
ನವದೆಹಲಿ (ಡಿ.02): ನೋಟು ನಿಷೇಧ ವಿರುದ್ಧ ತೃಣಮೂಲ ಕಾಂಗ್ರೆಸ್ ಪ್ರತಿಭಟನೆಯನ್ನು ಹತ್ತಿಕ್ಕಲೆಂದೇ ಟೋಲ್ ಬೂತ್ ಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿತ್ತು ಎಂದು ಆರೋಪಿಸಿರುವ ಮಮತಾ ಬ್ಯಾನರ್ಜಿಗೆ ಭಾರತೀಯ ಸೇನೆ ಸ್ಪಷ್ಟೀಕರಣ ನೀಡಿದೆ.
ಹೂಗ್ಲಿ ಬ್ರಿಜ್ ಬಳಿ ಇರುವ ಹೆದ್ದಾರಿ ಸುಂಕ ಕೇಂದ್ರದಲ್ಲಿ ಕೆಲ ಮಾಹಿತಿ ಕೋರಿ ಸೈನಿಕರು ಆಗಮಿಸಿದ್ದರು. ಈ ಸುಂಕ ವಸೂಲಾತಿ ಕೇಂದ್ರವು ಸಚಿವಾಲಯದಿಂದ 500 ಮೀಟರ್ ಮಾತ್ರವೇ ದೂರವಿದೆ. ರಾಜ್ಯ ಸರಕಾರದ ಗಮನಕ್ಕೆ ತರದೆಯೇ ಸೇನೆಯು ಈ ಸೂಕ್ಷ್ಮ ಪ್ರದೇಶಕ್ಕೆ ಹೇಗೆ ಬಂದಿತೆಂಬುದು ಮಮತಾ ಬ್ಯಾನರ್ಜಿಯವರ ಪ್ರಶ್ನೆ. ಪ್ರಜಾತಂತ್ರ ವ್ಯವಸ್ಥೆಯನ್ನು ರಕ್ಷಿಸುವುದಕ್ಕೋಸ್ಕರ ಸೇನೆ ಇಲ್ಲಿಂದ ಕಾಲ್ತೆಯುವವರೆಗೂ ತಾನು ಸಚಿವಾಲಯದಿಂದ ಹೊರಹೋಗುವುದಿಲ್ಲವೆಂದು ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಮತಾ ಬ್ಯಾನರ್ಜಿ ನಿನ್ನೆ ಹೇಳಿಕೆ ನೀಡಿದರು.
ಈ ಬಗ್ಗೆ ಭಾರತೀಯ ಸೇನೆ ಪ.ಬಂ. ಸರ್ಕಾರಕ್ಕೆ ಇಂದು ವಿವರಣೆ ನೀಡಿ 4 ಪತ್ರಗಳನ್ನು ಕಳುಹಿಸಿ ಸ್ಪಷ್ಟೀಕರಣ ನೀಡಿದೆ. ಸಂಬಂಧಪಟ್ಟ ಇಲಾಖೆಯಿಂದ ಅನುಮತಿಯನ್ನು ಪಡೆಯಲಾಗಿತ್ತು ಎಂದು ಮೇಜರ್ ಜನರಲ್ ಸುನೀಲ್ ಯಾದವ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.