1 ಕೆಜಿ ಚಹಾ ಬೆಲೆ 40 ಸಾವಿರ : ಏನಿದರ ವಿಶೇಷ

Published : Aug 25, 2018, 11:22 AM ISTUpdated : Sep 09, 2018, 09:53 PM IST
1 ಕೆಜಿ ಚಹಾ ಬೆಲೆ 40 ಸಾವಿರ : ಏನಿದರ ವಿಶೇಷ

ಸಾರಾಂಶ

ಈ ಚಹಾ ತಳಿ ಬೆಲೆ ಕೇಳಿದರೇ ದಿಗಿಲುಗೊಳ್ಳುತ್ತೀರಿ. ಏಕೆಂದರೆ 1 ಕೆ.ಜಿ. ಚಹಾ ತಳಿ ಬರೋಬ್ಬರಿ 40 ಸಾವಿರ ರು.ಗೆ ಮಾರಾಟವಾಗುವ ಮೂಲಕ ಹೊಸ ದಾಖಲೆ ಬರೆದಿದೆ.

ಗುವಾಹಟಿ: ಪ್ರಸಿದ್ಧ ಕಂಪನಿಗಳ ಒಂದು ಕೆ.ಜಿ. ಚಹಾ ಪುಡಿ ಮಾರುಕಟ್ಟೆಯಲ್ಲಿ 500 ರು. ಒಳಗೇ ಸಿಗುತ್ತದೆ. ಆದರೆ ಅರುಣಾಚಲಪ್ರದೇಶದ ಈ ಚಹಾ ತಳಿ ಬೆಲೆ ಕೇಳಿದರೇ ದಿಗಿಲುಗೊಳ್ಳುತ್ತೀರಿ. ಏಕೆಂದರೆ 1 ಕೆ.ಜಿ. ಚಹಾ ತಳಿ ಬರೋಬ್ಬರಿ 40 ಸಾವಿರ ರು.ಗೆ ಮಾರಾಟವಾಗುವ ಮೂಲಕ ಹೊಸ ದಾಖಲೆ ಬರೆದಿದೆ.

ಗುವಾಹಟಿ ಚಹಾ ಹರಾಜು ಕೇಂದ್ರದಲ್ಲಿ ಗುರುವಾರ ನಡೆದ ಪ್ರಕ್ರಿಯೆ ವೇಳೆ ಗೋಲ್ಡನ್ಸ್‌ ನೀಡಲ್ಸ್‌ ಎಂಬ ಹೆಸರಿನ ಈ ಚಹಾ ತಳಿ ಕೆ.ಜಿ.ಗೆ 40 ಸಾವಿರ ರು.ನಂತೆ ಮಾರಾಟವಾಗಿದೆ. ಅರುಣಾಚಲಪ್ರದೇಶದ ಡೊನ್ಯಿ ಪೊಲೋ ಟೀ ಎಸ್ಟೇಟ್‌ನಲ್ಲಿ ಬೆಳೆದ ಚಹಾ ಇದಾಗಿದೆ. ಕಳೆದ ತಿಂಗಳಷ್ಟೇ ಅಸ್ಸಾಂನ ಚಹಾ ತಳಿಯೊಂದು ಕೆ.ಜಿ.ಗೆ 39,001 ರು.ನಂತೆ ಮಾರಾಟವಾಗಿತ್ತು.

ವಿಶೇಷ ಏನಿದೆ?:

ಗೋಲ್ಡನ್‌ ನೀಡಲ್ಸ್‌ ತಳಿಯ ಚಹಾದಲ್ಲಿ ಸಣ್ಣ ಚಿಗುರು ಇರುತ್ತದೆ. ಅದನ್ನು ಅತ್ಯಂತ ಕಾಳಜಿಯಿಂದ ಕೀಳಲಾಗುತ್ತದೆ. ಅದರ ಎಲೆಗಳು ಚಿನ್ನದ ಬಣ್ಣದ ಲೇಪನ ಹೊಂದಿರುತ್ತವೆ. ಮೃದುವಾಗಿದ್ದು, ಹೊಳೆಯುತ್ತಿರುತ್ತವೆ. ಇದರಿಂದ ಚಹಾ ತಯಾರಿಸಿದಾಗ ಅದು ಹೊಳಪಿನ ಚಿನ್ನದ ಬಣ್ಣವನ್ನು ನೀಡುತ್ತದೆ. ಸಿಹಿಯಿಂದ ಕೂಡಿದ್ದು, ಅತ್ಯುತ್ತಮ ಸುವಾಸನೆ ಹೊಂದಿರುತ್ತದೆ.

