
ಚಂದೌಲಿ[ಜು.31]: ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗದ್ದಕ್ಕೆ ಯುವಕನೋರ್ವನನ್ನು ಬೆಂಕಿ ಹಚ್ಚಿ ಸುಟ್ಟಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಲಖನೌದ ಸೈಯದ್ ರಾಜಾನಗರದ ಮಹಮ್ಮದ್ ಖಾಲಿದ್ ಮೃತ ಯುವಕ.
ನಾಲ್ವರ ಗುಂಪೊಂದು ಮಹಮ್ಮದ್‌ಗೆ ಜೈಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಸೂಚಿಸಿತ್ತು. ಅದಕ್ಕೆ ಆತ ಒಪ್ಪದೇ ಇದ್ದಾಗ ಆತನನ್ನು ಅಪಹರಿಸಿ, ಆತನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿತ್ತು ಎನ್ನಲಾಗಿದೆ. ಶೇ.50 ರಷ್ಟುಸುಟ್ಟಗಾಯಕ್ಕೆ ತುತ್ತಾಗಿದ್ದ ಖಾಲಿದ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾನೆ.
ಜೈ ಶ್ರಿರಾಮ್ ಎನ್ನದ್ದಕ್ಕೆ ಮಗನನ್ನು ಕೊಲೆ ಮಾಡಲಾಗಿದೆ ಎಂದು ಮೃತ ಖಾಲಿದ್‌ನ ತಂದೆ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.