ಉಲ್ಟಾ ಹೊಡೆದ ಸಚಿವ ಸತೀಶ್‌ ಜಾರಕಿಹೊಳಿ

Published : May 01, 2019, 09:10 AM IST
ಉಲ್ಟಾ ಹೊಡೆದ ಸಚಿವ ಸತೀಶ್‌ ಜಾರಕಿಹೊಳಿ

ಸಾರಾಂಶ

ಕೈ ನಾಯಕರ ನಡುವೆಯೇ ಅಸಮಾಧಾನದ ಹೊಗೆಯೊಂದು ಉಪ ಚುನಾವಣೆ ಸಂದರ್ಭದಲ್ಲಿ ಕಾಣಿಸಿಕೊಂಡಿದೆ. ಇದೇ ವೇಳೆ ಸತೀಶ್ ಜಾರಿಹೊಳಿ ಉಲ್ಟಾ ಹೊಡೆದಿದ್ದಾರೆ. ಯಾವ ವಿಚಾರದಲ್ಲಿ..?

ಬೆಂಗಳೂರು :  ಡಿ.ಕೆ.ಶಿವಕುಮಾರ್‌ ಅವರಿಗೆ ಕುಂದಗೋಳ ಉಸ್ತುವಾರಿ ನೀಡಿರುವುದಕ್ಕೆ ನನ್ನ ಯಾವ ಆಕ್ಷೇಪವೂ ಇಲ್ಲ, ಅಸಮಾಧಾನವೂ ಇಲ್ಲ. ಡಿ.ಕೆ.ಶಿವಕುಮಾರ್‌ ಪಕ್ಷದ ಹಿರಿಯ ನಾಯಕರು, ಹಿರಿತನದ ಆಧಾರದ ಮೇಲೆ ಅವರಿಗೆ ಪಕ್ಷ ಈ ಉಸ್ತುವಾರಿ ನೀಡಿದೆ. ಇದಕ್ಕೆ ನನಗೇನೂ ಬೇಸರವಿಲ್ಲ. ಪಕ್ಷದ ಗೆಲುವು ಮುಖ್ಯ. ಹಾಗಾಗಿ ನಾವೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡುತ್ತೇವೆ.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಪಕ್ಷವು ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಉಸ್ತುವಾರಿ ವಹಿಸಿದ್ದಕ್ಕೆ ಇದುವರೆಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಬಂದಿದ್ದ ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ಅವರು ಮಂಗಳವಾರ ಉಲ್ಟಾ ಹೊಡೆದ ರೀತಿಯಿದು.

ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್‌ ಅವರೊಂದಿಗೆ ಸೇರಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಕೆಲಸ ಮಾಡುವೆ ಎಂದು ತಿಳಿಸಿದ್ದಾರೆ.

ಇನ್ನು ಆಪರೇಷನ್‌ ಕಮಲ ಕುರಿತು ಮಾತನಾಡಿದ ಅವರು, ಮೈತ್ರಿ ಸರ್ಕಾರವನ್ನು ಕೆಡವುವಷ್ಟುಶಾಸಕರ ಸಂಖ್ಯಾಬಲ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಬಳಿ ಇಲ್ಲ. ಮೊದಲಿದ್ದಷ್ಟುಸಂಖ್ಯಾಬಲವೂ ಅವರ ಬಳಿ ಈಗಿಲ್ಲ. ಆದರೂ, ಸರ್ಕಾರ ಉರುಳಿಸುವ ಪ್ರಯತ್ನವನ್ನು ಅವರು ನಿಲ್ಲಿಸುವುದಿಲ್ಲ. ಅವರ ಪ್ರಯತ್ನ ತಡೆಯುವ ಶಕ್ತಿ ಮೈತ್ರಿ ಪಕ್ಷಗಳಿಗಿದೆ ಎಂದು ಹೇಳಿದರು.

