ಚಾಲಾಕಿ ಹೆಂಡ್ತಿ ಇರೋದರ ಅಪಾಯ: ಏನು ಆನಂದ್ ಮಹೀಂದ್ರಾ ಉಪಾಯ?

By Web Desk  |  First Published Apr 29, 2019, 2:52 PM IST

ಆನಂದ್ ಮಹೀಂದ್ರಾ ಹೊಸ ಟ್ವಿಟ್ ಗೆ ಸಾಮಜಿಕ ಜಾಲತಾಣ ಬೋಲ್ಡ್| ಚಾಲಾಕಿ ಹೆಂಡ್ತಿ ಹೊಂದಿರುವುದರ ಅಪಾಯಗಳೇನು?| ಆನಂದ್ ಮಹೀಂದ್ರಾ ಹೆಂಡ್ತಿ ಅದೆಷ್ಟು ಚಾಲಾಕಿ ಗೊತ್ತಾ?| ತಮ್ಮ ಪತ್ಮಿಗೆ ಆನಂದ್ ಮಹೀಂದ್ರಾ ಕೇಳಿದ ಪ್ರಶ್ನೆ ಏನು?|


ನವದೆಹಲಿ(ಏ.29): ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟೀವ್ ಇರೋ ವ್ಯಕ್ತಿ. ಅದರಲ್ಲೂ ಆನಂದ್ ಮಹೀಂದ್ರಾ ಟ್ವೀಟ್ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು.

ಅದರಂತೆ ಆನಂದ್ ಮಹೀಂದ್ರಾ ಅವರ ಹೊಸ ಟ್ವಿಟ್ ಇದೀಗ ಭಾರೀ ವೈರಲ್ ಆಗಿದ್ದು, ಚಾಲಾಕಿ ಹೆಂಡತಿ ಹೊಂದಿರುವ ಅಪಾಯಗಳ ಕುರಿತು ಆನಂದ್ ಎಚ್ಚರಿಕೆ ನೀಡಿದ್ದಾರೆ.

Latest Videos

undefined

ಅಸಲಿಗೆ ಪತಿಯೋರ್ವ ತನ್ನ ಪತ್ನಿಯ ಮಾತು ಕೇಳದಿರಲು ಕಳೆದ 62 ವರ್ಷಗಳಿಂದ ಕಿವುಡನ ಹಾಗೆ ನಾಟಕವಾಡಿದ ಸುದ್ದಿಯೊಂದು ವಿದೇಶಿ ಮಾಧ್ಯಮದಲ್ಲಿ ಪ್ರಕಟವಾಗಿತ್ತು.

Laughed non-stop for 5 mins on reading this. Asked my wife if I could have fooled her like this. She didn’t waste even a few seconds in replying: She said “Really? Would you have lasted 5 mins without speaking into your cellphone?” Aah, the perils of having a smart wife! pic.twitter.com/msWJLbB1ZD

— anand mahindra (@anandmahindra)

ಇದರ ಫೋಟೋ ಶೇರ್ ಮಾಡಿರುವ ಆನಂದ್, 'ಇದನ್ನು ಓದಿ ನನಗೆ ನಗು ತಡೆಯಲಾಗುತ್ತಿಲ್ಲ. ಅಲ್ಲದೇ ಇದೇ ರೀತಿ ನಾನೂ ಮಾಡಿದ್ದರೆ ಏನು ಮಾಡುತ್ತಿದ್ದೆ ಎಂದು ಪತ್ನಿಯನ್ನು ಕೇಳಿದಾಗ, 5 ನಿಮಿಷ ನೀವು ಮೊಬೈಲ್ ಫೋನ್ ಬಿಟ್ಟರೆ ಅಲ್ವಾ ಎಂದು ಉತ್ತರಿಸಿದಳು. ಚಾಲಾಕಿ ಹೆಂಡ್ತಿ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ..' ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

click me!