ಸದನದಲ್ಲಿ ನೈಸ್ ವರದಿ ಮಂಡನೆ: ಸಿಬಿಐ ತನಿಖೆಗೆ ಶಿಫಾರಸ್ಸು

Published : Dec 02, 2016, 10:44 AM ISTUpdated : Apr 11, 2018, 01:00 PM IST
ಸದನದಲ್ಲಿ ನೈಸ್ ವರದಿ ಮಂಡನೆ: ಸಿಬಿಐ ತನಿಖೆಗೆ ಶಿಫಾರಸ್ಸು

ಸಾರಾಂಶ

ನೈಸ್ ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಶಿಫಾರಸ್ಸು  ಮಾಡಿದೆ. ಅಲ್ಲದೇ ಸಿಬಿಐ, ಜಾರಿನಿರ್ದೇಶನಾಲಯ ಮೂಲಕ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೈಸ್ ಸದನ ಸಮಿತಿ ಶಿಫಾರಸ್ಸು ಮಾಡಿದೆ.

ಬೆಳಗಾವಿ (ಡಿ.01): ನೈಸ್ ಅಕ್ರಮಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ತಯಾರಿಸಿರುವ ವರದಿಯನ್ನು ವಿಧಾನಸಭೆಯಲ್ಲಿ ಇವತ್ತು ಮಂಡಿಸಲಾಯ್ತು.

ಕಾನೂನು ಸಚಿವ ಟಿ.ಬಿ ಜಯಚಂದ್ರ ನೈಸ್​ ಸದನ ಸಮಿತಿ ತಯಾರಿಸಿರುವ ವರದಿಯನ್ನು ಮಂಡಿಸಿದರು.

ನೈಸ್  ವಶದಲ್ಲಿರುವ 11 ಸಾವಿರ ಎಕರೆ ಭೂಮಿ ವಾಪಸ್ ಪಡೆಯಬೇಕು, ವರ್ತುಲ ರಸ್ತೆಗೆ ಅನ್ವಯಿಸುವಂತೆ ಕ್ರಿಯಾ ಒಪ್ಪಂದಕ್ಕೆ ವ್ಯತಿರಿಕ್ತವಾಗಿ ನೀಡಿರುವ 554 ಎಕರೆ ವಿಸ್ತೀರ್ಣದ ಜಮೀನಿನ ಮೌಲ್ಯವನ್ನು ಹಿಂಪಡೆಯಬೇಕು.

ಅದೇ ರೀತಿ ಲಿಂಕ್ ರಸ್ತೆಗೆ ಅನ್ವಯವಾಗುವಂತೆ ಕ್ರಿಯಾ ಒಪ್ಪಂದಕ್ಕೆ ವ್ಯತಿರಿಕ್ತವಾಗಿ 52 ಎಕರೆ ವಿಸ್ತೀರ್ಣದ ಜಮೀನಿನ ಮೌಲ್ಯ  ಹಿಂಪಡೆಯಬೇಕು, ಅನಧಿಕೃತ ಗಣಿಗಾರಿಕೆಯಿಂದ ಖಾಸಗಿ ಪಾಲುದಾರರು ಸರ್ಕಾರಕ್ಕೆ ಪಾವತಿಸಿದ ರಾಜಧನ ದಂಡಮೌಲ್ಯ ವಸೂಲಿ ಮಾಡಬೇಕೆಂದು ಸದನ ಸಮಿತಿ ಶಿಫಾರಸ್ಸು ಮಾಡಿದೆ. ಜೊತೆಗೆ ನೈಸ್ ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಶಿಫಾರಸ್ಸು  ಮಾಡಿದೆ. ಅಲ್ಲದೇ ಸಿಬಿಐ, ಜಾರಿನಿರ್ದೇಶನಾಲಯ ಮೂಲಕ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೈಸ್ ಸದನ ಸಮಿತಿ ಶಿಫಾರಸ್ಸು ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!