
ಇಸ್ಲಾಮಾಬಾದ್[ಜು.31]: ಪಾಕಿಸ್ತಾನದ ಸೇನಾ ತರಬೇತಿ ವಿಮಾನವೊಂದು ತರಬೇತಿ ವೇಳೆಯೇ ಅಪಘಾತಕ್ಕೀಡಾಗಿ ಇಬ್ಬರು ಪೈಲಟ್, ಮೂವರು ಸೇನಾ ಸಿಬ್ಬಂದಿ, 14 ನಾಗರೀಕರು ಸೇರಿ ಒಟ್ಟು 19 ಜನ ಸಾವನ್ನಪ್ಪಿ, 12 ಜನ ಗಾಯಗೊಂಡ ಘಟನೆ ರಾವಲ್ಪಿಂಡಿಯಲ್ಲಿ ಮಂಗಳವಾರ ಜರುಗಿದೆ.
ರಾವಲ್ಪಿಂಡಿ ಸಮೀಪದ ಮೋರಾ ಕಾಲು ಉಪನಗರದಲ್ಲಿ ಈ ದುರ್ಘಟನೆ ಸಂಭವಿಸಿದೆ. ತರಬೇತಿ ಹಾರಾಟದ ವೇಳೆ ಸೇನಾ ವಿಮಾನ ನಾಗರಿಕ ವಸತಿ ಪ್ರದೇಶದಲ್ಲಿ ಬಿದ್ದ ಪರಿಣಾಮ ಮನೆಗಳಲ್ಲಿದ್ದ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗಿದ್ದು, ಸುಮಾರು 4-5 ಮನೆಗಳೂ ಸಹ ಸಂಪೂರ್ಣ ಹಾನಿಗೀಡಾಗಿವೆ.
ಈ ಘಟನೆಯಲ್ಲಿ ಗಾಯಗೊಂಡವರೆಲ್ಲರೂ ತೀವ್ರವಾದ ಗಾಯ ಮತ್ತು ಆಘಾತಕ್ಕೆ ಒಳಗಾಗಿದ್ದು, ಅವರನ್ನು ರಾವಲ್ಪಿಂಡಿ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.