ಏಷ್ಯಾನೆಟ್‌ ನ್ಯೂಸ್‌.ಕಾಂ ವೀಕ್ಷಕರ ಸಂಖ್ಯೆ ಶೇ.50 ಏರಿಕೆ

Published : Nov 24, 2018, 09:03 AM IST
ಏಷ್ಯಾನೆಟ್‌ ನ್ಯೂಸ್‌.ಕಾಂ ವೀಕ್ಷಕರ ಸಂಖ್ಯೆ ಶೇ.50 ಏರಿಕೆ

ಸಾರಾಂಶ

 ಏಷಿಯಾನೆಟ್‌ ನ್ಯೂಸ್‌. ಕಾಂ ನೀಡುವ ಡಿಜಿಟಲ್‌ ಸುದ್ದಿಯ ವೀಕ್ಷಕರ ಸಂಖ್ಯೆ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ. 50 ರಷ್ಟುಬೆಳವಣಿಗೆಯಾಗುವ ಮೂಲಕ ಪ್ರಾದೇಶಿಕ ಮಟ್ಟದಲ್ಲಿ ಮುಂಚೂಣಿ ಸ್ಥಾನವನ್ನು ಪಡೆದುಕೊಂಡಿದೆ. 

ಬೆಂಗ​ಳೂರು :  ದೇಶದ ಪ್ರಮುಖ ಸುದ್ದಿ ಮತ್ತು ಮನರಂಜನಾ ಸಂಸ್ಥೆ ‘ಏಷಿಯಾನೆಟ್‌ ನ್ಯೂಸ್‌ ಮೀಡಿಯಾ ಅಂಡ್‌ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ’ಯ ಉಪಸಂಸ್ಥೆಯಾದ ‘ಏಷಿಯಾನೆಟ್‌ ನ್ಯೂಸ್‌ ಡಾಟ್‌ ಕಾಂ’ ನೀಡುವ ಡಿಜಿಟಲ್‌ ಸುದ್ದಿಯ ವೀಕ್ಷಕರ ಸಂಖ್ಯೆ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ. 50 ರಷ್ಟುಬೆಳವಣಿಗೆಯಾಗುವ ಮೂಲಕ ಪ್ರಾದೇಶಿಕ ಮಟ್ಟದಲ್ಲಿ ಮುಂಚೂಣಿ ಸ್ಥಾನದಲ್ಲಿದೆ.

ಇತ್ತೀಚೆಗೆ ಆರಂಭಿಸಿರುವ ‘ಮೈನೇಷನ್‌ ಡಾಟ್‌ ಕಾಂ’ ಮೂಲಕ ಮಲೆಯಾಳಂ, ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ನೀಡುವ ಡಿಜಿಟಲ್‌ ಸುದ್ದಿಯಲ್ಲಿ ಹಾಗೂ ಪ್ರಾದೇಶಿಕ ಮಟ್ಟದ ಸುದ್ದಿ ಸಂಸ್ಥೆಗಳಲ್ಲಿ ಏಷಿಯಾನೆಟ್‌ ನ್ಯೂಸ್‌ ಡಾಟ್‌ ಕಾಂ ಮುಂಚೂಣಿಯಲ್ಲಿದೆ. ಸಂಸ್ಥೆಯು ಸುದ್ದಿ ನೀಡುವಾಗ ಪ್ರಮುಖ ಅಂಶ ಹಾಗೂ ಆವಿಷ್ಕಾರಗಳಿಗೆ ಪ್ರಾಥಮಿಕ ಆದ್ಯತೆಯನ್ನು ನೀಡುತ್ತಿದೆ. ಜತೆಗೆ ತಂತ್ರಜ್ಞಾನದ ದೈತ್ಯರಾಗಿರುವ ಅಮೆಜಾನ್‌, ಗೂಗಲ್‌, ಅಕಮೈ, ಬ್ರೈಟ್‌ಕೋವ್‌ ಮುಂತಾದ ಸಂಸ್ಥೆಗಳ ಜೊತೆ ಕಂಪನಿ ಕೈ ಜೋಡಿಸಿ ನಿರಂತರವಾಗಿ ತನ್ನದೇ ಆದ ತಾಂತ್ರಿಕ ವೇದಿಕೆಯನ್ನು ನಿರ್ಮಿಸಿದೆ.

