
ಶಬರಿಮಲೆ[ಜ.04]: ಬಿಂದು ಹಾಗೂ ಕನಕದುರ್ಗಾ ಎಂಬ ಇಬ್ಬರು ಮಹಿಳೆಯರು ಪೊಲೀಸ್ ಬಿಗಿ ಭದ್ರತೆಯಲ್ಲಿ ಶಬರಿಮಲೆ ಅಯ್ಯಪ್ಪ ದರ್ಶನ ಪಡೆದಿದ್ದರು. ಇದಾದ ಬಳಿಕ ಕೇರಳದಾದ್ಯಂತ ಭಾರೀ ಪ್ರತಿಭಟನೆ ನಡೆದಿದ್ದು, ಇದು ಹಿಂಸಾಚಾರಕ್ಕೆ ತಿರುಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಮತ್ತೊಮ್ಮ ಮಹಿಳೆ ಶಬರಿಮಲೆ ಪ್ರವೇಶಿಸಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.
ರೋಗಿಗಳಂತೆ ಕರೆತಂದು ಬಿಂದು, ಕನಕೆಗೆ ಅಯ್ಯಪ್ಪ ದರ್ಶನ!
ಶ್ರೀಲಂಕಾ ಮೂಲಕ ಶಶಿಕಲಾ ಎಂಬ ಮಹಿಳೆಯೊಬ್ಬರು ನಿನ್ನೆ ರಾತ್ರಿ ಸುಮಾರು 9.30 ರ ವೇಳೆಗೆ ಪೋಲಿಸ್ ಭದ್ರತೆಯಲ್ಲಿ ಶಬರಿಮಲೆ ಪ್ರವೇಶಿಸಿ, ಅಯ್ಯಪ್ಪ ದರ್ಶನ ಪಡೆದಿದ್ದಾರೆ. ಮಹಿಳೆಯ ಪಾಸ್ ಪೋರ್ಟ್ ನಲ್ಲಿ 46 ವಯಸ್ಸು ಎಂದು ದಾಖಲಾಗಿದೆ. ಆದರೆ ಮಹಿಳೆ ಮಾತ್ರ ತನಗೆ 46 ವರ್ಷವಾದರೂ ಋತು ಸ್ರಾವ ನಿಂತಿದೆ ಎಂದು ವೈದ್ಯಕೀಯ ದಾಖಲೆಗಳನ್ನು ಮುಂದಿಟ್ಟಿದ್ದಾರೆ.
ಶಬರಿಮಲೆ ಪ್ರವೇಶಿಸಿದ ಬಿಂದು ಮತ್ತು ಕನಕದುರ್ಗ ಯಾರು? ಇಲ್ಲಿದೆ ಸ್ಫೋಟಕ ಮಾಹಿತಿ
ಸುಪ್ರೀಂ ಕೋರ್ಟ್ ಎಲ್ಲಾ ವಯೋಮಾನದ ಮಹಿಳೆಯರು ಶಬರಿಮಲೆಗೆ ಪ್ರವೇಶಿಸಬಹುದೆಂಬ ತೀರ್ಪು ನೀಡಿದ್ದರೂ, ಅಯ್ಯಪ್ಪ ಸ್ವಾಮಿಯ ಭಕ್ತರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಹಲವಾರು ಮಂದಿ ಮಹಿಳೆಯರು ಶಬರಿಮಲೆ ಆವರಣದವರೆಗೆ ತಲುಪಿದ್ದರೂ, ದೇಗುಲ ಪ್ರವೇಶಿಸಲಾಗದೆ ಮರಳಿದ್ದರು. ಆದರೆ ಜ. 2 ರಂದು ಮುಂಜಾನೆ ಸುಮಾರು 03.45ಕ್ಕೆ ಇಬ್ಬರು ಮಹಿಳೆಯರು ಯಾರೊಬ್ಬರಿಗೂ ತಿಳಿಯದೆ ದೇಗುಲ ಪ್ರವೇಶಿಸಿದ್ದರು. ಇದಾದ ಬಳಿಕ ಭಕ್ತರ ಆಕ್ರೋಶ ಭುಗಿಲೆದ್ದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