ಅಂಬಾನಿ ಕುಟುಂಬದ ವಿಚಾರವಿದು

First Published Jun 29, 2018, 10:00 AM IST
Highlights

ವಿಶ್ವದ 25 ಶ್ರೀಮಂತ ಕುಟುಂಬಗಳು 1 ಲಕ್ಷ ಕೋಟಿ ಡಾಲರ್‌ (68 ಲಕ್ಷ ಕೋಟಿ ರು.) ಮೌಲ್ಯದ ಆಸ್ತಿ ಹೊಂದಿವೆ. ಇದು ಇಂಡೋನೇಷ್ಯಾದ ಒಟ್ಟು ಜಿಡಿಪಿಗಿಂತ ಹೆಚ್ಚು ಎಂದು ವರದಿಯೊಂದು ಹೇಳಿದೆ. ಇವರಲ್ಲಿ ಭಾರತದ ಅಂಬಾನಿ ಕುಟುಂಬ 7ನೇ ಸ್ಥಾನ ಪಡೆದಿದೆ.

ಲಂಡನ್‌ :  ವಿಶ್ವದ 25 ಶ್ರೀಮಂತ ಕುಟುಂಬಗಳು 1 ಲಕ್ಷ ಕೋಟಿ ಡಾಲರ್‌ (68 ಲಕ್ಷ ಕೋಟಿ ರು.) ಮೌಲ್ಯದ ಆಸ್ತಿ ಹೊಂದಿವೆ. ಇದು ಇಂಡೋನೇಷ್ಯಾದ ಒಟ್ಟು ಜಿಡಿಪಿಗಿಂತ ಹೆಚ್ಚು ಎಂದು ವರದಿಯೊಂದು ಹೇಳಿದೆ. ಇವರಲ್ಲಿ ಭಾರತದ ಅಂಬಾನಿ ಕುಟುಂಬ 7ನೇ ಸ್ಥಾನ ಪಡೆದಿದೆ.

ವಾಲ್‌ಮಾರ್ಟ್‌ ಸಮೂಹದ ವಾಲ್ಟನ್‌ ಕುಟುಂಬವು ಅತ್ಯಂತ ಶ್ರೀಮಂತ ಕುಟುಂಬವಾಗಿದ್ದು, 152 ಶತಕೋಟಿ ಡಾಲರ್‌ (10.33 ಲಕ್ಷ ಕೋಟಿ ರು.) ಮೌಲ್ಯದ ಆಸ್ತಿ ಹೊಂದಿದೆ. ಕಾಚ್‌ ಇಂಡಸ್ಟ್ರೀಸ್‌ ಸಮೂಹದ ಕಾಚ್‌ ಕುಟುಂಬ 98.7 ಶತಕೋಟಿ ಡಾಲರ್‌ (6.7 ಲಕ್ಷ ಕೋಟಿ ರು.) ಮೌಲ್ಯದ ಆಸ್ತಿ ಹೊಂದಿದ್ದು 2ನೇ ಸ್ಥಾನ ಪಡೆದಿದೆ.

ಇನ್ನು ಎಂ ಆ್ಯಂಡ್‌ ಎಂ ಹಾಗೂ ಮಾರ್ಸ್‌ ಬಾರ್ಸ್‌ ಕ್ಯಾಂಡೀಸ್‌ ಕಂಪನಿಯ ಒಡೆತನ ಹೊಂದಿರುವ ಮಾರ್ಸ್‌ ಕುಟುಂಬ 90 ಶತಕೋಟಿ ಡಾಲರ್‌ (6.12) ಆಸ್ತಿ ಹೊಂದಿ ಮೂರನೇ ಸ್ಥಾನ ಪಡೆದಿದೆ ಎಂದು ಬ್ಲೂಮ್‌ಬರ್ಗ್‌ ನಡೆಸಿದ ಸಮೀಕ್ಷೆ ತಿಳಿಸಿದೆ. ಇದೇ ವೇಳೆ, ಭಾರತದ ಅಂಬಾನಿ ಕುಟುಂಬ (ಅನಿಲ್‌ ಹಾಗೂ ಮುಕೇಶ್‌ ಇಬ್ಬರ ಆಸ್ತಿಯನ್ನೂ ಸೇರಿಸಿ) 43 ಶತಕೋಟಿ ಡಾಲರ್‌ (2.92 ಲಕ್ಷ ಕೋಟಿ ರು.) ಆಸ್ತಿ ಹೊಂದಿದ್ದು, ವಿಶ್ವದಲ್ಲೇ 7ನೇ ಸ್ಥಾನ ಪಡೆದಿದೆ.

ಈ ಸಮೀಕ್ಷೆಯನ್ನು ಹಿಂದಿನ ತಲೆಮಾರುಗಳಿಂದ ಬಂದ ಆಸ್ತಿಯನ್ನೂ ಸೇರಿಸಿ ಲೆಕ್ಕ ಹಾಕಿ ಸಿದ್ಧಪಡಿಸಲಾಗಿದೆ. ಈ ತಲೆಮಾರಿನಲ್ಲಷ್ಟೇ ಆಸ್ತಿ ಸಂಪಾದಿಸಿದವರನ್ನು (ಉದಾ: ಬಿಲ್‌ ಗೇಟ್ಸ್‌ ಅಥವಾ ಜೆಫ್‌ ಬೆಜೋಸ್‌) ಸೇರಿಸಿಕೊಂಡಿಲ್ಲ ಎಂದು ಬ್ಲೂಮ್‌ಬರ್ಗ್‌ ಹೇಳಿದೆ.

click me!