ಹಾಗಾದರೆ, ಸರ್ಕಾರದ ಅಸ್ತಿತ್ವಕ್ಕೆ ಯಾವುದೇ ಸಮಸ್ಯೆ ಇಲ್ಲವಾ ಎಂಬ ಪ್ರಶ್ನೆಗೆ, ಮೈತ್ರಿ ಸರ್ಕಾರ ರಚನೆಯಾದ ದಿನದಿಂದಲೂ ಬಿಜೆಪಿಯವರು ಸರ್ಕಾರ ಕೆಡವುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಅವರ ಮಧ್ಯೆ ರಮೇಶ್‌ ಜಾರಕಿಹೊಳಿ ಸೇರಿಕೊಂಡಿದ್ದಾರೆ. ಅವರ ಬಳಿ ಸಂಖ್ಯಾಬಲ ಇಲ್ಲದ್ದಕ್ಕೆ ಈಗ ತಾತ್ಕಾಲಿಕವಾಗಿ ಸುಮ್ಮನಾಗಿರಬಹುದು. ಒಬ್ಬರು, ಇಬ್ಬರು ಅಥವಾ ಮೂವರು ರಾಜೀನಾಮೆ ನೀಡಿದರೆ ಸರ್ಕಾರ ಏನೂ ಆಗುವುದಿಲ್ಲ. ಆದರೆ, ಮತ್ತೆ ಅವರು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಾರೆ. ಅದನ್ನು ತಡೆಯುವ ಶಕ್ತಿ ಮೈತ್ರಿ ಕೂಟದ ಎರಡೂ ಪಕ್ಷಗಳಿಗೂ ಇದೆ ಎಂದರು.

ನಾನಿಂದು ಈ ಸ್ಥಿತಿಗೆ ತಲುಪಲು ಸತೀಶ್‌ ಜಾರಕಿಹೊಳಿ ಅವರೇ ಕಾರಣ ಎಂದು ರಮೇಶ್‌ ಜಾರಕಿಹೊಳಿ ಆರೋಪ ಮಾಡಿದ್ದಾರಲ್ಲಾ ಎಂಬ ಪ್ರಶ್ನೆಗೆ, ಅವರ ಆರೋಪ ಸತ್ಯಕ್ಕೆ ದೂರವಾದುದು. ಅವರನ್ನು ಸಚಿವ ಸಂಪುಟ ಸಭೆಗೆ ಹೋಗಬೇಡಿ, ಪಕ್ಷದ ಸಭೆ, ಸಮಾರಂಭಗಳಲ್ಲಿ ಭಾಗವಹಿಸಬೇಡಿ ಎಂದು ನಾನು ಹೇಳಿರಲಿಲ್ಲ. ಅವರೇನೂ ಮೊದಲ ಬಾರಿಗೆ ಶಾಸಕರಾಗಿರುವವರಲ್ಲ. ಐದು ಬಾರಿ ಗೆದ್ದು ವಿಧಾನಸಭೆಗೆ ಬಂದವರು. ವಿಚಾರ ಮಾಡುವ ಶಕ್ತಿ ಅವರಿಗಿಲ್ಲವೆ ಎಂದು ತಿರುಗೇಟು ನೀಡಿದರು.

ಮತ್ತೆ ಅವರ ಮನವೊಲಿಸುವ ಪ್ರಯತ್ನ ನಡೆಸುತ್ತೀರಾ ಎಂಬ ಪ್ರಶ್ನೆಗೆ, ಈಗಾಗಲೇ ಕಾಂಗ್ರೆಸ್‌ನ ಬಹುತೇಕ ನಾಯಕರು ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಸಂಧಾನ ಯಶಸ್ವಿಯಾಗಿಲ್ಲ ಎಂದಷ್ಟೇ ಹೇಳಿದರು.

ಕುಂದಗೋಳ ಕ್ಷೇತ್ರದಲ್ಲಿ ಪಕ್ಷದ ನಾಯಕರ ನಡುವಿನ ಸಮಸ್ಯೆ ಬಗೆಹರಿಸಲು ಹೈಕಮಾಂಡ್‌ ಸೂಚನೆ ನೀಡಿದೆ. ಆ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇನೆ. ಕ್ಷೇತ್ರದಲ್ಲಿ ನಮ್ಮ ಪಕ್ಷದ ಸುಮಾರು ಎಂಟು ಜನರು ನಾಮಪತ್ರ ಸಲ್ಲಿಸಿದ್ದಾರೆ. ಐವರ ಮನವೊಲಿಸಲಾಗಿದ್ದು, ನಾಮಪತ್ರ ವಾಪಸ್‌ ಪಡೆಯಲು ಒಪ್ಪಿದ್ದಾರೆ. ಉಳಿದವರನ್ನು ಮನವೊಲಿಸಲಾಗುವುದು.

- ಸತೀಶ್‌ ಜಾರಕಿಹೊಳಿ, ಅರಣ್ಯ ಸಚಿವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Actress Assault Case: ಆರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಘೋಷಿಸಿದ ಕೇರಳ ಕೋರ್ಟ್‌
ಹುನುಗುಂದದಲ್ಲಿ ಮಂಕಿ ಕ್ಯಾಪ್ ಗ್ಯಾಂಗ್: ಒಂದೇ ರಾತ್ರಿ, 9 ಮನೆ ಕಳವು, ಪೋಲಿಸರ ಮನೆಗಳನ್ನೇ ಬಿಡದ ಖದೀಮರು!