
ಬೀದರ್(ಏ.11): ಬಿಜೆಪಿ ಸೇರ್ಪಡೆ ಬಳಿಕ ಪ್ರಥಮ ಬಾರಿಗೆ ತವರು ಕ್ಷೇತ್ರಕ್ಕೆ ಭೇಟಿ ನೀಡಿದ ಶಾಸಕ ಮಲ್ಲಿಕಾರ್ಜುನ ಖೂಬಾಗೆ ಚುನಾವಣಾಧಿಕಾರಿಗಳಿಂದ ಶಾಕ್ ಉಂಟಾಗಿದೆ.
ಬಸವಕಲ್ಯಾಣ ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಬಿಜೆಪಿ ಸೇರ್ಪಡೆಯಾದ ಬಳಿಕ ಪ್ರಥಮ ಬಾರಿಗೆ ತವರು ಕ್ಷೇತ್ರ ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಕೆ ಆಗಮಿಸಿದಾಗ ಭರ್ಜರಿ ಸ್ವಾಗತ ದೊರೆತಿದೆ. ಇದೇ ಸಂದರ್ಭದಲ್ಲಿ ಚುನಾವಣಾಧಿಕಾರಗಳು 8 ವಾಹನಗಳು ಹಾಗೂ 10ಕ್ಕೂ ಅಧಿಕ ಬೈಕ್'ಗಳನ್ನು ವಶಪಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 9ರ ಬಂಗಲಾ ಗೇಟ್'ನಿಂದ ಖೂಬಾ ಮನೆಯವರೆಗೆ ಖೂಬಾ ಅವರಿಗೆ ಸ್ವಾಗತ ಕೋರಲು ಬಂದ ಅಭಿಮಾನಿಗಳಿಂದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಶಾಸಕರ ಮನೆಯಿಂದ ನಗರದಲ್ಲಿ ನಡೆಯಬೇಕಾದ ರಾಲಿ ಕೂಡ ರದ್ದಾಗಿದೆ. ನಾನು ಯಾವುದೇ ನೀತಿಸಂಹಿತೆ ಉಲಂಘಿಸಿಲ್ಲ. ಇದು ಅಭಿಮಾನಿಗಳು ಮಾಡಿದ್ದು ಈ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಮಲ್ಲಿಕಾರ್ಜುನ ಖೂಬಾ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.