ಗಣಿ ಹಗರಣದಲ್ಲಿ ಮೂರು ಪಕ್ಷಗಳ ಸಿಎಂ ಹೆಸರು: ಸಂತೋಷ್​ ಹೆಗ್ಡೆ

By Suvarna Web Desk  |  First Published Jan 16, 2017, 1:49 AM IST

ಲೋಕಾಯುಕ್ತ ಸಂಸ್ಥೆ ಸಾಮಾನ್ಯ ಜನರಿಗೆ ನ್ಯಾಯಕೊಡಿಸುವ ಸಂಸ್ಥೆಯಾಗಿತ್ತು. ಆದರೆ ಸರ್ಕಾರ ಎಸಿಬಿ ರಚನೆ ಮಾಡುವ ಮೂಲಕ ಅದರ ಅಧಿಕಾರಗಳನ್ನು ಕಿತ್ತುಕೊಂಡಿದೆ ಎಂದು ಸಂತೋಷ್​ ಹೆಗ್ಡೆ ಹೇಳಿದ್ದಾರೆ.


ಕೊಪ್ಪಳ (ಜ.16): ಗಣಿ ಹಗರಣದಲ್ಲಿ ಮೂರು ಪಕ್ಷಗಳ ಮುಖ್ಯಮಂತ್ರಿಗಳ ಹೆಸರು ಇದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ| ಸಂತೋಷ್​ಹೆಗ್ಡೆ ಮಾಹಿತಿ ಹೊರಹಾಕಿದ್ದಾರೆ.

ಕೊಪ್ಪಳದಲ್ಲಿ ಈ ಮಾಹಿತಿ ಹೊರಹಾಕಿರುವ ಸಂತೋಷ್​ ಹೆಗ್ಡೆ ನಾನು ನೀಡಿರುವ ಗಣಿ ಹಗರಣದ ಬಗೆಗಿನ ವರದಿ ಧೂಳು ತಿನ್ನುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಈ ವರದಿಯನ್ನು ಜಾರಿಗೆ ಮಾಡಬೇಕಾದವರು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.

ಲೋಕಾಯುಕ್ತ ಸಂಸ್ಥೆ ಸಾಮಾನ್ಯ ಜನರಿಗೆ ನ್ಯಾಯಕೊಡಿಸುವ ಸಂಸ್ಥೆಯಾಗಿತ್ತು. ಆದರೆ ಸರ್ಕಾರ ಎಸಿಬಿ ರಚನೆ ಮಾಡುವ ಮೂಲಕ ಅದರ ಅಧಿಕಾರಗಳನ್ನು ಕಿತ್ತುಕೊಂಡಿದೆ.

ಎಸಿಬಿ ರಚನೆ ಮಾಡುವ ಮೂಲಕ ಸರ್ಕಾರ ಲೋಕಾಯುಕ್ತವನ್ನು ಹಲ್ಲುಕಿತ್ತ ಹಾವಿನಂತೆ ಮಾಡಿದೆ ಎಂದರು.

click me!