
ಬೆಂಗಳೂರು (ಸೆ.04): ದಿವಂಗತ ನಟ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಮಂಜೂರಾಗಿದ್ದ ಜಮೀನನ್ನು ನ್ಯಾಯಾಂಗ ಇಲಾಖೆಗೆ ಮಂಜೂರು ಮಾಡಿದ್ದನ್ನು ಸುವರ್ಣನ್ಯೂಸ್ ಕೆಲವೇ ದಿನಗಳ ಹಿಂದೆಯಷ್ಟೇ ಬಯಲಿಗೆಳೆದಿತ್ತು. ವರದಿ ಪ್ರಸಾರವಾದ ನಂತರ ಕಂದಾಯ ಇಲಾಖೆ ಎಚ್ಚೆತ್ತುಕೊಂಡಿದೆ. ನ್ಯಾಯಾಂಗ ಇಲಾಖೆಗೆ ಜಮೀನು ಮಂಜೂರು ಮಾಡಿರುವ ಕುರಿತು ವರದಿ ಕೊಡಿ ಎಂದು ತಹಶೀಲ್ದಾರ್ಗೆ ಬೆಂಗಳೂರು ದಕ್ಷಿಣ ವಿಭಾಗದ ಅಸಿಸ್ಟಂಟ್ ಕಮಿಷನರ್ ಸೂಚಿಸಿದ್ದಾರೆ. ಇದು ಸುವರ್ಣನ್ಯೂಸ್ ಇಂಪ್ಯಾಕ್ಟ್.
ಕೇಂಗೇರಿ ಹೋಬಳಿ ವ್ಯಾಪ್ತಿಯ ಮೈಲಸಂದ್ರದ ಸರ್ವೆ ನಂಬರ್ 22ರಲ್ಲಿ 2 ಎಕರೆ ಜಮೀನನ್ನು ದಿವಂಗತ ನಟ ವಿಷ್ಣುವರ್ಧನ್ ಸ್ಮಾರಕಕ್ಕೆ ಕೊಡಲು ನಿರಾಕರಿಸಿದ್ದ ಕಂದಾಯ ಇಲಾಖೆ, ಅದೇ ಜಮೀನನ್ನು ನ್ಯಾಯಾಂಗ ಇಲಾಖೆಗೆ ಮಂಜೂರು ಮಾಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿತ್ತು. ಕಂದಾಯ ಇಲಾಖೆಯ ತಾರತಮ್ಯವನ್ನು ಸುವರ್ಣನ್ಯೂಸ್ ಬಯಲಿಗೆಳೆದ ನಂತರ ಅಸಿಸ್ಟಂಟ್ ಕಮಿಷನರ್ ಹರೀಶ್ ನಾಯಕ್ ಎಚ್ಚೆತ್ತುಕೊಂಡಿದ್ದಾರೆ.
ಅರಣ್ಯ ಪ್ರದೇಶದ 100 ಮೀಟರ್ ವ್ಯಾಪ್ತಿಯೊಳಗಿದ್ದ ಜಮೀನನ್ನು ವಿಷ್ಣು ಸ್ಮಾರಕಕ್ಕೆ ಮಂಜೂರು ಮಾಡಿದ್ದನ್ನು ರದ್ದುಗೊಳಿಸ್ಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿತ್ತು. ಆದರೆ, ಅದೇ ಜಮೀನನ್ನು ನ್ಯಾಯಾಂಗ ಇಲಾಖೆಗೆ ಮಂಜೂರು ಮಾಡಿದ್ದ ಕಂದಾಯ ಇಲಾಖೆ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿತ್ತು. ಆದರೀಗ, ನ್ಯಾಯಾಂಗ ಇಲಾಖೆಗೆ ಮಂಜೂರು ಮಾಡಿರುವುದನ್ನು ಕೂಲಂಕಷವಾಗಿ ಪರಿಶೀಲಿಸಿ ವರದಿ ಕೊಡಿ ಎಂದು ಬೆಂಗಳೂರು ದಕ್ಷಿಣ ವಿಭಾಗದ ಅಸಿಸ್ಟಂಟ್ ಕಮಿಷನರ್ ಹರೀಶ್ ನಾಯಕ್ ಅವರು ತಹಶೀಲ್ದಾರ್ಗೆ ಸೂಚಿಸಿದ್ದಾರೆ.
ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಮಂಜೂರಾಗಿದ್ದು 2 ಎಕರೆ. ನ್ಯಾಯಾಂಗ ಇಲಾಖೆಗೆ ಕಾಯ್ದಿರಿಸಿ ಬರೋಬ್ಬರಿ 10 ಎಕರೆ ಮಂಜೂರು ಮಾಡಿತ್ತು. ಇದು ಕೂಡ ಬಫರ್ ಜೋನ್ನಲ್ಲಿ ಬರುತ್ತೆ. ಬಫರ್ ಜೋನ್ನಲ್ಲಿನ ಜಮೀನನ್ನೇ ಪುನಃ ನ್ಯಾಯಾಂಗ ಇಲಾಖೆಗೆ ಕಾಯ್ದಿರಿಸಿ ಹೊರಡಿಸಿರುವ ಆದೇಶಕ್ಕೆ ಅರಣ್ಯ ಇಲಾಖೆ ತಕರಾರು ತೆಗೆದಿತ್ತು. ನ್ಯಾಯಾಂಗ ಇಲಾಖೆಗೆ ಕಾಯ್ದಿರಿಸಿ ಆದೇಶ ಹೊರಡಿಸುವ ಮೊದಲು ಅರಣ್ಯ ಇಲಾಖೆಯ ಸಹಮತಿಯನ್ನೇ ಪಡ್ಕೊಂಡಿರಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.