ಜೆಟ್ ಸಿಬ್ಬಂದಿಗಳನ್ನು ತೆಕ್ಕೆಗೆ ಪಡೆದ ವಿಸ್ತಾರ ಏರ್‌ಲೈನ್ಸ್

By Web DeskFirst Published May 1, 2019, 9:07 AM IST
Highlights

ಜೆಟ್‌ನ 100 ಪೈಲಟ್‌, 400 ಸಿಬ್ಬಂದಿ ತೆಕ್ಕೆಗೆ ಪಡೆದ ವಿಸ್ತಾರ ಸಂಸ್ಥೆ | ಉದ್ಯೋಗ ಕಳೆದುಕೊಂಡು ತ್ರಿಶಂಕು ಸ್ಥಿತಿಯಲ್ಲಿರುವ ಜೆಟ್‌ ಏರ್‌ವೇಸ್‌ ವಿಮಾನದ ಸಿಬ್ಬಂದಿ ನೆರವಿಗೆ ಧಾವಿಸಿದ ವಿಸ್ತಾರ ಏರ್‌ಲೈನ್ಸ್ 

ಮುಂಬೈ (ಮೇ. 01): ತೀವ್ರ ಆರ್ಥಿಕ ನಷ್ಟಅನುಭವಿಸಿ ತಾತ್ಕಾಲಿಕವಾಗಿ ವಿಮಾನ ಹಾರಾಟ ಸ್ಥಗಿತದಿಂದ ಉದ್ಯೋಗ ಕಳೆದುಕೊಂಡು ತ್ರಿಶಂಕು ಸ್ಥಿತಿಯಲ್ಲಿರುವ ಜೆಟ್‌ ಏರ್‌ವೇಸ್‌ ವಿಮಾನದ ಸಿಬ್ಬಂದಿ ನೆರವಿಗೆ ಟಾಟಾ ಮಾಲೀಕತ್ವದ ವಿಸ್ತಾರ ವಿಮಾನಯಾನ ಧಾವಿಸಿದೆ.

ಜೆಟ್‌ ಏರ್‌ವೇಸ್‌ನ 100 ಪೈಲಟ್‌ಗಳು ಹಾಗೂ 400 ಕ್ಯಾಬಿನ್‌ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲು ವಿಸ್ತಾರ ಮುಂದಾಗಿದೆ. ಟಾಟಾ ಸಮೂಹದ ವಿಸ್ತಾರ ವಿಮಾನದಲ್ಲಿನ ಕ್ಯಾಬಿನ್‌ ಸಿಬ್ಬಂದಿ ನೇಮಕಾತಿಗಾಗಿ ಮುಂಬೈ ಮತ್ತು ಗುರುಗಾಂವ್‌ನಲ್ಲಿ ಮಂಗಳವಾರ ಏಕಕಾಲದಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿದೆ ಎಂದು ವಿಸ್ತಾರ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.

ಯಾವುದೇ ಸಂಸ್ಥೆಗಳು ಹಣ ಹೂಡಿಕೆ ಅಥವಾ ಬ್ಯಾಂಕ್‌ ಸಾಲ ಲಭ್ಯವಾಗದ ಹಿನ್ನೆಲೆಯಲ್ಲಿ ಏ.17ರಂದು ಜೆಟ್‌ ಏರ್‌ವೇಸ್‌ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಇದರಿಂದಾಗಿ 1300 ಪೈಲಟ್‌ಗಳು ಮತ್ತು  2000 ಕ್ಯಾಬಿನ್‌ ಸಿಬ್ಬಂದಿ ಸೇರಿ ಒಟ್ಟು 22000 ಜೆಟ್‌ ಏರ್‌ವೇಸ್‌ ಸಿಬ್ಬಂದಿ ಕೆಲಸ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದರು.
 

click me!