
ಬೆಂಗಳೂರು, [ನ.11]: 14 ದಿನಗಳ ನ್ಯಾಯಾಂಗ ಬಂಧನದ ಮೇಲೆ ಇಂದು ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಜನಾರ್ದನ ರೆಡ್ಡಿಗೆ ವಿಚಾರಣಾಧೀನ ನಂಬರ್ ನೀಡಲಾಗಿದೆ.
ಜೈಲಿನ ಪ್ರೊಸಿಜರ್ ಮುಗಿಸಿದ ಅಧಿಕಾರಿಗಳು ರೆಡ್ಡಿಗೆ ವಿಚಾರಣಾಧೀನ ಕೈದಿಯಾಗಿ 10902 ಸಂಖ್ಯೆಯನ್ನು ಕೊಟ್ಟಿದ್ದು, ಜೈಲಿನ ಕ್ವಾರಂಟೈನ್ ವಿಐಪಿ ಸೆಲ್ ನೀಡಲಾಗಿದೆ.
ಜನಾರ್ದನ ರೆಡ್ಡಿಗೆ ನ್ಯಾಯಾಂಗ ಬಂಧನ, ಪರಪ್ಪನ ಅಗ್ರಹಾರ ಜೈಲೇ ಗತಿ..!
ಜನಾರ್ದನ ರೆಡ್ಡಿ ಕೊಟ್ಟಿರುವ ಸೆಲ್ ನಲ್ಲಿ ಟಿವಿ, ಮಂಚ, ಬಿಸಿ ನೀರು ವ್ಯವಸ್ಥೆ ಇದೆ. ಅಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಬಂಧಿಸಿದ್ದರು.
ಆಂಬಿಡೆಂಟ್ & ರೆಡ್ಡಿ: ಸುವರ್ಣನ್ಯೂಸ್‌ನಿಂದ Super Exclusive ವರದಿಗಳ ಸರಮಾಲೆ
ಇಂದು ರೆಡ್ಡಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಬಳಿಕ ಅವರನ್ನು 1ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಬಳಿಕ ವಿಚಾರಣೆ ನಡೆಸಿದ ನ್ಯಾಯಧೀಶ ಜಗದೀಶ್ ಅವರು ರೆಡ್ಡಿ ಪರ ವಕೀಲರ ವಾದಗಳನ್ನು ತಿರಸ್ಕರಿಸಿದ್ದು,.ರೆಡ್ಡಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.