ಜಮ್ಮು ಕಾಶ್ಮೀರ ರಾಜ್ಯಪಾಲರಿಂದ ಮತ್ತೊಂದು ವಿವಾದ

By Web DeskFirst Published Nov 28, 2018, 1:52 PM IST
Highlights

ಸರ್ಕಾರ ರಚನೆಗೆ ಪಕ್ಷಗಳು ಸಜ್ಜಾಗಿದ್ದ ವೇಳೆಯೇ ಏಕಾ ಏಕಿ ವಿಧಾನಸಭೆ ವಿಸರ್ಜನೆ ಮಾಡಿ ವಿವಾದಕ್ಕೆ ಒಳಗಾಗಿದ್ದ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಇದೀಗ ಮತ್ತೊಂದು ವಿವಾದಕ್ಕೆ ಒಳಗಾಗಿದ್ದಾರೆ. 

ಗ್ವಾಲಿಯರ್: ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಪಿಡಿಪಿ ನೇತೃತ್ವದ ಕೂಟ ಹಾಗೂ ಸಜ್ಜಾದ್ ಲೋನ್-ಬಿಜೆಪಿ ಕೂಟಗಳು ಹಕ್ಕು  ಡಿಸಿದರೂ, ಹಠಾತ್ತನೇ ವಿಧಾನಸಭೆ ವಿಸರ್ಜಿಸಿದ್ದ ರಾಜ್ಯಪಾಲ ಸತ್ಯಪಾಲ್ ಮಲಿಕ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ. 

ರಾಜ್ಯಪಾಲರ ಮೇಲೆ ಕೇಂದ್ರ ಸರ್ಕಾರದ ಒತ್ತಡ ಇರುತ್ತದೆ. ರಾಜ್ಯಪಾಲರು ಕೇಂದ್ರದ ಕೈಗೊಂಬೆ ಎಂಬರ್ಥ ಬರುವಂತೆ ಅವರು ಮಾತನಾಡಿದ್ದಾರೆ. 

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಮಲಿಕ್, ‘ನಾನು ಒಂದು ವೇಳೆ ದಿಲ್ಲಿಯ ಕಡೆಗೆ (ಕೇಂದ್ರ) ನೋಡಿದ್ದರೆ ಬಿಜೆಪಿ ಬೆಂಬಲಿತ ಸಜ್ಜಾದ್ ಲೋನ್‌ರನ್ನು ಸರ್ಕಾರ ರಚನೆಗೆ ಆಹ್ವಾನಿಸಲು ಒತ್ತಡ ಬರುತ್ತಿತ್ತು’ ಎಂದರು. ‘ಆದರೆ ನಾನು ಹಾಗೆ ಮಾಡಿದ್ದರೆ ಇತಿಹಾಸದಲ್ಲಿ ನನಗೆ ಕೆಟ್ಟ ಹೆಸರು ಸದಾ ಉಳಿಯುತ್ತಿತ್ತು. ಹೀಗಾಗಿ ನಾನು ಆ ಕೆಲಸಕ್ಕೆ ಕೈಹಾಕಲಿಲ್ಲ. ಎರಡೂ ಕಡೆಯವರ ಕೋರಿಕೆ ತಿರಸ್ಕರಿಸಿದೆ.

ಯಾರು ಏನು ಬೇಕಾದರೂ ನನಗೆ ಬೈದುಕೊಳ್ಳಲಿ. ಆದರೆ ನಾನು ಸರಿಯಾದ ಕೆಲಸ ಮಾಡಿದೆ ಎಂದು ನನಗೆ ಮನವರಿಕೆಯಾಗಿದೆ ಎಂದರು.

click me!