ಪ್ರಕೃತಿ ಒಲಿದು, ಚಹಾ ಬೆಳೆಯುವ ನೈಪುಣ್ಯತೆ ಇದ್ದರೆ ಮಾತ್ರ ಇಂತಹ ತಳಿಗಳನ್ನು ಬೆಳೆಯಬಹುದು ಎಂದು ಅಸ್ಸಾಂ ಚಹಾ ವ್ಯಾಪಾರಿ ಲಲಿತ್‌ ಕುಮಾರ್‌ ಜಲಾನ್‌ ತಿಳಿಸಿದ್ದಾರೆ.

ಅರುಣಾಚಲ ಪ್ರದೇಶದ ವಿಶಿಷ್ಟತಳಿಯ ಚಹಾ ವಿಧವೊಂದು ದಾಖಲೆ ಬೆಲೆಗೆ ಮಾರಾಟವಾಗಿದೆ. ಗುವಾಹತಿ ಚಹಾ ಹರಾಜು ಕೇಂದ್ರದಲ್ಲಿ ನಡೆದ ಅಸ್ಸಾಂ ಚಹಾ ವಿಧಗಳ ಹರಾಜಿನಲ್ಲಿ ಒಂದು ಕೆ.ಜಿ. ಗೋಲ್ಡನ್‌ ನೀಡಲ್ಸ್‌ ಚಹಾ 40,000 ರು.ಗೆ ಮಾರಾಟವಾಗಿ, ಜಾಗತಿಕ ದಾಖಲೆ ರೂಪಿಸಿದೆ. ಅರುಣಾಚಲ ಪ್ರದೇಶದ ಡೋನಿ ಪೋಲೊ ಚಹಾ ಎಸ್ಟೇಟ್‌ನ ಗೋಲ್ಡನ್‌ ನೀಡಲ್ಸ್‌ ಚಹಾ ಗುವಾಹತಿಯ ಅತ್ಯಂತ ಹಳೆಯ ಟೀ ಅಂಗಡಿಗಳಲ್ಲಿ ಒಂದಾದ ಅಸ್ಸಾಂ ಚಹಾ ಟ್ರೇಡ​ರ್‍ಸ್ ಈ ಚಹಾ ಖರೀದಿಸಿದೆ. ಈ ಚಹಾ ವಿಧ ಸಣ್ಣ ಚಿಗುರುವಿನದ್ದಾಗಿದ್ದು, ಇವುಗಳನ್ನು ಅತ್ಯಂತ ಜಾಗೃತೆಯಿಂದ ಕೀಳಲಾಗುತ್ತದೆ. ಇವುಗಳಿಗೆ ಚಿನ್ನದ ಬಣ್ಣ ಲೇಪಿತವಾಗಿದ್ದು, ತುಂಬಾ ಮೃದುವಾಗಿದೆ. ಇದರಿಂದ ತಯಾರಾಗುವ ಲಿಕ್ಕರ್‌ ಶುಭ್ರ ಚಿನ್ನದ ಬಣ್ಣವಿರುತ್ತದೆ ಮತ್ತು ಸಿಹಿಯಾದ ರುಚಿಯಿರುತ್ತದೆ, ಹೆಚ್ಚು ಪರಿಮಳಯುಕ್ತವಾಗಿರುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದಲ್ಲೇ CPR ನೀಡಿ ಅಮೆರಿಕ ಯುವತಿಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್
ಪ್ರಧಾನಿ ಮಾಡಿದ್ದೆಲ್ಲಾ ತಪ್ಪು ಅನ್ನೋದು ತಪ್ಪು: ಕೈಗೆ ಮಾಜಿ ಕಾಂಗ್ರೆಸ್ಸಿಗನ ಸಲಹೆ