ಹುತಾತ್ಮರು, ರೈತರಿಗೆ 2.5 ಕೋಟಿ ರೂ; ಮಾನವೀಯತೆ ಮೆರೆದ ಅಮಿತಾಬಚ್ಚನ್

Published : Aug 29, 2018, 08:30 AM ISTUpdated : Sep 09, 2018, 10:13 PM IST
ಹುತಾತ್ಮರು, ರೈತರಿಗೆ 2.5 ಕೋಟಿ ರೂ; ಮಾನವೀಯತೆ ಮೆರೆದ ಅಮಿತಾಬಚ್ಚನ್

ಸಾರಾಂಶ

ರೈತರ ಆತ್ಮಹತ್ಯೆಯ ಬಗ್ಗೆ ಓದಿದಾಗೆಲ್ಲ ನಾನು ಕಳವಳಕ್ಕೊಳಗಾಗುತ್ತೇನೆ. ಹಿಂದೆ, ವಿಶಾಖಪಟ್ಟಣದಲ್ಲಿ ಚಿತ್ರೀಕರಣದಲ್ಲಿದ್ದಾಗ ರೈತರು ಅತ್ಯಲ್ಪ ಮೊತ್ತದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದುದನ್ನು ಓದಿದ್ದೆ. ಚಿತ್ರೀಕರಣ ಮುಗಿದ ಬಳಿಕ 40-50 ಕುಟುಂಬಗಳಿಗೆ ದೇಣಿಗೆ ನೀಡಿದ್ದೆ. ಈಗ 200 ರೈತ ಕುಟುಂಬಗಳಿಗೆ ಅವರ ಸಾಲದ ಮೊತ್ತ 1.25 ಕೋಟಿ ರು. ಪಾವತಿಸಲಿದ್ದೇನೆ’ ಎಂದು ಬಚ್ಚನ್‌ ಹೇಳಿದ್ದಾರೆ. 

ಮುಂಬೈ (ಆ. 29): ಹುತಾತ್ಮ ಯೋಧರ ಕುಟುಂಬ ಮತ್ತು ರೈತರ ಸಾಲ ಮನ್ನಾಕ್ಕೆ ಈ ವರ್ಷ 2.5 ಕೋಟಿ ದೇಣಿಗೆ ನೀಡುವುದಾಗಿ ಖ್ಯಾತ ನಟ ಅಮಿತಾಭ್‌ ಬಚ್ಚನ್‌ ಹೇಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

‘ಕೌನ್‌ ಬನೇಗಾ ಕರೋಡ್‌ಪತಿ-ಸೀಸನ್‌ 10’ಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಅವರು ಈ ವಿಷಯ ಪ್ರಕಟಿಸಿದ್ದಾರೆ. ಅದರಲ್ಲಿ 1 ಕೋಟಿ ರು. ಹುತಾತ್ಮರ ಕುಟುಂಬಗಳಿಗೆ ಮತ್ತು 1.5 ಕೋಟಿ ರು. ರೈತರ ಸಾಲಮನ್ನಾಕ್ಕೆ ನೀಡಲು ನಿರ್ಧರಿಸಲಾಗಿದೆ ಎಂದರು.

‘44 ಹುತಾತ್ಮರ ಕುಟುಂಬಗಳ ಭದ್ರತೆಗಾಗಿ ನಾವು 1 ಕೋಟಿ ರು. ಮೌಲ್ಯದ 112 ಡಿಮಾಂಡ್‌ ಡ್ರಾಫ್ಟ್‌ಗಳನ್ನು ಸಿದ್ಧಪಡಿಸಿದ್ದೇವೆ. ಸರ್ಕಾರದ ವ್ಯವಸ್ಥೆಯ ಪ್ರಕಾರವೇ ದೇಣಿಗೆ ನೀಡಲಿರುವ ಮೊತ್ತದಲ್ಲಿ ಶೇ.60 ಪತ್ನಿಗೆ, ಶೇ.20 ತಂದೆಗೆ ಮತ್ತು ಶೇ.20 ತಾಯಿಗೆ ಹಣ ವರ್ಗಾಯಿಸಲಿದ್ದೇವೆ’ ಎಂದು ಅವರು ತಿಳಿಸಿದರು.

‘ರೈತರ ಆತ್ಮಹತ್ಯೆಯ ಬಗ್ಗೆ ಓದಿದಾಗೆಲ್ಲ ನಾನು ಕಳವಳಕ್ಕೊಳಗಾಗುತ್ತೇನೆ. ಹಿಂದೆ, ವಿಶಾಖಪಟ್ಟಣದಲ್ಲಿ ಚಿತ್ರೀಕರಣದಲ್ಲಿದ್ದಾಗ ರೈತರು ಅತ್ಯಲ್ಪ ಮೊತ್ತದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದುದನ್ನು ಓದಿದ್ದೆ. ಚಿತ್ರೀಕರಣ ಮುಗಿದ ಬಳಿಕ 40-50 ಕುಟುಂಬಗಳಿಗೆ ದೇಣಿಗೆ ನೀಡಿದ್ದೆ. ಈಗ 200 ರೈತ ಕುಟುಂಬಗಳಿಗೆ ಅವರ ಸಾಲದ ಮೊತ್ತ 1.25 ಕೋಟಿ ರು. ಪಾವತಿಸಲಿದ್ದೇನೆ’ ಎಂದು ಬಚ್ಚನ್‌ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!
ಯುಎಇ ಕಠಿಣ ಕಾನೂನು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆಗೆ ಶಿಕ್ಷೆ ಪ್ರಮಾಣ ಭಾರೀ ಹೆಚ್ಚಳ!