
ಬೆಳಗಾವಿ(ನ. 21): ಅಧಿವೇಶನ ಹಾಗೂ ಇತರ ಸಂದರ್ಭದಲ್ಲಿ ಶಾಸಕರಿಗೆ ಇಲ್ಲಿ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದಿರುವ ಕಾರಣಕ್ಕೆ ಸುವರ್ಣ ಸೌಧದ ಪಕ್ಕದಲ್ಲಿಯೇ ಶಾಸಕರ ಭವನ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ. 125 ಎಕರೆ ವಿಸ್ತೀರ್ಣದ ಸುವರ್ಣ ಸೌಧದ ಬಲಭಾಗದಲ್ಲಿ ನಾಲ್ಕು ಬ್ಲಾಕ್'ಗಳ ಶಾಸಕರ ಭವನ ನಿರ್ಮಿಸಲು ನೀಲಿನಕ್ಷೆ ರೆಡಿಯಾಗುತ್ತಿದೆ. ಅಷ್ಟೇ ಅಲ್ಲ, ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗ್ತಿರುವ ಶಾಸಕರ ಭವನದಲ್ಲಿ ಶಾಸಕರು ಯಾವಾಗಲೂ ಉಳಿದುಕೊಳ್ಳೋದಿಲ್ಲ.. ಹೀಗಾಗಿ ಇದರ ನಿರ್ವಹಣೆ ಖಾಸಗಿಯವರಿಗೆ ನೀಡಲೂ ಸರ್ಕಾರ ಚಿಂತನೆ ನಡೆಸಿದೆ.
ಸರ್ಕಾರದ ಮೂಲಗಳ ಪ್ರಕಾರ ಈಗಾಗಲೇ ಬೆಳಗಾವಿಯ ಖಾಸಗಿ ಹೋಟೆಲ್ ಮಾಲೀಕರೊಬ್ಬರು ಸರ್ಕಾರದ ಜೊತೆ ಮಾತುಕತೆ ಕೂಡ ನಡೆಸಿದ್ದಾರಂತೆ.. ಇಡೀ ವರ್ಷ ಹೋಟೆಲ್ ನಡೆಸಲು ಅನುಮತಿ ನೀಡಬೇಕು. ಅಧಿವೇಶನ ಸಂದರ್ಭದಲ್ಲಿ ಸರ್ಕಾರಕ್ಕೆ ಬಿಟ್ಟುಕೊಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗ್ತಿದೆ ಎನ್ನಲಾಗ್ತಿದೆ.
ಈಗಾಗಲೇ ಮಹಾರಾಷ್ಟ್ರದ ನಾಗಪುರದಲ್ಲಿ ಇದೇ ರೀತಿಯ ಹೋಟೆಲ್ ನಡೀತಿದೆ.. ಅದೇ ರೀತಿ ಬೆಳಗಾವಿಯಲ್ಲೂ ಶಾಸಕರ ಭವನ ನಡೆಸಲು ಅವಕಾಶ ನೀಡಿದ್ರೆ, ಸರ್ಕಾರಕ್ಕೆ ಆದಾಯ ಬರುವ ಕುರಿತೂ ಲೆಕ್ಕಾಚಾರ ನಡೆಯುತ್ತಿದೆ.
- ಶಂಕರ ಪಾಗೋಜಿ, ಸುವರ್ಣ ನ್ಯೂಸ್, ಬೆಂಗಳೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.