ಚಕ್ಕಂದವಾಡುತ್ತಿದ್ದ ತನ್ನ ಬಾಯ್ ಫ್ರೆಂಡ್ ಜತೆ ಮಗಳ ಮದುವೆ ಮಾಡಿಸಿದ್ಲು

Published : Nov 11, 2018, 06:19 PM IST
ಚಕ್ಕಂದವಾಡುತ್ತಿದ್ದ ತನ್ನ ಬಾಯ್ ಫ್ರೆಂಡ್ ಜತೆ ಮಗಳ ಮದುವೆ ಮಾಡಿಸಿದ್ಲು

ಸಾರಾಂಶ

ಕೆಟ್ಟ ಮಕ್ಕಳು ಹುಟ್ಟಬಹುದು, ಆದರೆ ಕೆಟ್ಟ ತಾಯಿ ಇರಲಾರಳು. ತನ್ನ ಮಕ್ಕಳ ಸಂತೋಷದಲ್ಲಿಯೇ ಆನಂದ ಪಡುವ ಮಹಾ ತಾಯಿ ಆಕೆ. ಆದ್ರೆ, ಇಲೊಬ್ಬ ತಾಯಿ, ತಾಯಿ ಎನ್ನುವ ಪದಕ್ಕೆ ಕಳಂಕ ತರುವಂತೆ ಹೇಯ ಕೃತ್ಯ ಮಾಡಿದ್ದಾಳೆ.

ಚೆನ್ನೈ, [ನ.11]: ತಾಯಿಯೊಬ್ಬಳು ತನ್ನ ಪ್ರಿಯಕರನ ಜೊತೆ ಬಲವಂತವಾಗಿ ಅಪ್ರಾಪ್ತ ಮಗಳ ಮದುವೆ ಮಾಡಿಸಿರುವ ಅಮಾನವೀಯ ಘಟನೆ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ.

ಗಂಡನ ಸಾವಿನ ಬಳಿಕ ಯುವಕನೊಬ್ಬನ ಜತೆ ಪ್ರೇಮ ಸಂಬಂಧದಲ್ಲಿದ್ದ ಮಹಿಳೆ, ಬಲವಂತವಾಗಿ ಆತನ ಜತೆ ಅಪ್ರಾಪ್ತ ಮಗಳ ಮದುವೆ ಮಾಡಿಸಿದ್ದಾಳೆ. ಅಷ್ಟೇ ಅಲ್ಲದೇ ಮಗಳನ್ನ 20 ದಿನಗಳ ಕಾಲ ಬಂಧಿಸಿಟ್ಟು, ಅತ್ಯಾಚಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದಾಳೆ. 

ಬಾಲಕಿ ತಂದೆ ಅನೇಕ ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದ. ತಾಯಿ ಸ್ಥಳೀಯ ನಿವಾಸಿ ರಾಜಶೇಖರ್ ಎಂಬಾತನ ಜೊತೆ ಸಂಬಂಧ ಹೊಂದಿದ್ದಳು. 

ರಾಜಶೇಖರ್ ಮಗಳನ್ನು ಮದುವೆಯಾಗಲು ಬಯಸಿದ್ದನಂತೆ. ಈ ಸಂಗತಿಯನ್ನು ಪ್ರಿಯತಮೆಗೆ ಹೇಳಿದ್ದು, ರಾಜಶೇಖರ್ ಮದುವೆಯಾದರೆ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದು ತಾಯಿ ಮಗಳ ಮೇಲೆ ಒತ್ತಡ ಹೇರಲು ಶುರು ಮಾಡಿದ್ದಳು.

ಆದರೆ ಇದಕ್ಕೆ ಬಾಲಕಿ ನಿರಾಕರಿಸಿದ್ದಾಳೆ. ಆದರೂ ಬಿಡದೆ ಬಾಲಕಿಯನ್ನು ಬಲವಂತವಾಗಿ ಜಶೇಖರ್ ಜೊತೆ ಬಲವಂತವಾಗಿ ಮದುವೆ ಮಾಡಿಸಿದ್ದಾಳೆ.

ಮದುವೆ ಬಳಿಕ ಹಳ್ಳಿಯೊಂದರ ಮನೆಯಲ್ಲಿ ಹುಡುಗಿಯನ್ನ ಕೂಡಿ ಹಾಕಲಾಗಿದೆ. ಈ ಬಗ್ಗೆ ಅನುಮಾನಗೊಂಡ ಸ್ಥಳೀಯರು ಬಾಲಕಿ ಬಗ್ಗೆ ಪೊಲೀಸರಿಗೆ  ತಿಳಿಸಿದ್ದಾರೆ. 

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಬಾಲಕಿಯನ್ನ ರಕ್ಷಿಸಿದ್ದಾರೆ. ಆದರೆ, ಆರೋಪಿಗಳು ನಾಪತ್ತೆಯಾಗಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