
ಅಸ್ಸಾಂ(ನ.11): ವೃತ್ತಿ ಹಾಗೂ ಮನೆ ಎರಡನ್ನೂ ನಿಭಾಯಿಸುವುದರಲ್ಲಿ ಮಹಿಳೆಯರಿಗೆ ಸರಿಸಾಟಿ ಇಲ್ಲ. ಮಕ್ಕಳು, ಮನೆ ಹಾಗೂ ಕಚೇರಿ ಕೆಲಸವನ್ನೂ ನಿಭಾಯಿಸುವುದು ಸುಲಭದ ಮಾತಲ್ಲ. ಆದರೆ ಹಲವು ತಾಯಂದಿರು ತಮ್ಮ ಆಯಾಸ, ವಿಶ್ರಾಂತಿ ಲೆಕ್ಕಿಸಿದೇ ಯಶಸ್ವಿಯಾಗಿ ನಿಭಾಯಿಸುತ್ತಾರೆ. ಆದರೆ ಕೆಲವೊಮ್ಮೆ ಇಂತಹ ಅಮ್ಮಂದಿರಿಗೂ ಸಹಾಯ ಬೇಕಾಗುತ್ತೆ.
ಇದನ್ನೂ ಓದಿ: ಮಗುವಾದ ಮೇಲೆ ಉದ್ಯೋಗಕ್ಕೆ ಮರಳಿದ್ದಕ್ಕೆ ಪಶ್ಚಾತ್ತಾಪ ಬೇಕಿಲ್ಲ!
ಅಸ್ಸಾಂನಲ್ಲಿ ಇದೇ ರೀತಿಯ ಅಮ್ಮಂದಿರಿಗೆ ಪೊಲೀಸರು ಸಹಾಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಸ್ಸಾಂನಲ್ಲಿ ನವೆಂಬರ್ 10 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ(TET) ನಡೆಸಲಾಗಿತ್ತು. ಈ ವೇಳೆ ಪರೀಕ್ಷೆ ಬರೆಯಲು ಪುಟ್ಟ ಕಂದಮ್ಮಗಳ ಜೊತೆ ಆಗಮಿಸಿದ ತಾಯಂದಿರಿಗೆ ಪೊಲೀಸರು ನೆರವಾಗಿದ್ದಾರೆ. ಅಮ್ಮಂದಿರು ಪರೀಕ್ಷೆ ಬರೆಯುವಾಗಿ ಅಸ್ಸಾಂ ಮಹಿಳಾ ಪೊಲೀಸರು ಪುಟ್ಟ ಮಕ್ಕಳನ್ನು ಹಿಡಿದು ಆರೈಕೆ ಮಾಡಿದ್ದಾರೆ.
ಇದನ್ನೂ ಓದಿ: ಕಳ್ಳನನ್ನು ಹಿಡಿದುಕೊಂಡು ಠಾಣೆಗೆ ಹೋದ ವ್ಯಕ್ತಿ ಅಲ್ಲೇ ಹೃದಯಾಘಾತದಿಂದ ಸಾವು
ಅಸ್ಸಾಂನ ದರಾಂಗ್ ಜಿಲ್ಲೆಯಲ್ಲಿ ಅಮ್ಮಂದಿರು 2 ಗಂಟೆ 30 ನಿಮಿಷ ಪರೀಕ್ಷೆ ಬರೆದಿದ್ದಾರೆ. ವೇಳೆ ಪುಟ್ಟ ಪರೀಕ್ಷೆ ಮೇಲುಸ್ತವಾರಿಗೆ ನಿಯೋಜನೆಗೊಂಡಿದ್ದ ಪೊಲೀಸರು ಪುಟ್ಟ ಕಂದಮ್ಮಗಳ ಆರೈಕೆ ಮಾಡಿದ್ದಾರೆ. ಅಸ್ಸಾಂ ಪೊಲೀಸ್, ಟ್ವಿಟರ್ ಖಾತೆಯಲ್ಲಿ ಮಹಿಳಾ ಪೊಲೀಸರು ಆರೈಕೆ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.