ಗಾನ ಕೋಗಿಲೆ ಆರೋಗ್ಯದಲ್ಲಿ ಏರುಪೇರು: ICUನಲ್ಲಿ ಚಿಕಿತ್ಸೆ

By Web DeskFirst Published Nov 11, 2019, 5:57 PM IST
Highlights

ಹಿರಿಯ ಗಾಯಕಿ ಲತಾ ಮಂಗೇಶ್ಕರ್​ ಆಸ್ಪತ್ರೆಗೆ ದಾಖಲು|  ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಗಾಯಕಿ|| ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯಲ್ಲಿ ಲತಾ ಮಂಗೇಶ್ಕರ್​​​ಗೆ ಚಿಕಿತ್ಸೆ| ಐಸಿಯುನಲ್ಲಿ ಲತಾ ಮಂಗೇಶ್ಕರ್​ ಚಿಕಿತ್ಸೆ.

ಮುಂಬೈ(ನ. 11): ಭಾರತದ  ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಉಸಿರಾಟದ ತೊಂದರೆ ಬಳಲುತ್ತಿರುವ 90 ವರ್ಷದ ಲತಾ ಮಂಗೇಶ್ಕರ್ ಅವರನ್ನು  ಮುಂಬೈನ  ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಅವರ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

"

ಗಾನಕೋಗಿಲೆ ಲತಾ ಮಂಗೇಶ್ಕರ್ ಗೆ 90 ರ ಸಂಭ್ರಮ

1929, ಸೆ. 28ರಂದು ಜನಿಸಿದ ಲತಾ ಮಂಗೇಶ್ಕರ್, ಭಾರತದ ಅತ್ಯಂತ ಜನಪ್ರಿಯ ಗಾಯಕಿ ಎನಿಸಿರುವ ಲತಾ ಮಂಗೇಶ್ಕರ್ ಅವರು ಬಹುಭಾಷಾ ಗಾಯಕಿಯಾಗಿದ್ದಾರೆ.

ಹಿಂದಿ ಸೇರಿದಂತೆ 36 ಭಾಷೆಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಭಾರತದ ಅತ್ಯಂತ ಜನಪ್ರಿಯ ಗಾನ ಕೋಗಿಲೆ ಎನಿಸಿಕೊಂಡಿದ್ದು, ಇವರ ಸಾಧನೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಫ್ರಾನ್ಸಿನ ಅತ್ಯುನ್ನತ ನಾಗರಿಕ ಪ್ರಶಸ್ತಿ ಕೂಡಾ ಲಭಿಸಿದೆ.

ವಿಶೇಷ ಅಂದ್ರೆ ಹಿಂದಿ ಭಾಷೆಯೊಂದರಲ್ಲೇ 1 ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡಿ ದಾಖಲೆ ಮಾಡಿದ್ದಾರೆ.

ರೈಲ್ವೇ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ವೇಳೆ ಏಕ್‌ ಪ್ಯಾರ್‌ ಕಾ ನಗ್ಮಾ ಹೈ ಎಂದು ಥೇಟ್‌ ತನ್ನಂತೆ ಹಾಡಿ, ರಾತ್ರೋರಾತ್ರಿ ಸೂಪರ್‌ ಸ್ಟಾರ್‌ ಆಗಿರುವ ರಾನು ಮೊಂಡಲ್‌ ಪ್ರಸಿದ್ಧಿ ಕೊನೆವರೆಗೂ ನಿಲ್ಲುವುದಿಲ್ಲ ಎಂದು ಲತಾ ಮಂಗೇಶ್ಕರ್‌ ಹೇಳಿದ್ದರು.

click me!