ಕಳೆದ ಮಾಚ್‌ರ್‍ ತಿಂಗಳಲ್ಲಿ ಬೀಟಾ ತಂತ್ರಜ್ಞಾನದ ಮೂಲಕ ಆರಂಭವಾದ ಸೇವೆಗೆ ಜೂನ್‌ ಹೊತ್ತಿಗೆ ಸಕಾರಾತ್ಮಕ ಫಲಿತಾಂಶ ಕಂಡು ಬಂದ ಪರಿಣಾಮ ತಾಂತ್ರಿಕ ವೆಚ್ಚದ ಅನುಪಾತ ಶೇ.30ರಷ್ಟುತಲುಪಿತು. ಬಹುತೇಕ ಮೀಡಿಯಾ ಹೌಸ್‌ಗಳು ವರ್ಡ್‌ ಪ್ರೆಸ್‌, ಜೂಮ್ಲಾ ಮುಂತಾದವುಗಳ ಜೊತೆ ಇಲ್ಲವೇ ದುಬಾರಿಯಾದ ಸಿಎಂಎಸ್‌ ಪ್ಲಾಟ್‌ಫಾರಂ ಮೂಲಕ ಕಾರ್ಯನಿರ್ವಹಿಸಿದರೆ, ‘ಏಷಿಯಾನೆಟ್‌ ನ್ಯೂಸ್‌ ಡಾಟ್‌ ಕಾಂ’ ಮಾತ್ರ ವೀಕ್ಷಕರ ಬೇಕು- ಬೇಡಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.

ಪ್ರಸ್ತುತ ಸಂಸ್ಥೆ ಒಂದು ಹೆಜ್ಜೆ ಮುಂದಿಟ್ಟಿದ್ದು, ಸಂಸ್ಥೆ ನೀಡುವ ಲೈಸೆನ್ಸ್‌, ಸಣ್ಣ ಪ್ರಮಾಣದ ಪ್ರಕಾಶಕರಿಗೆ ತಂತ್ರಜ್ಞಾನ ಕೇವಲ ಆದಾಯ ಕೊಡುವ ಕೇಂದ್ರಗಳಾಗದೇ ಲಾಭ ಕೊಡುವ ಕೇಂದ್ರಗಳಾಗುವಂತೆ ಮಾಡಲಾಗಿದೆ.

ತಂತ್ರಜ್ಞಾನದಿಂದಾಗಿ ನೇರ ಮತ್ತು ಹುಡುಕಾಟ ನಡೆಸುವುದು ಕಡಮೆಯಾಗಿರುವುದರಿಂದ ವೀಕ್ಷಕರ ಸಂಖ್ಯೆ ಶೇ.50ರಷ್ಟುಹೆಚ್ಚಾಗಿದೆ ಎಂದು ಸಂಸ್ಥೆಯ ಪ್ರೊಡಕ್ಷನ್‌ ಮ್ಯಾನೇಜರ್‌ ಅನೂಪ್‌ ಮೋಹನ್‌ ತಿಳಿಸಿದ್ದಾರೆ. ತಂತ್ರಜ್ಞರ ತಂಡದ ಜೊತೆ ಚರ್ಚಿಸಿದಾಗ ‘ಏಷಿಯಾನೆಟ್‌ ನ್ಯೂಸ್‌ ಡಾಟ್‌ ಕಾಂ’ ದೇಶದಲ್ಲಿ ಶೇ. 100 ರಷ್ಟುಸರ್ವರ್‌ ರಹಿತ ತಂತ್ರಜ್ಞಾನದ ಮೂಲಕ ಸೇವೆ ನೀಡುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಏಷಿಯಾನೆಟ್‌ ನ್ಯೂಸ್‌ ಡಾಟ್‌ ಕಾಂ’ ನಿರಂತರವಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ, ಮುಂಬರುವ ದಿನಗಳಲ್ಲಿ ತಂತ್ರಜ್ಞಾನವನ್ನು ವಿಡಿಯೋ ಹಾಗೂ ಭಾಷೆ ವಿಷಯದಲ್ಲಿ ಹೆಚ್ಚು ಒತ್ತು ನೀಡುವ ಮೂಲಕ ವಿಶಿಷ್ಟಅನುಭವನ್ನು ನೀಡುವ ಗುರಿ ಹೊಂದಿದೆ, ವಿಶೇಷವಾಗಿ ‘ಎಐ’ ‘ಎಂಎಲ್‌’ ವಿಡಿಯೋ, ಅನಾಲಿಟಿಕ್ಸ್‌ ಮತ್ತು ‘ಹೈಬ್ರಿಡ್‌ ಕ್ಲೌಡ್‌’ಗಳಲ್ಲಿ ಬಹು ಪರಿಹಾರ ನೀಡುವುದಾಗಿದೆ ಎಂದು ಏಷಿಯಾನೆಟ್‌ ನ್ಯೂಸ್‌ ಮೀಡಿಯಾ ಅಂಡ್‌ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯ ಸಿಇಒ ( ನಾನ್‌-ನ್ಯೂಸ್‌ ಡಿಜಿಟಲ್‌) ಅನೂಪ್‌ ಎನ್‌ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮತಚೋರಿ ಬಗ್ಗೆ ದಿಲ್ಲೀಲಿ ಕೈ ನಾಯಕರ ರಣಕಹಳೆ: ಬಿಜೆಪಿ ವಿರುದ್ಧ ಖರ್ಗೆ, ರಾಗಾ, ಪ್ರಿಯಾಂಕಾ ಗುಡುಗು
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು: ಎರಡೂ ಬಣಗಳಿಂದ ಘೋಷಣೆಗಳ ಸಮರ