
ರಾಜಸ್ಥಾನ(ಜೂ.05): ಡಿಜಿಟಲ್ ಇಂಡಿಯಾ ಪ್ರತಿ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ. ಆದರೆ ಈ ಡಿಜಿಟಲ್ ಇಂಡಿಯಾ ಎಂಬ ಯೋಜನೆ ಹಿಂದಿನ ವಾಸ್ತವತೆ ಏನು ಎಂಬುವುದನ್ನು ಮೋದಿ ಸಂಪುಟದಲ್ಲಿ ಕೇಂದ್ರದ ಹಣಕಾಸು ಖಾತೆಯ ರಾಜ್ಯ ಸಚಿವರಾಗಿರುವ ಅರ್ಜುನ್ ಮೇಘವಾಲ್ ತನ್ನ ಸರ್ಕಾರಕ್ಕೆ ಮನದಟ್ಟು ಮಾಡಿದ್ದಾರೆ. ಹಾಗಾದ್ರೆ ನಿಜಕ್ಕೂ ನಡೆದಿದ್ದೇನು? ಇಲ್ಲಿದೆ ವಿವರ
ಸಚಿವ ಅರ್ಜುನ್ ಮೇಘವಾಲ್ ಬಿಕನೇರ್'ನ ಡೋಲಿಯಾ ಎಂಬ ಹಳ್ಳಿಗೆ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅಲ್ಲಿನ ಜನರು ತಮ್ಮ ಊರಿನ ಆಸ್ಪತ್ರೆಯಲ್ಲಿ ನರ್ಸ್ ಇಲ್ಲ ಎಂದು ದೂರು ನೀಡಿದ್ದರು. ಈ ದೂರನ್ನು ಆಲಿಸಿದ ಮಂತ್ರಿ ಆ ಕೂಡಲೇ ತನ್ನ ಮೊಬೈಲ್ ಹೊರತೆಗೆದು ಬಿಕನೇರ್'ನ ಮುಖ್ಯ ವೈಧ್ಯಾಧಿಕಾರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರು ಆದರೆ ನೆಟ್ವರ್ರ್ಕ್ ಇಲ್ಲದಿರುವುದರಿಂದ ಸಂಪರ್ಕಿಸಲು ಸಾಧ್ಯವಾಗಲಿಲ್ಲ.
ಈ ವೇಳೆ ಹಳ್ಳಿಯ ಜನರು ಅಲ್ಲಿದ್ದ ಮರವೊಂದನ್ನು ತೋರಿಸಿ ಆ ಮರ ಹತ್ತಿದರೆ ನೆಟ್ವರ್ಕ್ ಸಿಗುತ್ತದೆ ಎಂದಿದ್ದಾರೆ. ಹೀಗಾಗಿ ಮಂತ್ರಿಗಾಗಿ ಮರ ಏರಲು ಏಣಿಯನ್ನೂ ತರಿಸಿ, ಮರಕ್ಕೆ ಒರಗಿಸಿ ನಿಲ್ಲಿಸಿದ್ದೂ ಆಯಿತು. ಮರುಕ್ಷಣವೇ ಮರ ಹತ್ತಿದ ಅರ್ಜುನ್ ಮೇಘವಾಲ್ ವೈಧ್ಯಾಧಿಕಾರಿಗೆ ಕರೆ ಮಾಡಿ ಆಸ್ಪತ್ರೆಗೆ ನರ್ಸ್ ನೇಮಿಸುವಂತೆ ಆದೇಶಿಸಿದ್ದಾರೆ. ಈ ಘಟನೆಯಿಂದ ಡಿಜಿಟಲ್ ಇಂಡಿಯಾ ಕುರಿತಾಗಿ ಅದೆಷ್ಟೇ ದೊಡ್ಡ ದೊಡ್ಡ ಮಾತುಗಳನ್ನಾಡಿದರೂ, ಕೆಲ ಸ್ಥಳಗಳಲ್ಲಿ ಎತ್ತರದ ಮರ ಹತ್ತದೇ ಸಿಗ್ನಲ್ ಸಿಗುವುದು ಕಷ್ಟ ಎಂಬುವುದು ಸಾಬೀತಾಗುತ್ತದೆ.
ಇನ್ನು ಈ ಅರ್ಜುನ್ ಮೇಘವಾಲ್ ಯಾರು ಎಂಬುವುದು ತಿಳಿಯದಿದ್ದರೆ, ಜನರಿಗೆ ಪರಿಸರದ ಮೇಲೆ ಅರಿವಿ ಮೂಡಿಸುವ ಸಲುವಾಗಿ ಸೈಕಲ್ ಏರಿ ಫೇಮಸ್ ಆದ ಮಂತ್ರಿಯನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಅಂದು ಫೇಮಸ್ ಆದ ವ್ಯಕ್ತಿಯೇ ಅರ್ಜುನ್ ಮೇಘವಾಲ್ ಆಗಿದ್ದಾರೆ. ಪರಿಸರದ ಮೇಲೆ ಅಪಾರ ಕಾಳಜಿ ಇರುವ ಅರ್ಜುನ್ ಹಲವಾರು ಬಾರಿ ಸೈಕಲ್'ನಲ್ಲೇ ಪ್ರಯಾಣಿಸುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.