದು ಕೇವಲ ವದಂತಿ ಎಂದಿರುವ ರಾವತ್, ಟಿಬೆಟಿಯನ್ನರ ಸಂಭ್ರಮಾಚರಣೆ ಕಂಡು ಚೀನಾ ಗಸ್ತು ಪಡೆ ಏನಾಗುತ್ತಿದೆ ಎಂದು ತಿಳಿಯಲು ಗಡಿ ಸಮೀಪ ಬಂದಿದ್ದರಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

click me!