
ವಾಷಿಂಗ್ ಟನ್[ನ. 26] ಅಮೆರಿಕನ್ ರಾಪ್ ಸಿಂಗರ್ ಟಿ.ಐ ಒಂದು ಹೇಳಿಕೆ ನೀಡಿದ್ದಾರೆ. ತನ್ನ ಮಗಳನ್ನೇ ಪ್ರತಿ ವರ್ಷ ಕನ್ಯತ್ಯ ಪರೀಕ್ಷೆಗೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದಕ್ಕೆ ಮಗಳ ಬಳಿಯೇ ಕ್ಷಮೆ ಕೇಳುವುದಾಗಿ ಹೇಳಿದ್ದಾರೆ.
ರೆಡ್ ಟೇಬಲ್ ಟಾಕ್ ಎಂಬ ಶೋ ಒಂದರಲ್ಲಿ ಮಾತನಾಡಿಸ ಸಿಂಗರ್ ನನ್ನ ಮಗಳು ಡೇಜಾ ಬಳಿ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ. ನನ್ನ ಮಗಳಿಗೆ ನಾನು ಏನು ಎಂಬುದು ಗೊತ್ತು. ಆದರೂ ಆಕೆ ಒಂದು ಮಾತನ್ನಾಡದೆ ಒಪ್ಪಿಕೊಳ್ಳುತ್ತಿದ್ದಳು ಎಂದು 39 ವರ್ಷದ ಗಾಯಕ ಹೇಳಿದ್ದಾರೆ.
'ಕನ್ಯತ್ವ ಪರೀಕ್ಷೆ'ಎಂಬ ದುಷ್ಟಪದ್ಧತಿ ಎಷ್ಟೆಲ್ಲ ವಿಕೃತಿ ಹೊಂದಿದೆ ಕೇಳಿದ್ರೆ ಶಾಕ್ ಆಗ್ತೀರಾ!...
ಗಾಯಕನ ನಿಜವಾದ ನಾಮಧೇಯ ಕ್ಲಿಫೋರ್ಡ್ ಜೋಸೆಫ್ ಹ್ಯಾರೀಸ್ ಆದರೆ ವೃತ್ತಿಯಲ್ಲಿ ಕಾಣಿಸಿಕೊಂಡ ಮೇಲೆ ಟಿಐ ಎಂದು ಬದಲಾಯಿಸಿಕೊಂಡಿದ್ದಾರೆ. ನನ್ನ ಮಗಳು ಇದೆಲ್ಲವನ್ನು ಇಲ್ಲಿಗೆ ಬಿಟ್ಟುಬಿಡೋಣ ಎಂದು ಉದಾರವಾದ ತೋರಿಸಿದ್ದಾಳೆ ನಾನು ಇನ್ನು ಹೇಳಲು ಏನೂ ಉಳಿದಿಲ್ಲ ಎಂದು ಗಾಯಕ ವಿಷಾದ ವ್ಯಕ್ತಪಡಿಸಿದ್ದಾರೆ.
ಕನ್ವತ್ವ ಕಾಪಾಡುವುದು ದೊಡ್ಡ ವಿಷಯ ಎಂದು ಭಾವಿಸಿದ್ದೆ. ಅನ್ನೇ ನನ್ನ ಮಗಳ ಮೇಲೆ ಹೇರುತ್ತ ಬಂದಿದ್ದೆ. ಆದರೆ ಪ್ರಪಂಚದ ಉಳಿದ ವಿಷಯಗಳ ಮುಂದೆ ಇದೆಲ್ಲ ಗೌಣ ಎನಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.