ಕೇವಲ 56 ರೂ. ಟೋಲ್‌ಗಾಗಿ ರಂಪಾಟ ಮಾಡಿದ ಮಿನಿಸ್ಟರ್ ಹೆಂಡ್ತಿ!

Published : May 18, 2019, 08:12 PM IST
ಕೇವಲ 56 ರೂ. ಟೋಲ್‌ಗಾಗಿ ರಂಪಾಟ ಮಾಡಿದ ಮಿನಿಸ್ಟರ್ ಹೆಂಡ್ತಿ!

ಸಾರಾಂಶ

ಟೋಲ್ ಸಿಬ್ಬಂದಿ ಮೇಲೆ ಸಚಿವರ ಪತ್ನಿಯ ಗತ್ತು ಗೈರತ್ತು| ಕೇವಲ 56 ರೂ. ಟೋಲ್ ಗಾಗಿ ರಂಪಾಟ ಮಾಡಿದ ಸಚಿವರ ಪತ್ನಿ| ಹೈದರಾಬಾದ್-ಗುಂಟೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಿಬ್ಬಂದಿ ಜೊತೆ ಮಾತಿನ ಚಕಮಕಿ| ಟೋಲ್ ದರ ಕಟ್ಟಿಸಿಕೊಂಡೇ ಕಾರು ಬಿಟ್ಟ ಟೋಲ್ ಸಿಬ್ಬಂದಿ| ಆಂಧ್ರದ ನಾಗರಿಕ ಸರಬರಾಜು ಸಚಿವ ಪ್ರತಿಪತಿ ಪುಲ್ಲಾರಾವ್ ಪತ್ನಿ ವೆಂಕಟಕುಮಾರಿ|

ಹೈದರಾಬಾದ್(ಮೇ.18): ಸಚಿವರ ಗತ್ತು ಗೈರತ್ತು ಕಾಣದವರು ಯಾರಿದ್ದಾರೆ ಹೇಳಿ?. ಅಧಿಕಾರದ ಮದವೇರಿದವರಂತೆ ವರ್ತಿಸುವ ಸಚಿವರುಗಳಿಗೆ ಈ ದೇಶದಲ್ಲಿ ಕೊರತೆ ಏನಿಲ್ಲ. ಆದರೆ ಸಚಿವರುಗಳ ಪತ್ನಿಯರು ತೋರುವ ದರ್ಪ ಸಾರ್ವಜನಿಕರ ಗಮನಕ್ಕೆ ಬರುವುದು ಅಪರೂಪ.

ಅದರಂತೆ ಹೈದರಾಬಾದ್-ಗುಂಟೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇವಲ 56 ರೂ. ಟೋಲ್ ದರಕ್ಕಾಗಿ ಸಚಿರೊಬ್ಬರ ಪತ್ನಿ ರಂಪಾಟ ಮಾಡಿದ ಘಟನೆ ನಡೆದಿದೆ.

ಇಲ್ಲಿನ ಮದುಗಲ್ ಪಲ್ಲಿ ಸಮೀಪದ ಟೋಲ್ ಪ್ಲಾಜಾ ಬಳಿ ಆಂಧ್ರಪ್ರದೇಶದ ನಾಗರಿಕ ಸರಬರಾಜು ಸಚಿವ ಪ್ರತಿಪತಿ ಪುಲ್ಲಾರಾವ್ ಪತ್ನಿ ಪಿ ವೆಂಕಟಕುಮಾರಿ, ಟೋಲ್ ದರ ಕೇಳಿದ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ.

ಟೋಲ್ ಫೀ ಕೇಳಿದ ಸಿಬ್ಬಂದಿ ಮೇಲೆ ಹರಿಹಾಯ್ದ ಪಿ. ವೆಂಕಟಕುಮಾರಿ, ಸಚಿವರ ಪತ್ನಿ ಕಾರು ತಡೆಯಲು ಎಷ್ಟು ಧೈರ್ಯ ಎಂದು ಕೂಗಾಡಿ ಕೆಲಹೊತ್ತು ಟ್ರಾಫಿಕ್ ಜಾಮ್‌ಗೆ ಕಾರಣರಾದರು. 

ಆದರೆ ಯಾವುದೇ ಕಾರಣಕ್ಕೂ ಟೋಲ್ ದರ ಕಟ್ಟದೇ ವಾಹನ ಮುಂದೆ ಬಿಡುವುದಿಲ್ಲ ಎಂದು ಸಿಬ್ಬಂದಿ ಸ್ಪಷ್ಟಪಡಿಸಿದ ಬಳಿಕ, ಅನಿವಾರ್ಯವಾಗಿ ಟೋಲ್ ದರ ಕಟ್ಟಿ ವೆಂಕಟಕುಮಾರಿ ಮುನ್ನಡೆದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