
ಬೆಂಗಳೂರು(ಸೆ.28): ಅಕ್ಕ ಸಮ್ಮೇಳನಕ್ಜಾಗಿ ಅಮೆರಿಕಕ್ಕೆ ತೆರಳಿದ್ದ ಅಂಬರೀಷ್ ವಾಪಸಾಗಿದ್ದಾರೆ. ಕಾವೇರಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದ ಜನ ಸಂಕಷ್ಟದಲ್ಲಿದ್ದಾಗ ಅವರ ಜೊತೆ ಇರದಿದ್ದಕ್ಕೆ ಅಂಬರೀಷ್ ಪದೇ ಪದೇ ಕ್ಷಮೆ ಕೋರಿದ್ದಾರೆ. ಸೆ.30ರ ತೀರ್ಪು ನೋಡಿ ಮಂಡ್ಯಕ್ಕೆ ತೆರಳುತ್ತೇನೆ ಎಂದು ಶಾಸಕ ಅಂಬರೀಶ್ ಹೇಳಿದ್ದಾರೆ.
ಸಿಎಂ ನೀರು ಬಿಡದೇ ಒಳ್ಳೆಯ ನಿರ್ಧಾರ ತಗೊಂಡಿದ್ದಾರೆ, ಸಿಎಂ ಸಿದ್ದರಾಮಯ್ಯ ನಿರ್ಧಾರ ಸರಿ, ಅಧಿಕಾರ ಹೋದ್ರೂ ಸರಿ ನೀರು ಬಿಡಬಾರದು ಎಂದರು. ಇದು ಸುಪ್ರೀಂಕೋರ್ಟ್ ತೀರ್ಪು ಉಲ್ಲಂಘನೆ ಆಗಲ್ಲ, ನನ್ನ ಒಳಗಿನ ನೋವು ನನಗೆ ಮಾತ್ರ ಗೊತ್ತು. ನಾನು ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಸಾಧ್ಯವಾಗಲಿಲ್ಲ. ನಾನು ಮಜಾ ಮಾಡಲು ಹೋಗಿರಲಿಲ್ಲ. ಇನ್ಮುಂದೆ ಜನರ ದುಃಖದಲ್ಲಿ ಭಾಗಿಯಾಗುತ್ತೇನೆ ಎಂದು ಅಂಬರೀಶ್ ಹೇಳಿದ್ಧಾರೆ.
ನಮಗೇ ನೀರಿಲ್ಲ, ಬೇರೆಯವರಿಗೆ ಬಿಡಲು ಸಾಧ್ಯವೇ?. ಬೇಕಾದಷ್ಟು ಜನ ನನ್ನ ಬಗ್ಗೆ ಬೇಕಾದಷ್ಟು ಮಾತಾಡಿಕೊಂಡಿದ್ದಾರೆ. ಇದಕ್ಕೆಲ್ಲ ನಾನು ಉತ್ತರ ಕೊಡಲ್ಲ, ಮಂಡ್ಯ ಬಗ್ಗೆ ನನಗೆ ಯಾವಾಗಲೂ ಪ್ರೀತಿ ಇದ್ದೇ ಇದೆ ಎಂದಿದ್ಧಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.