
ಮೈಸೂರು(ಜು.17): ಸದಾ ವಿವಾದಗಳಲ್ಲೇ ಮುಳುಗಿರುವ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ಅಗ್ರ ಸ್ಥಾನ. ಅದ್ರಲ್ಲೂ ವೈಸ್ ಛಾನ್ಸಲರ್ ಹುದ್ದೆಗೆ ನೇಮಕ ಪ್ರಕ್ರಿಯೆಗಳು ನಡೆದಾಗಲೆಲ್ಲಾ ಒಂದಲ್ಲ ಒಂದು ವಿವಾದಕ್ಕೆ ಗುರಿಯಾಗುತ್ತನೇ ಇದೆ. ಈಗಾಗಲೇ ವಿವಿಧ ಆರೋಪಗಳನ್ನು ಎದುರುಸುತ್ತಿರುವ ಪ್ರಾಧ್ಯಾಪಕರ ಹೆಸರನ್ನು ಸರ್ಚ್ ಕಮಿಟಿ ಕುಲಪತಿ ಹುದ್ದೆಗೆ ಸೂಚಿಸಿದೆ. ಸರ್ಚ್ ಕಮಿಟಿಯ ಈ ನಡೆ ಸುತ್ತ ಈಗ ಹಲವು ಅನುಮಾನಗಳು ಎದ್ದಿವೆ.
ಶತಮಾನೋತ್ಸವ ಕಂಡಿರುವ ಈ ವಿಶ್ವವಿದ್ಯಾಲಯಕ್ಕೆ ಈ ಬಾರಿಯಾದರೂ ಕಳಂಕ ರಹಿತ ಪ್ರಾಧ್ಯಾಪಕರು ವೈಸ್ ಛಾನ್ಸಲರ್ ಹುದ್ದೆಗೆ ನೇಮಕ ಆಗ್ತಾರೆ ಅನ್ನೋ ನಿರೀಕ್ಷೆ ಸುಳ್ಳಾಗಿದೆ. ಯಾಕಂದ್ರೆ ಪ್ರೊ.ಎಚ್.ಪಿ.ಖಿಂಚಾ ನೇತೃತ್ವದ ಸರ್ಚ್ ಕಮಿಟಿ ಮೂರು ಹೆಸರುಗಳನ್ನ ಶಿಫಾರಸ್ಸು ಮಾಡಿದ್ದು, ಪ್ರೊ. ಆರ್.ಕೆ.ಸೋಮಶೇಖರ್ ಹಸರಿನ ಪ್ರಸ್ತಾಪ ಈಗ ವಿವಾದಕ್ಕೆ ಕಾರಣವಾಗಿದೆ. ಅಂದ್ಹಾಗೆ, ಆರ್.ಕೆ.ಸೋಮಶೇಖರ್ ಅವರ ಮೇಲಿರುವ ಕಳಂಕ ಸಣ್ಣಪುಟ್ಟದ್ದಲ್ಲ.
ನಕಲಿ ಅಂಕ ಪಟ್ಟಿ ಹಗರಣದಲ್ಲಿ ಸೋಮಶೇಖರ್?: ಫಯಾಜ್ ಅಹ್ಮದ್ ಭಟ್ ಹೆಸರಿನಲ್ಲಿ 23 ಅಂಕ ಪಟ್ಟಿ
ಪ್ರೊ.ಆರ್.ಕೆ.ಸೋಮಶೇಖರ್ ಬೆಂಗಳೂರು ವಿವಿ ಮೌಲ್ಯಮಾಪನ ರಿಜಿಸ್ಟ್ರಾರ್ ಆಗಿದ್ದರು. ಈ ವೇಳೆ ಗೌಸಿಯಾ ಇಂಜಿನಿಯರಿಂಗ್ ಕಾಲೇಜಿನ ಮಹಮದ್ ಪಿರಾನ್ ಗೆ ನೀಡಬೇಕಿದ್ದ ಅಂಕ ಪಟ್ಟಿಗಳನ್ನ, ಫಯಾಜ್ ಅಹ್ಮದ್ ಭಟ್ ಎಂಬ ಹೆಸರಿನಲ್ಲಿ ಮುದ್ರಿಸಿದ್ದರು. ಈ ರೀತಿ ಅಂಕಪಟ್ಟಿಯಲ್ಲಿನ ಹೆಸರು ಬದಲಾವಣೆ ಮಾಡಬೇಕಂದ್ರೆ ಬದಲಾವಣೆಗೆ ಸಂಬಂಧ ಪಟ್ಟ ವಿವರಗಳನ್ನ ಲೆಡ್ಜರ್'ನಲ್ಲಿ ದಾಖಲಿಸಬೇಕು. ಆದರೆ ಫಯಾಜ್ ಅಹ್ಮದ್ ಭಟ್ ಹೆಸರಿನಲ್ಲಿ ನೀಡಿದ್ದ 23 ಅಂಕಪಟ್ಟಿಗಳ ವಿವರಗಳನ್ನ ಲೆಡ್ಜರ್'ಗಳಲ್ಲಿ ನಮೂದಿಸಿರಲಿಲ್ಲ.
ಈ ಸಂಬಂಧ ಜಿಲ್ಲಾ ನಿವೃತ್ತ ನ್ಯಾಯಾಧೀಶರು ತನಿಖೆಗೆ ಆದೇಶಿಸಿದ್ದು, ಪ್ರೊ.ಆರ್.ಕೆ.ಸೋಮಶೇಖರ್ ವಿರುದ್ಧ ತನಿಖೆ ನಡೆಯುತ್ತಲೇ ಇದೆ. ಆದರೆ ವಿಷಯ ಗೊತ್ತಿದ್ದು ಪ್ರೊ.ಎಚ್.ಪಿ.ಖಿಂಚಾ ನೇತೃತ್ವದ ಸರ್ಚ್ ಕಮಿಟಿ ಸದಸ್ಯರಾಗಲಿ, ರಾಜ್ಯ ಸರ್ಕಾರವಾಗಲಿ ಇದನ್ನು ಗಮನಿಸದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ವರದಿ: ಜಿ.ಮಹಾಂತೇಶ್, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.