ಅನಿತಾ ಸ್ಪರ್ಧೆಗೆ ಎಚ್‌ಡಿಕೆ ಹಿಂದೇಟು ಏಕೆ?

By Suvarna Web DeskFirst Published Mar 21, 2018, 11:20 AM IST
Highlights

ಚುನಾವಣೆಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿರುವ ಕುಮಾರಸ್ವಾಮಿ ಅವರು ರಾಜ್ಯ ಪ್ರವಾಸದಲ್ಲಿ ಬ್ಯುಸಿಯಾಗಬೇಕಾಗುತ್ತದೆ.

ಬೆಂಗಳೂರು: ಚುನಾವಣೆಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿರುವ ಕುಮಾರಸ್ವಾಮಿ ಅವರು ರಾಜ್ಯ ಪ್ರವಾಸದಲ್ಲಿ ಬ್ಯುಸಿಯಾಗಬೇಕಾಗುತ್ತದೆ.

ಒಂದು ವೇಳೆ, ಚನ್ನಪಟ್ಟಣದಿಂದ ಅನಿತಾ ಸ್ಪರ್ಧೆ ಮಾಡಿದರೆ, ಆ ಕ್ಷೇತ್ರದತ್ತ ಹೆಚ್ಚಿನ ಗಮನಹರಿಸಲು ಆಗುವುದಿಲ್ಲ. ಅನಿತಾ ಏನಾದರೂ ಪರಾಭವಗೊಂಡರೆ, ಪತ್ನಿಯನ್ನೇ ಗೆಲ್ಲಿಸಿಕೊಳ್ಳಲು ಆಗಲಿಲ್ಲ ಎಂಬ ಮುಜುಗರ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಅನಿತಾ ಕಣಕ್ಕಿಳಿಸಲು ಕುಮಾರಸ್ವಾಮಿ ಹಿಂದೇಟು ಹಾಕುತ್ತಿದ್ದಾರೆ ಎಂಬ ವಾದವಿದೆ.

ಜಾತಿ ಲೆಕ್ಕಾಚಾರ ಹೇಗಿದೆ ? : ಒಟ್ಟು 2,16,415 ಮತದಾರರು ಇದ್ದಾರೆ. ಒಕ್ಕಲಿಗರು 1,05,928, ಎಸ್ಸಿ/ಎಸ್ಟಿ39,359, ಮುಸ್ಲಿಮರು 25,491, ಲಿಂಗಾಯಿತರು 9585, ಕುರುಬರು 7236, ತಿಗಳರು 8332, ಬೆಸ್ತರು 9792 ಹಾಗೂ ಇತರೆ ಮತದಾರರು 10,692ದಷ್ಟಿದ್ದಾರೆ. ಒಕ್ಕಲಿಗ ಮತಗಳು ಇಬ್ಭಾಗವಾಗುವುದರಿಂದ ದಲಿತರು ಮತ್ತು ಅಲ್ಪಸಂಖ್ಯಾತರ ಮತಗಳೇ ಇಲ್ಲಿ ನಿರ್ಣಾಯಕವಾಗುತ್ತದೆ.

click me!