ಕಮ್ಯುನಿಸ್ಟರ ಬಂಡವಾಳ ಕಂಡು ಹಿಡಿದಿದ್ದ ವಾಜಪೇಯಿ !

By Web DeskFirst Published Aug 21, 2018, 9:24 PM IST
Highlights

ಅವತ್ತು ನವರಾತ್ರಿ ಶುರು ಆದ್ದರಿಂದ ಬಂಗಾಳಿ ಕಮ್ಯುನಿಸ್ಟ್ ಸಂಸದರು ದೇವಿ ಪಾರಾಯಣ ಮಾಡುತ್ತಿದ್ದರಂತೆ. ಅದನ್ನು ನೋಡಿ ಜೋರಾಗಿ ನಕ್ಕ ಅಟಲ್‌ಜಿ, ಕಮ್ಯುನಿಸ್ಟರು ಬಂಗಾಳದಲ್ಲಿ ಸುದೀರ್ಘ ಕಾಲ ಉಳಿದುಕೊಳ್ಳಲು ದೇವಿ ಆಶೀರ್ವಾದವೂ ಇದೆ ಎಂದರಂತೆ.

ಅಟಲ್‌ಜಿ ಒಬ್ಬ ಹಿರಿಯ ಕಮ್ಯುನಿಸ್ಟ್ ಸಂಸದರೊಂದಿಗೆ ಸೋವಿಯತ್ ಒಕ್ಕೂಟಕ್ಕೆ ಹೋಗಿದ್ದರು. ಮಾಸ್ಕೊದ ಪಂಚತಾರಾ ಹೋಟೆಲ್‌ನಲ್ಲಿ ವಾಸ್ತವ್ಯ. ಬೆಳಿಗ್ಗೆ ಕಮ್ಯುನಿಸ್ಟ್ ಸಂಸದರು ಅಟಲ್‌ಜಿ ರೂಮ್‌ಗೆ ಬಂದು ನಂತರ ಇಬ್ಬರೂ ಉಪಾಹಾರಕ್ಕೆ ಹೋಗುವುದು ವಾಡಿಕೆ. ಒಂದು ದಿನ ಬೆಳಿಗ್ಗೆ ಅರ್ಧ ಗಂಟೆ ತಡವಾದರೂ ಕಮ್ಯುನಿಸ್ಟ್ ಸಂಸದರು ಬರದೇ ಇದ್ದಾಗ ಯಾಕೆ ಎಂದು ನೋಡಲು ಅಟಲ್‌ಜಿ ರೂಮ್‌ಗೆ ಹೋದರಂತೆ. ಅವತ್ತು ನವರಾತ್ರಿ ಶುರು ಆದ್ದರಿಂದ ಬಂಗಾಳಿ ಕಮ್ಯುನಿಸ್ಟ್ ಸಂಸದರು ದೇವಿ ಪಾರಾಯಣ ಮಾಡುತ್ತಿದ್ದರಂತೆ. ಅದನ್ನು ನೋಡಿ ಜೋರಾಗಿ ನಕ್ಕ ಅಟಲ್‌ಜಿ, ಕಮ್ಯುನಿಸ್ಟರು ಬಂಗಾಳದಲ್ಲಿ ಸುದೀರ್ಘ ಕಾಲ ಉಳಿದುಕೊಳ್ಳಲು ದೇವಿ ಆಶೀರ್ವಾದವೂ ಇದೆ ಎಂದರಂತೆ.

ದೀನ ದಯಾಳರ ಅಚಲ ಭಕ್ತ
ಅಟಲ್‌ಜಿಗೆ ಡಾಕ್ಟರ್ ಶ್ಯಾಮಪ್ರಸಾದ್ ಮುಖರ್ಜಿ ಮತ್ತು ದೀನ್‌ದಯಾಳ ಉಪಾಧ್ಯಾಯರ ಬಗ್ಗೆ ಅಪಾರ ಶ್ರದ್ಧೆ, ಗೌರವ. ಸ್ವತಃ ಅಟಲ್‌ಜಿ ತನ್ನ ಭಾಷಣ ಕಲೆಯನ್ನು ರಾಜಕೀಯ್ಕೆ ಉಪಯೋಗ ಆಗುವ ಹಾಗೆ ಜೋಡಿಸಿದ್ದೇ ದೀನ್‌ದಯಾಳರು ಎಂದು ಅನೇಕ ಬಾರಿ ಹೇಳಿಕೊಂಡಿದ್ದರು.

ಎಲ್ಲಿಯಾದರೂ ಅಟಲ್‌ಜಿ ಭಾಷಣ ಇದ್ದರೆ ತಯಾರಾಗಿ ತಾನೂ 3 ಗಂಟೆ ಮೊದಲೇ ಬಸ್ಸಿನಲ್ಲಿ ಹೋಗುತ್ತಿದ್ದ ದೀನ್‌ದಯಾಳರು, ಅಟಲ್‌ಜಿಗೆ ಮಾತ್ರ ಕಾರಿನ ವ್ಯವಸ್ಥೆ ಮಾಡಿಕೊಡುತ್ತಿದ್ದರಂತೆ. ತಾನು ಹರಿದ ಕುರ್ತಾ ಹಾಕಿಕೊಂಡು ಪ್ರವಾಸ ಮಾಡುತ್ತಿದ್ದ ದೀನ್‌ದಯಾಳರು ನನಗೆ ಮಾತ್ರ ಹೊಸ ಹೊಸ ಕುರ್ತಾ ಬಟ್ಟೆ ತಂದುಕೊಡುತ್ತಿದ್ದರು ಎಂದು ಅಟಲ್‌ಜಿ ಹೇಳಿಕೊಂಡಿದ್ದಾರೆ. 

1977ರಲ್ಲಿ ಜನಸಂಘವನ್ನು ಜನತಾ ಪಕ್ಷದ ಜೊತೆ ವಿಲೀನಗೊಳಿಸುವ ಪ್ರಶ್ನೆ ಬಂದಾಗ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅಟಲ್‌ಜಿ, ‘ಜನಸಂಘ ಪಂಡಿತ ದೀನ್‌ದಯಾಳ್ ಉಪಾಧ್ಯಾಯರು ತನ್ನ ಬೆವರು ಮತ್ತು ತಪಸ್ಸಿನಿಂದ ಕಟ್ಟಿದ ಪಕ್ಷ. ಇದನ್ನು ಜನತಾ ಪಕ್ಷದೊಂದಿಗೆ ವಿಲೀನಗೊಳಿಸಲು ನನ್ನ ಮನಸ್ಸು ಒಪ್ಪುವುದಿಲ್ಲ. ಆದರೆ ಅಡ್ವಾಣಿಯಂಥ ಒಬ್ಬ ಪಕ್ಷ ನಿಷ್ಠ ರಾಜಕಾರಣಿ ಇಂಥ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರೆ ಅವರ
ಮೇಲೆ ನನಗೆ ನಂಬಿಕೆ ಇದೆ’ ಎಂದು ಹೇಳಿದ್ದರಂತೆ.
 

click me!