
ಖಾಸಗಿ ಯೂಟ್ಯೂಬ್ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುತ್ತ ಐಶ್ವರ್ಯಾ ಡಿಕೆಎಸ್ ಹೆಗಡೆ (Aisshwarya Dks Hegde) ಅವರು ಈ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಕಾಫೀ ಡೇ ಮಾಲೀಕರಾಗಿದ್ದ ಸಿದ್ಧಾರ್ಥ್ ಹೆಗಡೆ ಅವರ ಪುತ್ರ ಅಮಾರ್ತ್ಯ ಹೆಗಡೆ ಅವರನ್ನು ಮದುವೆಯಾಗಿರುವ ಐಶ್ವರ್ಯಾ ಅವರು, ಸಾಕಷ್ಟು ಸಭೆ-ಸಮಾರಂಭಗಳಲ್ಲಿ ಭಾಗಿಯಾಗುತ್ತಾರೆ. ಸೆಲೆಬ್ರೆಟಿಗಳ ಜತೆ ಮಾತನಾಡುತ್ತಾರೆ, ಅವರೂ ಕೂಡ ಸಲೆಬ್ರೆಟಿಯೇ ಆಗಿಬಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಐಶ್ವರ್ಯಾ ಅವರು ತುಂಬಾ ಆಕ್ವಿಟ್ ಆಗಿರುತ್ತಾರೆ.
ಸಂದರ್ಶನದಲ್ಲಿ ಐಶ್ವರ್ಯಾ 'ಇವತ್ತು ನಾನು ಏನ್ ಪಡೆದುಕೊಂಡಿದ್ದೇನೋ, ಅದು ಫೇಮ್ ಆಗಿರ್ಬಹುದು, ಪವರ್ ಆಗಿರ್ಬಹುದು, ನೀವು ಹೇಳಿರೋ ಪ್ರಿವಿಲೇಜಸ್ ಎಲ್ಲಾನೂ, ಅದು ನನ್ನ ತಂದೆಯಿಂದ ಬಂದಿರೋದು ಆಗಿರಬಹುದು ಅಥವಾ ನಾನು ಮದುವೆಯಾಗಿ ಹೋಗಿರೋ ಮನೆಯಿಂದ ಬಂದಿರಬಹುದು. ಎರಡೂ ಕೂಡ ನನಗೆ ದೊಡ್ಡ ಪ್ರಿವಿಲೇಜ್ ಆಗಿದೆ ಖಂಡಿತವಾಗಿಯೂ. ನಾನು ಅದನ್ನು ಒಂದು ಪ್ರಿವಿಲೇಜ್ ಆಗಿ, ಅದೃಷ್ಟವನ್ನಾಗಿಯೇ ನೋಡೋಕೆ ಇಷ್ಟಪಡ್ತೀನಿ.
ಯಾರೂ ಕೂಡ ಹುಟ್ಟುವಾಗ್ಲೇ ಹೀರೋನೂ ಅಲ್ಲ ವಿಲನ್ನೂ ಅಲ್ಲ; ಹೀಗಂದ್ರಲ್ಲ ವಸಿಷ್ಠ ಸಿಂಹ!
ಆ ಅದೃಷ್ಟ ಇರೋದ್ರಿಂದ ತಾನೇ ನನಗೆ ಎಷ್ಟೊಂದು ಅವಕಾಶ ಸಿಕ್ಕಿರೋದು? ಇವತ್ತು ನಾನು ಮಾಡೋಕಾಗಿರಬಹುದು, ನೋಡೋಕಾಗಿರ್ಬಹುದು ಅಥವಾ ಅನುಭವಿಸೋಕೆ ಆಗಿರ್ಬಹುದು, ಅದ್ರಿಂದ ನಾನು ಎಷ್ಟೊಂದು ಕಲ್ತಿದೀನಿ. ಆ ಅನುಭವಗಳು ಇರ್ತಿತ್ತಾ ನನಗೆ, ನಾನು ಈ ಫ್ಯಾಮಿಲಿಗೆ ಸೇರಿರ್ಲಿಲ್ಲಾ ಅಂದ್ರೆ? ಪ್ರತಿಯೊಂದು ಫ್ಯಾಮಿಲಿ ಕೂಡ ಅದರದ್ದೇ ಆದ ಚಾಲೆಂಜಸ್ ಹೊಂದಿರುತ್ತೆ. ಆ ಚಾಲೆಂಜಸ್‌ನಿಂದ ನಾವೇನು ಕಲಿತೀವಿ ಅನ್ನೋದು ಬಹಳ ಮುಖ್ಯ ಆಗುತ್ತೆ. ನಾನು ಆ ಎಲ್ಲ ಚಾಲೆಂಜಸ್‌ನಿಂದ ತುಂಬಾ ಕಲಿತಿದೀನಿ' ಎಂದಿದ್ದಾರೆ ಐಶ್ವರ್ಯಾ ಡಿಕೆಎಸ್ ಹೆಗಡೆ.
