
ಬಾಗಲಕೋಟೆ (ಜ.16): ಅಕ್ರಮ ಮರಳುದಂಧೆಯಲ್ಲಿ ನಿರತರಾಗಿದ್ದ ಖದೀಮರನ್ನು ಬಂಧಿಸಲು ಪೊಲೀಸ್ ಅಧಿಕಾರಿಯೊಬ್ಬರು ಸುಮಾರು 5 ಕಿ.ಮೀವರೆಗೆ ಓಡೋಡಿ ಬೆನ್ನಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಹುನಗುಂದ ತಾಲೂಕಿನ ಗಂಜಿಹಾಳ ಗ್ರಾಮದ ಬಳಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು, ಈ ಮದ್ಯೆ ಗಂಜಿಹಾಳ ಬಳಿ ಏಎಸ್'ಪಿ ಲಕ್ಷ್ಮಿಪ್ರಸಾದ ವಾಹನದಲ್ಲಿ ಹೋಗುತ್ತಿರುವ ವೇಳೆ ಹೊಲದಲ್ಲಿ ಅಕ್ರಮ ಮರಳು ತುಂಬಿದ್ದ ಟ್ರ್ಯಾಕ್ಟರ್ ಕಂಡು ವಿಚಾರಿಸಲು ತೆರಳಲು ಮುಂದಾಗಿದ್ದಾರೆ.
ಇದನ್ನು ಕಂಡ ಟ್ರ್ಯಾಕ್ಟರ್ ಚಾಲಕರು ಕಕ್ಕಾಬಿಕ್ಕಿಯಾಗಿ ಓಡಲು ಮುಂದಾಗಿದ್ದಾರೆ. ಆದರೆ ಬೆಂಬಿಡದ ಪೋಲಿಸ್ ಅಧಿಕಾರಿ ಬರೋಬ್ಬರಿ 4 ರಿಂದ 5 ಕಿ.ಮೀ ಬೆನ್ನತ್ತಿ ಟ್ರ್ಯಾಕ್ಟರ್ ಮಾಲೀಕನನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.