ಕಿದ್ವಾಯಿಗೆ ಜಮೀನು ಬಿಟ್ಟು ಕೊಡದೇ ಆಟವಾಡುತ್ತಿದೆ ಅಪೋಲೋ ಆಸ್ಪತ್ರೆ; ಸರ್ಕಾರಿ ಆದೇಶಕ್ಕೆ ಕಿಮ್ಮತ್ತೇ ಇಲ್ಲ

Published : Jun 14, 2017, 05:29 PM ISTUpdated : Apr 11, 2018, 01:02 PM IST
ಕಿದ್ವಾಯಿಗೆ ಜಮೀನು ಬಿಟ್ಟು ಕೊಡದೇ ಆಟವಾಡುತ್ತಿದೆ ಅಪೋಲೋ ಆಸ್ಪತ್ರೆ; ಸರ್ಕಾರಿ ಆದೇಶಕ್ಕೆ ಕಿಮ್ಮತ್ತೇ ಇಲ್ಲ

ಸಾರಾಂಶ

 ಬಡ ರೋಗಿಗಳಿಗೆ ಅನುಕೂಲವಾಗಲಿ ಅಂತ ಸರ್ಕಾರ ಎಕರೆ-ಎಕರೆ ಜಮೀನು ನೀಡಿದರೆ ಅದನ್ನು ದುರ್ಬಳಕೆ ಮಾಡಿಕೊಂಡಿದ್ದೂ ಅಲ್ಲದೆ ವಾಪಸ್ಸು ನೀಡುವಂತೆ ಆದೇಶ ನೀಡಿದ್ರೂ ಸರ್ಕಾರಿ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಬೆಂಗಳೂರಿನ ಅಪೋಲೋ ಆಸ್ಪತ್ರೆ!

ಬೆಂಗಳೂರು (ಜೂ.14):  ಬಡ ರೋಗಿಗಳಿಗೆ ಅನುಕೂಲವಾಗಲಿ ಅಂತ ಸರ್ಕಾರ ಎಕರೆ-ಎಕರೆ ಜಮೀನು ನೀಡಿದರೆ ಅದನ್ನು ದುರ್ಬಳಕೆ ಮಾಡಿಕೊಂಡಿದ್ದೂ ಅಲ್ಲದೆ ವಾಪಸ್ಸು ನೀಡುವಂತೆ ಆದೇಶ ನೀಡಿದ್ರೂ ಸರ್ಕಾರಿ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಬೆಂಗಳೂರಿನ ಅಪೋಲೋ ಆಸ್ಪತ್ರೆ!

ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬಡ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಾರೆ.  ವರ್ಷಕ್ಕೆ ಸರಾಸರಿ- 2-3 ಲಕ್ಷ ರೋಗಿಗಳು ಚಿಕಿತ್ಸೆ ಪಡೆಯುವ, ಹೆಚ್ಚುವರಿ 18 ಸಾವಿರಕ್ಕೂ ಹೆಚ್ಚು ಹೊಸ ರೋಗಿಗಳು ದಾಖಲಾಗುವ ಈ ಆಸ್ಪತ್ರೆಗೆ ಜಾಗದ ಅವಶ್ಯಕತೆ ತುಂಬಾನೇ ಇದೆ. ಹೀಗಾಗಿ ಬಡ ರೋಗಿಗಳ ಅನುಕೂಲಕ್ಕಾಗಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ನಗರದ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆ ಮತ್ತು ಇಂಪಿರಿಯಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ಗೆ ಸೇರಿದ ಭೂಮಿಯನ್ನು  ಕಿದ್ವಾಯಿ ಸ್ಮಾರಕ ಸಂಸ್ಥೆಗೆ ಹಸ್ತಾಂತರಿಸುವಂತೆ 2015ರಲ್ಲಿ ಸರ್ಕಾರ ಆದೇಶ ನೀಡಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿ ಎರಡು ವರ್ಷಗಳು ಕಳೆದಿದ್ದರೂ  ಸರ್ಕಾರಿ ಆದೇಶಕ್ಕೆ ಯಾವುದೇ ಕಿಮ್ಮತ್ತು ಸಿಗುತ್ತಿಲ್ಲ. ಕಾನೂನು ಬಾಹಿರವಾಗಿ ಅಪೋಲೋ ಆಸ್ಪತ್ರೆ ಮತ್ತು ಇಂಪಿರಿಯಲ್ ಕ್ಯಾನ್ಸರ್ ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ನಡೆಸುತ್ತಿದೆ. ಈ ಬಗ್ಗೆ ತಮಗೇನಾದರೂ ಸ್ವಾಧೀನಪಡಿಸಿಕೊಳ್ಳಲು ಸರ್ಕಾರದಿಂದ ಸುತ್ತೋಲೆ ಬಂದಿದೆಯಾ ಅಂತ ಕ್ವಿದ್ವಾಯಿ ಸ್ಮಾರಕ ಸಂಸ್ಥೆಗೆ ಕೇಳಿದಾಗ ಯಾವುದೇ ಆದೇಶ ಬಂದಿಲ್ಲ ಎಂಬ ಉತ್ತರಿಸುತ್ತಾರೆ.

