ಹುದ್ದೆಗಿಂತ ದೇಶಸೇವೆ ಮುಖ್ಯ: ರಾಹುಲ್ ಭಾವ(ನೆ)ಗೆ ರಾಬರ್ಟ್ ಸಲಾಂ!

Published : Jul 13, 2019, 02:32 PM IST
ಹುದ್ದೆಗಿಂತ ದೇಶಸೇವೆ ಮುಖ್ಯ: ರಾಹುಲ್ ಭಾವ(ನೆ)ಗೆ ರಾಬರ್ಟ್ ಸಲಾಂ!

ಸಾರಾಂಶ

ಪಕ್ಷ ನೀಡುವ ಹುದ್ದೆಗಿಂತ ರಾಹುಲ್‌ಗೆ ದೇಶಸೇವೆ ಮುಖ್ಯವಂತೆ| ಹುದ್ದೆಗೆ ಆಸೆಪಡದೇ ದೇಶಸೇವೆ ಮಾಡುವುದಾಗಿ ಹೇಳಿದ ರಾಹುಲ್| ಪಕ್ಷದ ಅಧ್ಯಕ್ಷ ಹುದ್ದೆ ತ್ಯಾಗ(?)ಮಾಡಿ ದೇಶಸೇವೆಗೆ ಮುಂದಾದ ರಾಹುಲ್| ರಾಹುಲ್ ಗಾಂಧಿ ನಿರ್ಧಾರವನ್ನು ಕೊಂಡಾಡಿದ ಭಾವ ರಾಬರ್ಟ್ ವಾದ್ರಾ| ರಾಹುಲ್ ಅವರಿಂದ ಕಲಿಯವುದು ಬಹಳಷ್ಟಿದೆ ಎಂದ ರಾಬರ್ಟ್| ರಾಹುಲ್ ಯುವ ಭಾರತದ ಪ್ರತಿನಿಧಿ ಎಂದ ರಾಬರ್ಟ್ ವಾದ್ರಾ|

ನವದೆಹಲಿ(ಜು.13): ಪಕ್ಷ ನೀಡುವ ಯಾವುದೇ ಹುದ್ದೆಗಿಂತ ತಮಗೆ ದೇಶಸೇವೆ ಮುಖ್ಯ ಎಂಬ ರಾಹುಲ್ ಗಾಂಧಿ ಹೇಳಿಕೆಯನ್ನು ರಾಬರ್ಟ್ ವಾದ್ರಾ ಮೆಚ್ಚಿಕೊಂಡಿದ್ದಾರೆ.

ಈ ಕುರಿತು ಫೇಸ್‌ಬುಕ್‌ ಪೋಸ್ಟ್ ಮಾಡಿರುವ ರಾಬರ್ಟ್, ರಾಹುಲ್ ಅವರಿಂದ ತಾವು ಬಹಳಷ್ಟು ಕಲಿತಿರುವುದಾಗಿ ಬರೆದುಕೊಂಡಿದ್ದಾರೆ. ರಾಹುಲ್ ಅವರಲ್ಲಿ ಅದ್ಭುತ ಶಕ್ತಿ ಮತ್ತು ಧೈರ್ಯ ಇದ್ದು, ಶೇ.65ರಷ್ಟು ಯುವ ಸಮುದಾಯ ಹೊಂದಿರುವ ಭಾರತವನ್ನು ರಾಹುಲ್ ಪ್ರತಿನಿಧಿಸುತ್ತಾರೆ ಎಂದು ವಾದ್ರಾ ಅಭಿಪ್ರಾಯಪಟ್ಟಿದ್ದಾರೆ.

ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಪಟ್ಟ ತೊರೆದಿದ್ದ ರಾಹುಲ್ ಗಾಂಧಿ, ಪಕ್ಷದ ಹುದ್ದೆ ನಿಭಾಯಿಸುವುದಕ್ಕಿಂತ ದೇಶಸೇವೆ ಮಾಡುವುದು ತಮ್ಮ ಸದ್ಯದ ಆಯ್ಕೆ ಎಂದು ತಿಳಿಸಿದ್ದರು.

ಜನರೊಂದದಿಗೆ ಬೆರೆತು ಪಕ್ಷ ಸಂಘಟನೆಯಲ್ಲಿ ನಿರತರಾಗುವುದು ಸದ್ಯ ತಮ್ಮ ಮುಂದಿರುವ ಗುರಿ ಎಂದಿರುವ ರಾಹುಲ್, ಪರಿಶ್ರಮದಿಂದ ಉನ್ನತ ಸ್ಥಾನ ಪಡೆಯಲು ಬಯಸುವ ಯುವ ಸಮುದಾಯಕ್ಕೆ ಆದರ್ಶ ಎಂದು ರಾಬರ್ಟ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ
ಫೇಸ್‌ಬುಕ್ ಚಿಟ್ಟೆಯ ಮುಖ ನೋಡಿ ಹನಿಹೀರಲು ಬಂದವನೇ ಟ್ರ್ಯಾಪ್ , ಯುವಕನ ಮೇಲೆ ಹಲ್ಲೆ, ಹಣಕ್ಕೆ ಬೇಡಿಕೆ ಇಟ್ಟವರು ಎಸ್ಕೇಪ್!