ಆರ್‌ಆರ್ ನಗರ, ಜಯನಗರ ಕೈ, ಜೆಡಿಎಸ್ ಚುನಾವಣಾ ಮೈತ್ರಿ ಕಗ್ಗಂಟು

First Published May 24, 2018, 6:35 PM IST
Highlights

ಹಳೆಯ ವೈಷಮ್ಯಗಳನ್ನೆಲ್ಲ ಮರೆತ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದೆ. ಇದೀಗ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣ ವಚನವನ್ನೂ ಸ್ವೀಕರಿಸಿದ್ದಾರೆ. ಈ ಮೈತ್ರಿಯನ್ನು ಬಾಕಿ ಉಳಿದಿರುವ ರಾಜರಾಜೇಶ್ವರಿ ನಗರ ಹಾಗೂ ಜಯನಗರ ಚುನಾವಣೆಗೂ ಮುಂದುವರಿಸಿರುವ ಆಲೋಚನೆ ಇತ್ತು. ಆದರೆ, ಆರಂಭದಲ್ಲಿಯೇ ವಿಘ್ನ ಎದುರಾದಂತಿದೆ.

ಬೆಂಗಳೂರು: ಹಳೆಯ ವೈಷಮ್ಯಗಳನ್ನೆಲ್ಲ ಮರೆತ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದೆ. ಇದೀಗ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣ ವಚನವನ್ನೂ ಸ್ವೀಕರಿಸಿದ್ದಾರೆ. ಈ ಮೈತ್ರಿಯನ್ನು ಬಾಕಿ ಉಳಿದಿರುವ ರಾಜರಾಜೇಶ್ವರಿ ನಗರ ಹಾಗೂ ಜಯನಗರ ಚುನಾವಣೆಗೂ ಮುಂದುವರಿಸಿರುವ ಆಲೋಚನೆ ಇತ್ತು. ಆದರೆ, ಆರಂಭದಲ್ಲಿಯೇ ವಿಘ್ನ ಎದುರಾದಂತಿದೆ.

ಇದೇ 28ರಂದು ಆರ್‌ಆರ್ ನಗರ ಚುನಾವಣೆ ನಡೆಯಲಿದ್ದು, ಇಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್ ಬೆಂಬಲಿಸುವ ಯೋಚನೆ ಇತ್ತು. ಆದರೆ, ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರು ಬಿಜೆಪಿಯಲ್ಲಿ ಟಿಕೆಟ್ ಸಿಗದ ಕಾರಣ ಜೆಡಿಎಸ್‌ಗೆ ಬಂದಿದ್ದು, ಮೂಲ ಜೆಡಿಎಸ್‌ನವರಲ್ಲ. ಅಕಸ್ಮಾತ್ ಜೆಡಿಎಸ್‌ಗೆ ಬೆಂಬಲಿಸಿದರೆ ಬಿಜೆಪಿ ಗೆಲ್ಲೋದು ಸುಲಭ. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಈ ಕ್ಷೇತ್ರದ ಕಾರ್ಪೋರೇಟ್ ಸದಸ್ಯರಾಗಿ ಪ್ರಭಾವ ಹೊಂದಿದ್ದಾರೆ.  ಮುನಿರತ್ನ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವುದಾಗಿ ಹೇಳಿ, ಕಣದಿಂದ ಹಿಂದೆ ಸರಿಯುವಂತೆ ಕಾಂಗ್ರೆಸ್ ಮುಖಂಡರು ಮನವೊಲಿಸಲು ಯತ್ನಿಸುತ್ತಿದ್ದಾರೆ. ಆದರೆ, ಅವರು ಕ್ಷೇತ್ರದಲ್ಲಿಯೇ ಮುಂದುವರಿಯುವ ಆಶಯ ವ್ಯಕ್ತಪಡಿಸಿದ್ದು, ಆರ್‌ಆರ್ ನಗರ ಕ್ಷೇತ್ರವೇ ಬೇಕೆಂದು ಪಟ್ಟು ಹಿಡಿದಿದ್ದಾರೆ.

ಜಯನಗರದಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಗಳಿದ್ದು, ಸರಕಾರದಲ್ಲಿ ಮೈತ್ರಿ ಇದ್ದರೂ, ಈ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮುಂದುವರಿಯುವುದು ಕಷ್ಟ.
 

click me!