ಇನ್ನು ಈ ವಿವಾದದ ಹಿನ್ನೆಲೆಯನ್ನು ನೋಡುವುದಾದರೆ 1991ರಲ್ಲಿ ಅಂದಿನ ಸರ್ಕಾರ ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಬಿಳೇಕಹಳ್ಳಿ ಗ್ರಾಮದ ಸರ್ವೇ ನಂ 154/11ರಲ್ಲಿನ ಐದು ಎಕರೆ ಸರ್ಕಾರಿ ಜಾಗವನ್ನು ಕ್ಯಾನ್ಸರ್ ಸೆಂಟರ್ ಆರಂಭಿಸುವ ಉದ್ದೇಶದಿಂದ ನಿಸಾರ್‌ ಸಯ್ಯದ್‌ ಎಂಬುವವರಿಗೆ ನೀಡಿತ್ತು. ಆದರೆ, ಅವರು ಈ ಜಾಗವನ್ನು 2005ರಲ್ಲಿ ಅಕ್ರಮವಾಗಿ ಅಪೋಲೋ ಆಸ್ಪತ್ರೆಗೆ ಉಪಗುತ್ತಿಗೆ ನೀಡಿದ್ದರು. ಅಪೋಲೋ ಆಸ್ಪತ್ರೆಯವರು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದರು ಎಂಬ ಆರೋಪದ ಮೇಲೆ ಪರಿಶೀಲಿಸಿದ ಜಿಲ್ಲಾಧಿಕಾರಿ ವಿ. ಶಂಕರ್‌ ಅವರು ನೀಡಿದ ನಿರ್ದೇಶನದಂತೆ ತಹಶೀಲ್ದಾರ್‌ ಡಾ.ಬಿ.ಆರ್. ದಯಾನಂದ್‌ ನೇತೃತ್ವದಲ್ಲಿ ಅದನ್ನು ತೆರವುಗೊಳಿಸಲಾಯಿತು. ಈ ಜಾಗದ ಮೌಲ್ಯ ಸುಮಾರು 600 ಕೋಟಿ ರೂ. ಎಂದ ಅಂದಾಜಿಸಲಾಗಿದೆ. ವಶಪಡಿಸಿಕೊಳ್ಳಲಾದ ಸರ್ಕಾರಿ ಜಮೀನನ್ನು ಕಿದ್ವಾಯಿ ಸ್ಮಾರಕ ಗಂಥಿ ಸ್ಮಾರಕ ಸಂಸ್ಥೆಗೆ ಹಸ್ತಾಂತರಿಸಲು ನಿರ್ದೇಶಿಸಲಾಗಿತ್ತು.

ಇನ್ನು ಗುತ್ತಿಗೆ ರದ್ದು ಮಾಡಿ ಸ್ವಾಧೀನ ಪಡಿಸಿಕೊಳ್ಳುವ ಆದೇಶವನ್ನು ಮರು ಪರಿಶೀಲಿಸುವಂತೆ  ಅಪೋಲೋ ಆಸ್ಪತ್ರೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಗುತ್ತಿಗೆ ಅಥವಾ ಉಪ ಗುತ್ತಿಗೆ ಪಡೆಯದೆ ಇಂಪಿರಿಯಲ್ ಕ್ಯಾನ್ಸರ್  ಆಸ್ಪತ್ರೆ ಅವರ ಜತೆ ಶೇರ್ ಹೋಲ್ಡರ್ ಎಗ್ರಿಮೆಂಟ್ ಮಾಡಿಕೊಂಡಿರುವುದಾಗಿ   ಅಪೋಲೋ ಆಸ್ಪತ್ರೆ ತಿಳಿಸಿದ್ದು, ಜಿಲ್ಲಾಧಿಕಾರಿಗಳ ಆದೇಶವನ್ನು ಹಿಂಪಡೆದುಕೊಳ್ಳಬೇಕೆಂದು ಕೋರಿಕೊಂಡಿದೆ.ಇದು ಕೂಡಾ ಕಾನೂನು ಬಾಹಿರ ಎಂದು ಹೇಳಲಾಗುತ್ತಿದೆ. ಸರ್ಕಾರಿ ಜಾಗವನ್ನು  ಖಾಸಗಿಯವರು ಶೇರ್ ಹೋಲ್ಡರ್ ಎಗ್ರಿಮೆಂಟ್ ಹೇಗೆ ಮಾಡಿಕೊಳ್ಳುತ್ತಾರೆ.ಇದಕ್ಕೆ ಕಾನೂನಿನಡಿಯಲ್ಲಿ ಅವಕಾಶವಿಲ್ಲ ಅಂತಾ ಹೇಳಲಾಗುತ್ತಿದೆ.

ಒಟ್ನಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ  ಕ್ಯಾನ್ಸರ್ ಪೀಡಿತ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ರೋಗಿಗಳು ಕಿದ್ವಾಯಿ ಸ್ಮಾರಕ ಸಂಸ್ಥೆಗೆ ದಾಖಲಾಗುತ್ತಾರೆ. ಅಲ್ಲಿ ಸೌಕರ್ಯ್ಯಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಅಪೋಲೋ ಆಸ್ಪತ್ರೆಗೆ ಜಾಗ ಬಿಟ್ಟುಕೊಡುವಂತೆ ಸರ್ಕಾರ ಆದೇಶ ನೀಡಿದ್ರೂ ಅದಕ್ಕೆ ಕವಡೆ ಕಾಸಿನ ಬೆಲೆಯಿಲ್ಲ. ಬದಲಾಗಿ ಕಾನೂನು ಬಾಹಿರವಾಗಿ ಕೋಟ್ಯಂತರ ರೂ. ಲಾಭ ಪಡೆಯುತ್ತಿರುವ ಅಪೋಲೋ ಆಸ್ಪತ್ರೆಯ ಪರ ಕಾಣದ ಕೈಗಳ ಬಲ ಹಾಗೂ ಸರ್ಕಾರದ ಮೇಲೆ ಒತ್ತಡ ಇರೋದು ಮೇಲ್ನೋಟಕಕ್ಕೆ ಕಾಣಿಸುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