ಸುಪಾರಿ ಕೊಟ್ಟು ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಹತ್ಯೆ : ಆರೋಪ

By Suvarna Web DeskFirst Published Mar 29, 2018, 12:36 PM IST
Highlights

ಅನುಮಾನಾಸ್ಪದವಾಗಿ ಸಾವಿಗೀಡಾದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರದ್ದು ಸಹಜ ಸಾವಲ್ಲ.  ರಾಜ್ಯದಿಂದ  ಸುಪಾರಿ ಕೊಟ್ಟು ಕೊಲೆ ಮಾಡಲಾಗಿದೆ ಎಂದು ತುಮಕೂರು ಬಿಜೆಪಿ ಸಂಸದ ಜಿಎಸ್ ಬಸವರಾಜು ಗಂಭೀರ ಆರೋಪ ಮಾಡಿದ್ದಾರೆ.

ತುಮಕೂರು : ಅನುಮಾನಾಸ್ಪದವಾಗಿ ಸಾವಿಗೀಡಾದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರದ್ದು ಸಹಜ ಸಾವಲ್ಲ.  ರಾಜ್ಯದಿಂದ  ಸುಪಾರಿ ಕೊಟ್ಟು ಕೊಲೆ ಮಾಡಲಾಗಿದೆ ಎಂದು ತುಮಕೂರು ಬಿಜೆಪಿ ಸಂಸದ ಜಿಎಸ್ ಬಸವರಾಜು ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಅನ್ನಭಾಗ್ಯವನ್ನು ತಮ್ಮ ಕೊಡುಗೆ ಎಂದು ಹೇಳುತ್ತಿದೆ. ಆದರೆ ಕೇಂದ್ರ ಸರ್ಕಾರದ ಪಾಲು ಅನ್ನಭಾಗ್ಯದಲ್ಲಿ ಹೆಚ್ಚಿದೆ.  ಈ ಅನ್ನಭಾಗ್ಯ ಅಕ್ಕಿಯಲ್ಲೂ ಕೂಡ ರಾಜ್ಯ ಸರ್ಕಾರದ ಅವ್ಯವಹಾರ ನಡೆಸಿದೆ.

ಅನುರಾಗ್ ತಿವಾರಿ ಆಹಾರ ಇಲಾಖೆಯ ಹಗರಣವನ್ನು ಬಯಲು ಮಾಡುತ್ತಿದ್ದರು. ಹಾಗಾಗಿ ಅವರನ್ನು ಸುಪಾರಿ ಕೊಟ್ಟು ಹತ್ಯೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

 ಅನುರಾಗ್ ತಿವಾರಿ  ತುಮಕೂರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ ವ್ಯಕ್ತಿ. ವೈಯಕ್ತಿಕವಾಗಿ ನನಗೆ ತುಂಬಾ ಪರಿಚಯವಿದ್ದ ಪ್ರಮಾಣಿಕ  ಅಧಿಕಾರಿ. ಅಂತಹ ಅಧಿಕಾರಿಯ ಕೊಲೆಯಾಗಿರುವುದು ದುರ್ದೈವ ಎಂದರು.

click me!