
ಬೆಂಗಳೂರು: ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಕಡೆಗಣಿಸಿ ಇಡಲಾಗಿದೆ ಎಂಬ ವಿಷಯ ವಿವಾದಕ್ಕೀಡಾಗಿತ್ತು.
ಅಂಬೇಡ್ಕರ್ ಭಾವಚಿತ್ರವನ್ನು ಕಚೇರಿಯ ಉಗ್ರಾಣ ಕೊಠಡಿಯಲ್ಲಿ ಇಡುವ ಮೂಲಕ ಅಪಮಾನ ಎಸಗಲಾಗಿದೆ ಎಂದು ಸೋಮವಾರ ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಆದರೆ ಈ ಬಗ್ಗೆ ಸಮಜಾಯಿಷಿ ನೀಡಿರುವ ಪಕ್ಷದ ಕಚೇರಿ ಮೂಲಗಳು, ಈ ಭಾವಚಿತ್ರವನ್ನು ಭಾನುವಾರ ನಡೆದ ಸಂವಿಧಾನ ದಿನ ಕಾರ್ಯಕ್ರಮದ ಅಂಗವಾಗಿ ಬೇರೆಡೆಯಿಂದ ತಂದದ್ದು. ಪಕ್ಷದ ಕಚೇರಿಯಲ್ಲಿರುವ ಭಾವ ಚಿತ್ರ ಹಾಗೆಯೇ ಇದೆ. ಹೊರಗಿನಿಂದ ತಂದಿರುವ ಭಾವಚಿತ್ರ ದೊಡ್ಡದಾಗಿರುವುದರಿಂದ ಸಾಗಿಸುವ ಮೊದಲು ಉಗ್ರಾಣ ಕೊಠಡಿಯಲ್ಲಿ ಇಡಲಾಗಿತ್ತೇ ಹೊರತು ಕಡೆಗಣಿಸಿದ್ದಲ್ಲ. ಪಕ್ಷದ ಕಚೇರಿಯಲ್ಲಿ ಮೊದಲಿನಿಂದಲೂ ಇರುವ ಭಾವಚಿತ್ರ ಹಾಗೆಯೇ ಇದೆ ಎಂದು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.