ಕೊನೆಯ ಸಂದರ್ಶನದಲ್ಲಿ ಪುನೀತ್ ನಟರಾದ ದರ್ಶನ್-ಸುದೀಪ್ ಬಗ್ಗೆ ಏನ್ ಹೇಳಿದ್ರು? ನಂಬೋದಕ್ಕೇ ಆಗಲ್ಲ!
ಸದ್ಯ ರಾಜ್ಯದ ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಅವರು ತಮ್ಮ ಕಾಲೇಜಿನ ದಿನಗಳಲ್ಲಿ ನಡೆದ ಕಥೆಯನ್ನು ಸಹ ಹೇಳಿಕೊಂಡಿದ್ದಾರೆ. ಐಶ್ವರ್ಯಾ ಕಾಲೇಜು ಓದುವಾಗ ಅವರ ತಂದೆ ಕಾಲೇಜಿನ ಚೇರ್‌ಮನ್ ಆಗಿದ್ದರಂತೆ. ಆದರೆ, ಶುರುವಿನಲ್ಲಿ ಆ ಸಂಗತಿ ಯಾರಿಗೂ ಗೊತ್ತಿರಲಿಲ್ಲ. ಆಗ ಸಹಜವಾಗಿಯೇ ಸಾಕಷ್ಟು ಜನರು ಫ್ರೆಂಡ್ಸ್ ಆಗಿದ್ದಾರೆ. ಆದರೆ, ಯಾವಾಗ ಐಶ್ವರ್ಯಾ ಅವರು ಚೇರ್‌ಮನ್ ಮಗಳು ಅಂತ ಗೊತ್ತಾಯ್ತೋ, ಆಗ ಹಲವರು ಅವರಿಂದ ಅಂತರ ಕಾಯ್ದುಕೊಳ್ಳಲು ಶುರುಮಾಡಿದ್ದರಂತೆ.
ಭವಿಷ್ಯ ಮೊದಲೇ ಗೊತ್ತಿತ್ತಾ? ಹೇಗಿದ್ರೂ ಇಲ್ಲಿ ಏನ್ ಬೇಕಾದ್ರೂ ಆಗ್ಬಹುದು ಅಂದಿದ್ರು ಧನಂಜಯ್!
ಜತೆಗೆ, ನಾನು ಚೆನ್ನಾಗಿ ಓದುತ್ತಿದ್ದರೂ, ಎಷ್ಟೇ ಮಾರ್ಕ್ಸ್ ತೆಗೆದುಕೊಂಡರೂ 'ಅವ್ಳು ಚೇರ್‌ಮನ್ ಮಗ್ಳು ಅಲ್ವಾ?' ಮಾರ್ಕ್ಸ್ ಕೊಡ್ತಾರೆ ಅವ್ಳಿಗೆ ಅಂತಾನೇ ಹೇಳೋರು. ಅದು ತಪ್ಪು ಅಂತ ನಾನು ಹೇಳಲ್ಲ. ನಿಜವಾಗಿ ಹೇಳಬೇಕೆಂದರೆ ನಾನು ಕಾಲೇಜಿಗೆ ಫಸ್ಟ್ ಡೇ ಹೋದಾಗ್ಲೇ ಗಾಡಿನ ಎಲ್ಲೋ ನಿಲ್ಸಿ ಎಲ್ಲರ ತರ ಕಾಲೇಜಿಗೆ ನಡ್ಕೊಂಡೇ ಹೋಗಿದ್ದೆ. ಆದ್ರೆ ಹೋಗ್ತಾ ಹೋಗ್ತಾ ಎಲ್ಲರಿಗೂ ಗೊತ್ತಾಗೋಯ್ತು ನಾನು ಚೇರ್‌ಮನ್ ಮಗಳು ಅಂತ. ಆಮೇಲೆ ಕಾಲೇಜಲ್ಲಿ ನನ್ನ ನೋಡೋ ರೀತಿನೇ ಬದಲಾಗಿ ಹೋಯ್ತು' ಎಂದಿದ್ದಾರೆ ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯಾ ಡಿಕೆಎಸ್ ಹೆಗಡೆ.
ಮಧ್ಯರಾತ್ರಿ ಕೋಣೆ ಬಾಗಿಲು ತಟ್ಟಿದ್ರು ಡಾ ರಾಜ್‌ಕುಮಾರ್; ಶಾಕ್ ಆಗಿ ಪ್ರೊಡ್ಯೂಸರ್ ಮಾಡಿದ್ದೇನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.