
ಅಲ್ಜಿರಿಯಾ: 100ಕ್ಕೂ ಅಧಿಕ ಮಂದಿಯನ್ನು ಹೊತ್ತೊಯ್ಯುತ್ತಿದ್ದ ಅಲ್ಜಿರಿಯಾದಲ್ಲಿ ಸೇನಾ ವಿಮಾನವೊಂದು ಅಪಘಾತಕ್ಕೀಡಾಗಿದೆ.
ಟೇಕ್ ಆಗುವ ವೇಳೇ ಈ ಅವಘಡ ಸಂಭವಿಸಿದೆ. ವಿಮಾನ ಅವಘಡಕ್ಕೆ ಕಾರಣವೇನು ಎನ್ನುವುದು ಇದುವರೆಗೂ ಕೂಡ ತಿಳಿದು ಬಂದಿಲ್ಲ. ಸಂಬಂಧ ಈಗಾಗಲೇ ಅಲ್ಲಿನ ರಕ್ಷಣಾ ಸಚಿವಾಲಯವು ತನಿಖೆಗೆ ಆದೇಶಿಸಿದೆ.
ವಿಮಾಣ ಅಪಘಾತಕ್ಕೆ ಈಡಾದ ಪ್ರದೇಶವಾದ ಬೌಫರಿಕ್ ಪ್ರದೇಶದಲ್ಲಿ ತುರ್ತು ಸ್ಥಿತಿ ಘೋಷಣೆ ಮಾಡಲಾಗಿದೆ.
ವಿಮಾನವು ಸೈನಿಕರನ್ನು ಹೊತ್ತೊಯ್ಯುತಿತ್ತು. ಅದರಲ್ಲಿದ್ದ 100 ಮಂದಿಯೂ ಕೂಡ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಆದರೆ ಈ ಬಗ್ಗೆ ರಕ್ಷಣಾ ಇಲಾಖೆಯೂ ಯಾವುದೇ ನಿಖರವಾದ ಮಾಹಿತಿಯನ್ನೂ ಕೂಡ ನೀಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.